ರಾಜಭವನಕ್ಕೆ ಬಾಂಬ್ ಕರೆ: ಪರಿಶೀಲಿಸಿ ಸುಳ್ಳು ಎಂದ ಪೋಲೀಸರು
ದೊಮ್ಮಲೂರು ಎನ್‍ಐಎ ಕೊಠಡಿಗೆ ಕರೆ ಮಾಡಿ ಬೆಂಗಳೂರಿನಲ್ಲಿರುವ ರಾಜ ಭವನಕ್ಕೆ ಬಾಂಬ್ ಇಡಲಾಗಿದೆ ಎಂದು ಹೇಳಿರುವುದು ಹುಸಿ ಕರೆ ಎಂದು ಪೋಲೀಸರು ತಿಳಿಸಿದರು.ಕರೆಯ ಸತ್ಯಾಸತ್ಯತೆ ಅರಿಯಲು ಬಾಂಬ್ ನಿಷ್ಕ್ರಿಯ ಪಡೆಯೊಂದಿಗೆ ರಾಜ ಭವನಕ್ಕೆ ಧಾವಿಸಿದರು. ಪರಿಶೀಲಿಸಿ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.