ಮಂಗಳೂರಿನ ಕರ್ನಾಟಕ ಆಯುರ್ವೇದ ಆಸ್ಪತ್ರೆಯಲ್ಲಿ ಲಸಿಕಾ ಶಿಬಿರ
ಮಂಗಳೂರಿನ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕಸ್ಬಾ ಬೆಂಗ್ರೆ ಇದರ ಸಹಭಾಗಿತ್ವದಲ್ಲಿ ನಗರದ ಕರ್ನಾಟಕ ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ಲಸಿಕಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಮಂಗಳೂರಿನ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕಸ್ಬಾ ಬೆಂಗ್ರೆ ಇದರ ಸಹಭಾಗಿತ್ವದಲ್ಲಿ ನಗರದ ಆಶೋಕನಗರದ ಕರ್ನಾಟಕ ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ಲಸಿಕಾ ಶಿಬಿರ ಯಶಸ್ವಿಯಾಗಿ ನಡೆಯಿತು. ಸುಮಾರು 209 ಮಂದಿ ಈ ಶಿಬಿರದಲ್ಲಿ ಭಾಗವಹಿಸಿ ಲಸಿಕೆಯ ಪ್ರಯೋಜನಾ ಪಡೆದುಕೊಂಡರು. ಈ ವೇಳೆ SಅS ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಯು.ಕೆ. ಖಾಲಿದ್,ಸಹ ಆಡಳಿತಾಧಿಕಾರಿ ಸಾಜು ಎಮ್, ಕಾಲೇಜಿನ ಪ್ರಾಂಶುಪಾಲರಾದ ಡಾ.ರವಿ ರಾವ್. ಎಸ್, ಉಪ ಪ್ರಾಂಶುಪಾಲರಾದ ಡಾ.ಜೆಸಿಂತ ಮೀನ ಡಿಸೋಜ, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಉದಯ.ಡಿ.ಕೆ, ಸಹ ವೈದ್ಯಾಧಿಕಾರಿ ಡಾ.ಆಶಾ ಕೆ, ಅವರ ಮಾರ್ಗದರ್ಶನದೊಂದಿಗೆ ಈ ಕಾರ್ಯಕ್ರಮ ನಡೆಯಿತು. ಡಾ.ಅಕ್ಷತಾ ದಾಸ್, ಡಾ.ಮೀರಾ, ಡಾ.ಅಭಿಜಿತ್ ಹಾಗೂ ಡಾ.ಚರಣ್ ಅವರು ಸಹಕರಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಅಜಿತ್ ಕಾಮತ್ ಎಮ್, ಸಹ ಯೋಜನಾಧಿಕಾರಿ ಡಾ.ಶ್ರುತಿ ಎನ್ ಭಟ್ ಅವರು ಉಪಸ್ಥಿತರಿದ್ದರು.