ಹಿರಿಯ ಕಾಂಗ್ರೇಸಿಗರು, ಸಹಕಾರಿ ದುರೀಣರಾದ ಗಂಜಿಮಠ ನಾರಾಯಣ ಪೂಜಾರಿ ನಿಧನ

ಹಿರಿಯ ಕಾಂಗ್ರೇಸಿಗರು, ಸಹಕಾರಿ ದುರೀಣರಾದ ಗಂಜಿಮಠ ನಾರಾಯಣ ಪೂಜಾರಿಯವರು ನಿನ್ನೆ ರಾತ್ರಿ ನಿಧನ ಹೊಂದಿರುತ್ತಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಮತ್ತು ಕಾಂಗ್ರೆಸ್ ನಾಯಕ ಗಣೇಶ್ ಪೂಜಾರಿ ಸಹಿತ 4 ಗಂಡು ಮತ್ತು 2 ಹೆಣ್ಣು ಮಕ್ಕಳನ್ನು ಅಗಲಿರುತ್ತಾರೆ.ಶ್ರೀಯುತರು ಸುಮಾರು 18 ವರ್ಷಗಳ ಕಾಲ ಗಂಜಿಮಠ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಮತ್ತು ಸುಮಾರು 30 ವರ್ಷಗಳ ಕಾಲ ಗ್ರಾಹಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಹಾಗೂ ದ. ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾಗಿ ಸುಮಾರು 15 ವರ್ಷ ಸೇವೆ ಸಲ್ಲಿಸಿರುತ್ತಾರೆ. ಅದಲ್ಲದೇ ಮೂರ್ತೆದಾರರ ಮಹಾ ಮಂಡಲದ ಅಧ್ಯಕ್ಷರಾಗಿ ಕೂಡ ಕೆಲಸ ಮಾಡಿರುತ್ತಾರೆ. ಉಭಯ ಜಿಲ್ಲೆಯ ನಾಯಕರ ಒಲವು ಗಳಿಸಿದ್ದ ಅವರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ, ವೀರಪ್ಪ ಮೊಯಿಲಿ, ಕೇಂದ್ರ ಸಚಿವರಾದ ಜನಾರ್ದನ ಪೂಜಾರಿ, ಆಸ್ಕರ್ ಫೆರ್ನಾಂಡಿಸ್ ಹಾಗೂ ಮಾಜಿ ಸಚಿವರಾದ ರಮಾನಾಥ್ ರೈ, ವಿನಯ ಕುಮಾರ್ ಸೊರಕೆ ಯವರ ನಿಕಟವರ್ತಿಯಾಗಿದ್ದರು.

Related Posts

Leave a Reply

Your email address will not be published.