ಮಂಗಳೂರಿನಲ್ಲಿ ಕಾರುಣ್ಯ ಸಮಾವೇಶ

ಪ್ರವಾದಿ ಜನ್ಮ ಮಾಸಾಚರಣೆಯ ಭಾಗವಾಗಿ ಆರ್ಥಿಕವಾಗಿ ಬಹಳ ಸಂಕಷ್ಟದಲ್ಲಿರುವ ಈ ಭಾಗದ ಆಯ್ದ ಸಾವಿರ ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ಒದಗಿಸುವ ಸಲುವಾಗಿ ಸಂಸ್ಥೆಯು ಕರುಣೆಯ ಕೈ ಎಂಬ ವಿಶಿಷ್ಠ ಯೋಜನೆಯನ್ನು ಕೈಗೆತ್ತಿಗೊಂಡಿದ್ದು, ಇದರ ಪ್ರಚಾರಾರ್ಥ ಅ.26 ರಂದು ಕಾರುಣ್ಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಾವೇರಿಯ ಮುಈನುಸ್ಸುನ್ನ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಕೆಎಂ ಮುಸ್ತಫಾ ಹೇಳಿದರು.

ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು.ಬಂದರು ಝೀನತ್ ಭಕ್ಷ್ ಯತೀಂ ಖಾನಾ ಹಾಲ್‌ನಲ್ಲಿ ತಾಜುಲ್ ಉಮರಾ ಬಾವಾ ಹಾಜಾರ್ ವೇದಿಕೆಯಲ್ಲಿ ಸಮಾವೇಶ ನಡೆಯಲಿದೆ.ಎಸ್ಸೆಸ್ಸೆಫ್ ರಾಷ್ಟ್ರೀಯ ಅಧ್ಯಕ್ಷ ಡಾ. ಫಾರೂಕ್ ನಈಮಿ ಕೊಲ್ಲಂ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಟಿಯಲ್ಲಿ ಡಾ. ಶೇಖ್ ಬಾವಾ, ಕೆಸಿ ಸುಲೈಮಾನ್, ಅಬ್ದುಲ್ ರಶೀದ್ ಹಾಜಿ, ಹಸನ್ ಪಾಂಡೇಶ್ವರ ಉಪಸ್ಥಿತರಿದ್ದರು.

Related Posts

Leave a Reply

Your email address will not be published.