ಬಲ್ಲಾಳ್ ಭಾಗ್‌ನಲ್ಲಿ ಹಿಂದೂಗಳ ಮೇಲೆ ಹಲ್ಲೆ ಪ್ರಕರಣ: ಆರೋಪಿಗಳ ಶೀಘ್ರ ಬಂಧನಕ್ಕೆ ಅಗ್ರಹಿಸಿ ಪ್ರತಿಭಟನೆ
ಮಂಗಳೂರು: ಬಲ್ಲಾಳ್ ಭಾಗ್‌ನಲ್ಲಿ ಹಿಂದೂಗಳ ಮೇಲೆ ಅನ್ಯಧರ್ಮದವರಿಂದ ನಡೆದಿರುವ ದೌರ್ಜನ್ಯವನ್ನ ಖಂಡಿಸಿ, ಕೋಮುವಾದಿಗಳಿಂದ ಬಲ್ಲಾಳ್‌ಭಾಗ್ ರಕ್ಷಿಸಿ, ಜನಜಾಗೃತಿ ಪ್ರತಿಭಟನಾ ಸಭೆಯನ್ನ ಹಮ್ಮಿಕೊಳ್ಳಲಾಗಿತ್ತು. ಇನ್ನು ದೌರ್ಜನ್ಯ ನಡೆಸಿದ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ.
ಮಂಗಳೂರಿನ ಬಲ್ಲಾಳ್ ಭಾಗ್‌ನಲ್ಲಿ ಹಿಂದೂಗಳ ಮೇಲೆ ಅನ್ಯಧರ್ಮದವರಿಂದ ನಡೆದಿರುವ ದೌರ್ಜನ್ಯವನ್ನು ಖಂಡಿಸಿ, ಇಂದು ಬಲ್ಲಾಳ್‌ಭಾಗ್ ಫ್ರೆಂಡ್ಸ್ ನೇತೃತ್ವದಲ್ಲಿ ಕೋಮುವಾದಿಗಳಿಂದ ಬಲ್ಲಾಳ್‌ಭಾಗ್ ರಕ್ಷಿಸಿ, ಜನಜಾಗೃತಿ ಪ್ರತಿಭಟನಾ ಸಭೆಯನ್ನ ಹಮ್ಮಿಕೊಳ್ಳಲಾಗಿತ್ತು. ದೌರ್ಜನ್ಯ ನಡೆಸಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧನ ಮಾಡಬೇಕೆಂದು ಪ್ರತಿಭಟನಾ ನಿರತರ ಆಗ್ರಹಿಸಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ,ಸಂಘಟನೆ ಮೇಲೆ ವೈಯಕ್ತಿಕ ದ್ವೇಷವಿಲ್ಲ, ಸಮಾಜ ಸೇವೆ ಮಾಡುತ್ತಿರುವುದನ್ನ ಗೌರವಿಸುತ್ತೇವೆ. ಅದರೆ ಇಂತಹ ಕೃತ್ಯವನ್ನು ಬಿಟ್ಟು ಬಿಡಿ, ಮುಂದಿನ ದಿನಗಳಲ್ಲಿ ಯಾರೂ ಕಾರ್ಯಕರ್ತರು ಸಿಗಲ್ಲ, ಅದರೆ ಹಿಂದೂ ವಿರೋಧಿ ಚಟುವಟಕೆಯನ್ನ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ಹೇಳಿದರು. ಈ ರೀತಿಯ ಘಟನೆಯಾದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ, ಹಿಂದೂ ಜಾಗರಣ ವೇದಿಕೆ ಸೇರಿದಂತೆ ಬೇರೆ ಬೇರೆ ಸಂಘಟನೆ ಯಾವಾಗಲೂ ಬೆಂಬಲ ವ್ಯಕ್ತಪಡಿಸುತ್ತವೆ ಎಂದು ಹೇಳಿದರು.
ತದ ಬಳಿಕ ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಹರೀಶ್ ಶಕ್ತಿನಗರ ಮಾತನಾಡಿ, ಹಿಂದೂಗಳು ಸಂಘಟಿತವಾಗಿರಬೇಕು, ಸಂಘಟಿತವಾಗಿಲ್ಲ ಅದ್ರೆ ಇಂತಹ ಘಟನೆಗಳು ನಡೆಯುತ್ತದೆ. ಇದಕ್ಕೆ ಹೋರಾಟ ಮಾಡಬೇಕಾದರೆ ಹಿಂದೂಗಳು ಒಗ್ಗಾಟ್ಟಾಗಿ ಕೆಲಸ ಮಾಡಬೇಕೆಂದರು.
ಘಟನೆಗೆ ಸಂಬಂಧಿಸಿ ಈಗಾಗಲೇ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಈ ಘಟನೆಯನ್ನು ಅತೀ ಗಂಭೀರವಾಗಿ ಪರಿಗಣಿಸಿ ಪಾದರರ್ಶಕ ತನಿಖೆ ನಡೆಸಿ ಹಲ್ಲೆ ಕೃತ್ಯದ ಪ್ರತಿಯೊಂದು ಮಾಹಿತಿಗಳನ್ನು ಕಲೆ ಹಾಕಿ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಶಿಕ್ಷೆಗೊಳಪಡಿಸಬೇಕು. ಪಾರದರ್ಶಕವಾಗಿ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುವಂತೆ ಬಲ್ಲಾಳ್ ಭಾಗ್ ಫ್ರೆಂಡ್ಸ್‌ನ ಉಪಾಧ್ಯಕ್ಷ ರಕ್ಷಿತ್ ಕೊಟ್ಟಾರಿ ಅವರು ಆಗ್ರಹಿಸಿದ್ದರು.
ಈ ವೇಳೆ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್, ಬಜರಂಗದಳ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ಸಮಾಜಸೇವಕ ಸಂದೀಪ್ ಎಕ್ಕೂರು, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಪ್ರಚಾರ ಪ್ರಮುಖ್ ಸಂದೀಪ್ ಪಂಪ್‌ವೆಲ್, ಬಿಜೆಪಿ ಮಂಗಳೂರು ದಕ್ಷಿಣ ವಿಧಾಸಭಾ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಸಚಿನ್ ರೈ , ಸಮಾಜ ಸೇವಕ ನಂದನ್ ಮಲ್ಯ ಬಲ್ಲಾಳ್ ಭಾಗ್ ಫ್ರೆಂಡ್ಸ್‌ನ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ, ಸೆಕ್ರೆಟರಿ ರೋಹಿತ್ ಶೆಟ್ಟಿ, ಟ್ರಶರರ್ ವಿವೇಕ್ ಶೆಟ್ಟಿಗಾರ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.