ಬೈಂದೂರಿನ ಗುಡ್ಡೆ ಹೋಟೆಲ್ ಫ್ರೆಂಡ್ಸ್ ಸರ್ಕಲ್‌ನಿಂದ ಸ್ವಾತಂತ್ರ್ಯೋತ್ಸವ ಆಚರಣೆ
ಬೈಂದೂರು ತಾಲೂಕಿನ ಗುಡ್ಡೆ ಹೋಟೆಲ್ ಫ್ರೆಂಡ್ಸ್ ಸರ್ಕಲ್ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೋವಿಡ್ ನಿಯಮಾವಳಿ ಪ್ರಕಾರ ಸ್ವಾತಂತ್ರ್ಯ ದಿನಾಚರಣೆ ಸರಳ ರೀತಿಯಲ್ಲಿ ನೆರವೇರಿತು.ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಯುವ ಉದ್ಯಮಿ ಕಿರಣ್ ಲೋಬೊ ಮಾತನಾಡುತ್ತಾ ನಮಗೆ ಸ್ವಾತಂತ್ರ್ಯ ಸಿಗಲು ಅದೆಷ್ಟೋ ಜನರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ ಅವರನ್ನು ಸ್ಮರಿಸ ಬೇಕಾದುದ್ದು ನಮ್ಮೇಲ್ಲರ ಕರ್ತವ್ಯವಾಗಿದೆ.ಇವತ್ತಿನ ಯುವ ಪೀಳಿಗೆ ಕೆಟ್ಟ ಚಟಗಳಿಗೆ ಬಲಿಬಿದ್ದು ತಮ್ಮ ಜೀವವನ್ನು ಹಾಗೂ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಮಾದಕ ವಸ್ತುಗಳನ್ನು ತ್ಯಜಿಸಿ ಸನ್ಮಾರ್ಗದಲ್ಲಿ ನಡೆದು ಉತ್ತಮ ಪ್ರಜೆಯಾಗಿ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದರು.
ಹಿರಿಯ ರಾಜಕಾರಣಿ ಮಾಜಿ ನಾಡಾ ಪಂಚಾಯತ್ ಅಧ್ಯಕ್ಷ ರಾಜೀವ್ ಶೆಟ್ಟಿಯವರು 75ನೇ ಸ್ವಾತಂತ್ರ್ಯ ದಿನಾಚರಣೆ ಉದ್ದೇಶಿಸಿ ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಸರ್ಕಾರದ ದಬ್ಬಾಳಿಕೆ ಹೇಗಿತ್ತು ಎಂಬುದನ್ನು ವಿವರಿಸುತ್ತಾ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನೀಯರನ್ನು ನೆನಪಿಸುತ್ತಾ, ದೇಶದಲ್ಲಿ ಇಂದು ಶಿಕ್ಷಣ, ವಾಣಿಜ್ಯ,ಕ್ರಷಿ, ವ್ಯವಹಾರದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ ಇದು ಭಾರತೀಯರಾದ ನಮಗೆಲ್ಲಾ ಹೆಮ್ಮೆ ಪಡುವ ವಿಷಯ.ದೇಶದ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಮತ್ತು ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಂಡು ದೇಶದ ಏಳಿಗೆಗೆ ಒಟ್ಟಾಗಿ ದುಡಿಯೋಣ ಎಂದರು.
ಧ್ವಜಾರೋಹಣ ಕಾರ್ಯಕ್ರಮದಲ್ಲಿ ಗುಡ್ಡೆ ಹೋಟೆಲ್ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಕಾಮೇಶ್, ಪ್ರವೀಣ್ ಶೆಟ್ಟಿ ಹೆಮ್ಮುಂಜೆ, ನಾಡಾ ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ್ ಆಚಾರಿ, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಹರೀಶ್ ಮೊಗವೀರ , ಹೋಟೆಲ್ ಉದ್ಯಮಿ ಸುಧೀರ್ ಪೂಜಾರಿ ಹಾಗೂ ಗುಡ್ಡೆ ಹೋಟೆಲ್ ಫ್ರೆಂಡ್ಸ್ ಸರ್ಕಲ್ ಸದಸ್ಯರು ಉಪಸ್ಥಿತರಿದ್ದರು.