ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಮಂಗಳೂರಿನಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವರವರ ಅಭಿಪ್ರಾಯ, ಹೇಳಿಕೆ ಕೊಡುವಂತಹ ಹಕ್ಕು, ಅವಕಾಶಗಳಿವೆ. ಅದರಂತೆ ಸ್ವಾಮೀಜಿಗಳು, ಹಿರಿಯರು ತಮ್ಮ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರೆ, ಅದನ್ನು ಗೌರವಿಸಬೇಕಾದ್ದು ಅನಿವಾರ್ಯ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ಅವರ ಆರೋಗ್ಯ ವಿಚಾರಿಸಿ ಮಾಧ್ಯಮ ದವರೊಂದಿಗೆ ಮಾತಾನಾಡಿದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ವ್ವವಸ್ಥಿತವಾಗಿ ಆಡಳಿತ ನಡೆಯುತ್ತಿದೆ ಎಂದರು.

ಭಾರತೀಯ ಜನತಾ ಪಾರ್ಟಿಯ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ, ನಮ್ಮನ್ನು ಬೆಳೆಸಿದ ಪಾರ್ಟಿ, ಪಾರ್ಟಿಯನ್ನು ಕಟ್ಟಿ ಬೆಳೆಸಿದ ಹಿರಿಯರು ನಮಗೆ ಅವರ ಅನುಭವದ ಮಾರ್ಗದರ್ಶನ ಮಾಡಿ, ನಮ್ಮ ಕೆಲಸಗಳಿಗೆ ಪ್ರೇರಣೆ ನೀಡಿ, ನಮ್ಮಂತಹ ಸಾಮಾನ್ಯ ಕಾರ್ಯಕರ್ತರಿಗೆ ಬಹುದೊಡ್ಡ ಜವಾಬ್ದಾರಿಗಳನ್ನು ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು. ನಾನು ಮತ್ತು ನನ್ನಂಥವರು, ನಮ್ಮ ಹಿರಿಯರು, ನಮ್ಮ ಹೈಕಮಾಂಡ್, ನಮ್ಮ ಪಾರ್ಟಿ, ನಮ್ಮ ರಾಜ್ಯಾಧ್ಯಕ್ಷರು, ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ಮಾತ್ರ ನಾವು ಬದ್ಧ. ಯಾರ್ಯಾರು ಏನೇನು ಹೇಳಿಕೆ ನೀಡುತ್ತಾರೋ ಅದನ್ನು ಗೌರವಿಸೋಣ  ಎಂದರು.

Related Posts

Leave a Reply

Your email address will not be published.