ಬೈಂದೂರು : ಭಾರತ್ ಬಂದ್ ಬೆಂಬಲಿಸಿ ಪ್ರತಿಭಟನೆ
ಕಳೆದ 10 ತಿಂಗಳು ರೈತರು ಬೆಂಬಲ ಬೆಲೆ ಕಾಯ್ದೆಯಲ್ಲಿ ತರಬೇಕು ಎಂದು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದರೂ ಕೇಂದ್ರ ಸರಕಾರ ಮಾತ್ರ ಕಾಟಾಚಾರಕ್ಕಾಗಿ ರೈತ ಸಂಘಟನೆಗಳನ್ನು ಮಾತುಕತೆಗೆ ಆಹ್ವಾನಿಸುತ್ತದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.
ಅವರು ಬೈಂದೂರಿನ ಅಂಡರ್ ಪಾಸ್ ನಲ್ಲಿ ರೈತರ ಮೂರು ಕ್ರಷಿಕಾಯ್ದೆಗಳು,ಬೆಲೆ ಏರಿಕೆ, ಕಾರ್ಮಿಕರ ಸಂಹಿತೆಗಳನ್ನು ವಿರೋಧಿಸಿ ನಡೆದ ಭಾರತ್ ಬಂದ್ ಬೆಂಬಲಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಕ್ರಷಿಕೂಲಿಕಾರರ ಸಂಘಟನೆ ಜಿಲ್ಲಾಧ್ಯಕ್ಷ ವೆಂಕಟೇಶ ಕೋಣಿ ಪ್ರಾಸ್ತಾವಿಕವಿಗಿ ಮಾತನಾಡಿದರು. ಕಾಂಗ್ರೆ ಸ್ ಪಕ್ಷದ ಮುಖಂಡರಾದ ಮದನ್ ಕುಮಾರ್,ಪ್ರಕಾಶ್ಚಂದ್ರ ಶೆಟ್ಟಿ ಡಿಎಸ್ಎಸ್ ಮುಖಂಡರಾದ ದಯಾನಂದ,ಜೆಡಿಎಸ್ ಪಕ್ಷದ ಸಂದೇಶ್ ಭಟ್,ಪಡುಕೋಣೆ ವ್ಯವಸಹಾಯ ಸಂಘದ ಅಧ್ಯಕ್ಷರು,ಕಾರ್ಮಿಕ ಮುಖಂಡರಾದ ರಾಜೀವ ಪಡುಕೋಣೆ,ಕ್ರಷಿಕೂಲಿಕಾರ ಸಂಘದ ನಾಗರತ್ನ ನಾಡ,ಡಿವೈಎಫ್ಐ ಮುಖಂಡ ವಿಜಯ್, ಜನವಾದಿ ಮಹಿಳ ಸಂಘಟನೆಯ ಶೀಲಾವತಿ,ಕಟ್ಟಡ ಕಾರ್ಮಿಕರ ಸಂಘಟನೆಯ ಕಾರ್ಯದರ್ಶಿ ಗಣೇಶ ತೊಂಡೆಮಕ್ಕಿ,ಸಿಐಟಿಯು ತಾಲೂಕು ಸಂಚಾಲಕರಾದ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಮೊದಲಾದವರಿದ್ದರು.