ಮರವಂತೆಯ ವರಾಹ ನರಸಿಂಹ ಸ್ವಾಮಿ ದೇವಸ್ಥಾನ: ಕರ್ಕಾಟಕ ಅಮಾವಾಸ್ಯೆ ಸಂಭ್ರಮ

ಬೈಂದೂರು ತಾಲೂಕು ಮರವಂತೆ ಮಹಾರಾಜ ವರಾಹ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ನಡೆಯುವ ಕರ್ಕಾಟಕ ಅಮಾವಾಸ್ಯೆ ಜಾತ್ರಾ ಮಹೋತ್ಸವವು ಜಿಲ್ಲಾಡಳಿತ ಹೇರಿರುವ ಕೋವಿಡ್ ನಿರ್ಬಂಧನುಸಾರ ಜಾತ್ರೆಗೆ ಅವಕಾಶ ನೀಡದೆ ಸ್ಥಳೀಯರಿಗಷ್ಟೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು.

ದೇವಸ್ಥಾನದಲ್ಲಿ ನಡೆಯುವ ಪೂಜೆಗೆ ಬರುವ ಭಕ್ತಾದಿಗಳನ್ನು ಸರತಿ ಸಾಲಿನಲ್ಲಿ, ಅಂತರ ಕಾಯ್ದುಕೊಂಡು ಸ್ಯಾನಿಟೈಸ್ ಮಾಡಿ ದೇಗುಲದ ಪ್ರವೇಶಕ್ಕೆ ಅನುವು ಮಾಡಿಕೊಡಲಾಯಿತು.

ದೇವಸ್ಥಾನದಲ್ಲಿ ನಡೆಯುವ ಪೂಜಾ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸಿಬ್ಬಂದಿಗಳು ಕಾರ್ಯ ನಿರ್ವಹಿಸಿದರು. ದೇವಸ್ಥಾನದಲ್ಲಿ ನಡೆಯುವ ಪೂಜೆ ವೀಕ್ಷಿಸಿ ಕೋವಿಡ್ ನಿಯಮಾವಳಿಗಳನ್ನು ಅನುಸರಿಸಬೇಕೆಂದು ಬೈಂದೂರು ತಹಸಿಲ್ದಾರ್ ಶೋಭಾಲಕ್ಷಿ ತಿಳಿಸಿದರು.

ಸ್ಥಳೀಯರಾದ ಸತೀಶ್ ಶೇಟ್ ಮಾತನಾಡುತ್ತಾ ಕೊರೋನದಿಂದಾಗಿ ಎರಡು ವರ್ಷಗಳಿಂದ ಯಾವುದೇ ಜಾತ್ರೆ ನಡೆದಿರುವುದಿಲ್ಲ.ಈ ದೇವಸ್ಥಾನದಕ್ಕೆ ಚಿಕ್ಕಂದಿನಿಂದಲೂ ನಾನು ಬರುತ್ತಿದ್ದೇನೆ. ಈ ಸ್ಥಳ ತುಂಬಾ ಕಾರಣಿಕ ಕ್ಷೇತ್ರವಾಗಿ ಪ್ರಸಿದ್ದಿ ಹೊಂದಿದೆ. ಇಲ್ಲಿ ವರ್ಷಂಪ್ರತಿ ಹೊಸದಾಗಿ ಮದುವೆಯಾದ ಮದುಮಕ್ಕಳು ಬಂದು ದೇವರ ದರ್ಶನ ಪಡೆದು ಪೂಜೆ ಸಲ್ಲಿಸುವುದು ವಿಶೇಷತೆಯಾಗಿದೆ.ಎರಡು ವರ್ಷಗಳಿಂದ ಇದು ಇಲ್ಲದಾಗಿದೆ. ಶ್ರೀ ದೇವರು ಈ ಎಲ್ಲಾ ಸಂಕಷ್ಟಗಳನ್ನು ದೂರಮಾಡಿ ಸಕಲ ಸೌಭಾಗ್ಯ ನೀಡುವಂತಾಗಲಿ ಎಂದರು.

Related Posts

Leave a Reply

Your email address will not be published.