ವೆಲ್ಫೇರ್ ಅಸೋಸಿಯೇಷನ್ ರಾಣಿಪುರ ಸಂಘಟನೆ ಉದ್ಘಾಟನೆ

ಉಳ್ಳಾಲ: ವೆಲ್ಫೇರ್ ಅಸೋಸಿಯೇಷನ್ ರಾಣಿಪುರ ಇದರ ಉದ್ಘಾಟನಾ ಸಮಾರಂಭ ಮುನ್ನೂರು ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ನಡೆಯಿತು. ರಾಣಿಪುರ ಮೇರಿ ಚರ್ಚ್‌ನ ಧರ್ಮಗುರು ಜಯಪ್ರಕಾಶ್ ಡಿಸೋಜ ದೀಪ ಬೆಳಗಿಸಿ ವೆಲ್ಫೇರ್ ಅಸೋಸಿಯೇಷನ್ ರಾಣಿಪುರ ಸಂಸ್ಥೆಗೆ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು ಸೇವೆಯ ಮೂಲಕ ಸಮಾಜದ ಅಭ್ಯುದಯಕ್ಕೆ ಒಂದು ಸಂಘಟನೆ. ಸೇವೆಯ ಆರಂಭದದಿಂದಲೇ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು ಸಮಾಜದ ಅವಕಾಶಗಳನ್ನು ಪೂರೈಸಲು ಸಂಘಟನೆ ಶ್ರಮಿಸಲಿ ಎಂದು ಹೇಳಿದರು.

ರಾಣಿಪುರ ಋಷಿವನ ಸಂಸ್ಥೆಯ ನಿರ್ದೇಶಕ ವಿಲ್ಫ್ರೆಡ್ ರಾಡ್ರಿಗಸ್ ಸಂಘಟನೆಯ ಲೋಗೊ ಬಿಡುಗಡೆಗೊಳಿಸಿದರು. ರಾಣಿಪುರ ಕಾನ್ವೆಂಟ್ ಮುಖ್ಯಸ್ಥೆಸಿಸ್ಟರ್ ಮೀನಾ ಸಂಘಟನೆಯ ಸಾಮಾಜಿಕ ಜಾಲತಾಣಗಳನ್ನು ಅನಾವರಣಗೊಳಿಸಿದರು. ಈ ಸಂದರ್ಭ ಕಿಡ್ನಿ ಶಸ್ತ್ರಚಿಕಿತ್ಸೆ ಗೆ ಒಳಪಟ್ಟಿರುವ ಸ್ವೀಟಿ ಮೆಲ್ವಿಟಾ ಡಿಸೋಜ ಇವರಿಗೆ ರೂ. 5೦,೦೦೦ ಸಹಾಯಧನವನ್ನು ಸಂಘಟನೆ ವತಿಯಿಂದ ಘೋಷಣೆ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ಮುನ್ನೂರು ಗ್ರಾ.ಪಂ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ, ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಲ್ವಿನ್ ಡಿಸೋಜ,ಫೆಲಿಕ್ಸ್ ಮೊಂತೇರೋ,ಸಂಸ್ಥೆ ಅಧ್ಯಕ್ಷ ಜೋಸೆಫ್ ಪಾವ್ಲ್ ಜೀವನ್ ಫೆರಾವೋ. ಸಂಘಟನೆ ಉಪಾಧ್ಯಕ್ಷ ಎರಾಲ್ಡ್ ಲೋಬೊ, ಕಾರ್ಯದರ್ಶಿ ರೊನಾಲ್ಡ್ ಕುವೆಲ್ಹೋ, ಪ್ರವೀಣ್ ಡಿಸೋಜ, ಟೈಟಸ್ ಡಿಸೋಜ ಉಪಸ್ಥಿತರಿದ್ದರು.

Related Posts

Leave a Reply

Your email address will not be published.