ಬೆಳ್ಳಾರೆಯ ನೆಟ್ಟಾರು ಎಂಬಲ್ಲಿ ಗುಡ್ಡ ಕುಸಿತ

ಪುತ್ತೂರು -ಬೆಳ್ಳಾರೆ ರಾಜ್ಯ ಹೆದ್ದಾರಿಯ ನೆಟ್ಟಾರ್  ಎಂಬಲ್ಲಿ ಗುಡ್ಡ ಕುಸಿದು ರಾಜ್ಯ ಹೆದ್ದಾರಿಗೆ ಗುಡ್ಡದ ಮಣ್ಣು ಮತ್ತು ಮರ  ಅಪಾಯದ ಅಂಚಿನಲ್ಲಿ ಇರುವುದನ್ನು ಮನಗಂಡು ತಕ್ಷಣ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಬೆಳ್ಳಾರೆ ಗ್ರಾಮ ಪಂಚಾಯತಿ  ಪಿಡಿಒ ಅನುಸೂಯ, ಲೋಕೋಪಯೋಗಿ ಇಲಾಖೆಯ ಜೂನಿಯರ್ ಇಂಜಿನಿಯರ್ ಪರಮೇಶ್ವರ್, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಜೂನಿಯರ್ ಇಂಜಿನಿಯರ್ ಪ್ರಸಾದ್, ಹಾಗೂ ಪೆರುವಾಜೆ  ಅರಣ್ಯಧಿಕಾರಿ ಪ್ರಸಾದ್  ಗ್ರಾಮಕರಣಿಕರ ಪರವಾಗಿ ಗ್ರಾಮಸಹಾಯಕ ಯತೀಶ್ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ಹೊನ್ನಪ್ಪ, ಯುವಕ ಮಂಡಲದ ಸದಸ್ಯರಾದ ಪ್ರವೀಣ್ ನೆಟ್ಟಾರ್, ಶೈಲೇಶ್,  ಸುಜಿತ್, ಶಿವ ಮತ್ತು ಇತರ ಸದಸ್ಯರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ತಮ್ಮೊಂದಿಗೆ ಕೈಜೋಡಿಸಿದ ಅಕ್ಷಯ ಯುವಕ ಮಂಡಲದ ನೆಟ್ಟಾರ್ ಇದರ ಸದಸ್ಯರುಗಳನ್ನು ಲೋಕೋಪಯೋಗಿ ಇಲಾಖೆ ಜೂನಿಯರ್ ಇಂಜಿನಿಯರ್ ಪರಮೇಶ್ವರ್ ರವರು ತುಂಬು ಹೃದಯದಿಂದ ಶ್ಲಾಘಿಸಿದರು ಬೆಳ್ಳಾರೆ ಗ್ರಾಮ ಪಂಚಾಯಿತಿ ಪಿಡಿಓ ಅನುಸೂಯ ರವರು ಕಾರ್ಯಾಚರಣೆಯಲ್ಲಿ ತೊಡಗಿದ ಎಲ್ಲಾ ಅಧಿಕಾರಿಗಳಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದರು.

Related Posts

Leave a Reply

Your email address will not be published.