ಮಂಜೇಶ್ವರ ಗ್ರಾ.ಪಂ. ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆ

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತಿನ ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಸರಕಾರಿ ಜಿಡಬ್ಲ್ಯುಎಲ್‍ಪಿ ಶಾಲೆ ಮಂಜೇಶ್ವರದಲ್ಲಿ ನಡೆಯಿತು.

ಕೋವಿಡ್ ಮಾನದಂಡಗಳನ್ನು ಪಾಲಿಸಿ ಕೊಂಡು ಮಂಜೇಶ್ವರ ಗ್ರಾಮ ಪಂಚಾಯತು ಉಪಾಧ್ಯಕ್ಷ ಮೊಹಮ್ಮದ್ ಸಿದ್ದೀಖ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಶಾಲಾ ಪರಿಸರದಲ್ಲಿ ಗಿಡ ನೀಡುವುದರೊಂದಿಗೆ ಮಂಜೇಶ್ವರ ಗ್ರಾ. ಪಂ. ಅಧ್ಯಕ್ಷೆ ಜೀನ್ ಲವೀನಾ ಮೊಂತೆರೋ ಉದ್ಘಾಟಿಸಿದರು. ಈ ಸಂದರ್ಭ ಬ್ಲಾಕ್ ಪಂ. ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹಮೀದ್ ಹೊಸಂಗಡಿ ಮುಖ್ಯ ಅತಿಥಿಯಾಗಿದ್ದರು.
ಮಂಜೇಶ್ವರ ಗ್ರಾಮ ಪಂಚಾಯತು ಕ್ಷೇಮಾಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಯಾದವ್ ಬಡಾಜೆ, ಜನಪ್ರತಿನಿಧಿಗಳಾದ ರಾಧಾ, ಲಕ್ಷ್ಮಣ , ಕುಸುಮ, ವಿನಯ ಬಾಸ್ಕರ, ಶಾಲಾ ಮುಖ್ಯೋಪಾಧ್ಯಾಯ ಸುಕೇಶ್, ಸ್ಟಾಫ್ ಸೆಕ್ರಟರಿ ಜಬ್ಬಾರ್, ಅಧ್ಯಾಪಕರುಗಳಾದ ಜ್ಯೋತಿ, ಜಯ ಲಕ್ಷ್ಮಿ ಸೇರಿದಂತೆ ಹಲವಾರು ಮಂದಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.

Related Posts

Leave a Reply

Your email address will not be published.