Home 2022 August (Page 25)

ಮಸೂದ್ ಮತ್ತು ಫಾಸಿಲ್ ಪ್ರಕರಣವನ್ನು ಎನ್ಐಎ ಗೆ ಕೊಟ್ಟು ಮುಖ್ಯಮಂತ್ರಿ ರಾಜ ಧರ್ಮ ಪಾಲಿಸಲಿ:-ಎಸ್‌ಡಿಪಿಐ

ದ.ಕ ಜಿಲ್ಲೆಯ ಬೆಳ್ಳಾರೆ ಸಮೀಪದ ಕಳಂಜ ಮಸೂದ್ ಮತ್ತು ಸುರತ್ಕಲ್‌ನ ಫಾಝಿಲ್ ಕೊಲೆ ಪ್ರಕರಣವನ್ನು ಕೂಡ ಪ್ರವೀಣ್ ಪ್ರಕರಣದಂತೆ ಎನ್‌ಐಎ ಗೆ ವಹಿಸಿ ಮುಖ್ಯ ಮಂತ್ರಿ ರಾಜ ಧರ್ಮ ಪಾಲಿಸಲಿ ಎಂದು ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ಆಗ್ರಹಿಸಿದ್ದಾರೆ.ಯಾವುದೇ ಕೊಲೆಯು ಸಮರ್ಥನೀಯವಲ್ಲ ಮೂರು ಕೊಲೆಯು

ಸುಳ್ಯ SKSSF ಪರಿಹಾರ ಕಾರ್ಯಾಚರಣೆ

ಸುಳ್ಯ ತಾಲೂಕಿನ ‌ಸಂಪಾಜೆ ಗ್ರಾಮದಲ್ಲಿ ಜಲಸ್ಫೋಟದಿಂದ ಹಾನಿಯಾದ ಪ್ರದೇಶದಲ್ಲಿ ಪರಿಹಾರ ಕಾರ್ಯಾಚರಣೆ ಯಲ್ಲಿ SKSSF ವಿಖಾಯ ಕಾರ್ಯಕರ್ತರು ತೊಡಗಿದ್ದಾರೆ. ನೀರಿನಿಂದ ಮುಳುಗಿದ್ದ ಮನೆಗಳ ಸ್ವಚ್ಚತೆ, ಕರೆಂಟ್ ಲೈನ್ ದುರಸ್ತಿ , ರಾಷ್ಟ್ರೀಯ ಹೆದ್ದಾರಿಗೆ ಬಿದ್ದಿರುವ ಮರಗಳ ತೆರವು, ಇನ್ನಿತರ ಪರಿಹಾರ ಕಾರ್ಯಗಳನ್ನು ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್

ಸಂಪಾಜೆ-ಕೊಯನಾಡು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಪಯಶ್ವಿನಿ ನದಿ

ಸಂಪಾಜೆ, ಕಲ್ಲುಗುಂಡಿ ಮತ್ತು ಕೊಯನಾಡು ಭಾಗದಲ್ಲಿ ನಿರಂತರ ಎರಡನೇ ದಿನವೂ ರಾತ್ರಿ ವೇಳೆ ಮಹಾಮಳೆ ಮುಂದುವರಿದಿತ್ತು. ರಾತ್ರಿ ಸುರಿದ ಧಾರಾಕಾರ ಮಳೆಗೆ ಪಯಸ್ವಿನಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹದಿಂದಾಗಿ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡು ವಾಹನಗಳ ಸಂಚಾರದಲ್ಲಿ ಅಡಚಣೆ ಉಂಟಾಗಿತ್ತು. ನದಿಪಾತ್ರದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು

ಕೋಮು ಸೌಹಾರ್ದತೆಯನ್ನು ಮೆರೆದ ಸೋಮಶೇಖರ್

ಭಾರೀ ಮಳೆಯಿಂದ ಹರಿಹರ ಪಲ್ಲತ್ತಡ್ಕದಲ್ಲಿ ರಾಶಿ ಬಿದ್ದ ಮರದ ದಿಮ್ಮಿಗಳನ್ನು ತೆರವು ಮಾಡುತ್ತಿದ್ದ ಕ್ರೇನ್ ಆಪರೇಟರ್ ಓರ್ವರು ಹೊಳೆಯ ಪಕ್ಕದಲ್ಲಿ ನಿಂತಿದ್ದ ವೇಳೆ ನೀರಿಗೆ ಬಿದ್ದಿದ್ದು, ಈ ವೇಳೆ ಯುವಕನೋರ್ವ ನದಿಗೆ ಹಾರಿ ಅವರನ್ನು ರಕ್ಷಿಸಿದ ಘಟನೆ ನಡೆದಿದೆ. ಪಂಜ ಸಮೀಪದ ಪಡ್ಪಿನಂಗಡಿ ನಿವಾಸಿ ಶರೀಫ್ ಎಂಬವರ ಕ್ರೇನ್ ಹಾಗೂ ಸ್ಥಳೀಯ ನಿವಾಸಿಯೋರ್ವರ ಜೆಸಿಬಿ

ಸರಕಾರಿ ಲೇಡಿಗೋಶನ್ ಆಸ್ಪತ್ರೆ : ಕಾನೂನು ಅರಿವು ಮಾಹಿತಿ ಕಾರ್ಯಾಗಾರ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸರಕಾರಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಮತ್ತು ಸಖಿ ಒನ್ ಸ್ಟಾಪ್ ಸೆಂಟರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸಂತ್ರಸ್ತ ಪರಿಹಾರ ಕಾರ್ಯಕ್ರಮ ಮತ್ತು ಕಾನೂನು ಅರಿವು ಕಾರ್ಯಾಗಾರ ಸರಕಾರಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಜಿಲ್ಲಾ

ಸುಬ್ರಹ್ಮಣ್ಯ ಮೃತ ಮಕ್ಕಳ ಮನೆಗೆ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ರವರು ಭೇಟಿ

ಸುಬ್ರಹ್ಮಣ್ಯದಲ್ಲಿ ದುರಂತ ಸಂಭವಿಸಿ ಮೃತಪಟ್ಟ ಮಕ್ಕಳ ಮನೆಗೆ ಉಸ್ತುವಾರಿ ಸಚಿವ ಸುನಿಲ್ ರವರು ಇಂದು ಭೇಟಿ ನೀಡಿದರು.ಮನೆಗಾಗಿ 95 ಸಾವಿರ ನೀಡಿದ್ದೇವೆ. ಇನ್ನು ಮನೆ ಕಟ್ಟುವುದಿದ್ರೆ 4 ಲಕ್ಷ ಕೊಡಲಾಗುವುದು, ಅಂಗಡಿಗಳಿಗೆ ನೀರು ನುಗ್ಗಿ ಹಾನಿ ಯಾಗಿದ್ರೆ ಹಣ ಕೊಡುವ ಪ್ರಾವಿಶನ್ ಇಲ್ಲ, ಆದ್ರೂ ಮುಖ್ಯ ಮಂತ್ರಿಗಳ ಗಮನಕ್ಕೆ ತಂದು ವಿಶೇಷ ಪ್ಯಾಕೇಜ್ ಘೋಷಣೆ ನೀಡಿ

ಉಪ್ಪಿನಂಗಡಿ: ಕಾರು ಮತ್ತು ಬಸ್‌ ಅಪಘಾತ ಇಬ್ಬರು ಗಂಭೀರ

ಉಪ್ಪಿನಂಗಡಿ : ಅ 2 : ಕಾರು ಮತ್ತು ಬಸ್‌ ಮಧ್ಯೆ ಅಪಘಾತ ಸಂಭವಿಸಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ಮಂಗಳವಾರ ( ಅ .2) ಸಂಜೆ ಸಂಭವಿಸಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕಡಬ ತಾಲೂಕಿನ ರಾಮಕುಂಜ ನಿವಾಸಿಗಳಾದ ಉಪನ್ಯಾಸಕ ಗೋವಿಂದರಾಜ್‌ ಶರ್ಮಾ(32) ಮತ್ತು ಓಂಕಾರ್‌ ಪ್ರಸಾದ್‌ (30) ಗಾಯಗೊಂಡವರು .

ದಕ್ಷಿಣ ಕನ್ನಡ ಜಿಲ್ಲೆ ರಾತ್ರಿ ನಿರ್ಬಂಧ ಮತ್ತೆ 2 ದಿನ ಮುಂದುವರಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಹೇರಲಾಗಿರುವ ರಾತ್ರಿ ನಿರ್ಬಂಧವನ್ನು ಇನ್ನೂ ಎರಡು ದಿನಗಳವರೆಗೆ ಮುಂದುವರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶಿಸಿದ್ದಾರೆ.ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖಾ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆಯ ಕೋರಿಕೆಯಂತೆ ನಿರ್ಬಂಧವನ್ನು ಆ.5ರ ಬೆಳಗ್ಗೆ 6 ಗಂಟೆವರೆಗೆ

ಸುಳ್ಯ ಮತ್ತು ಕಡಬ ತಾಲೂಕು ಭಾರೀ ಮಳೆ : ಜಿಲ್ಲಾಧಿಕಾರಿ ಭೇಟಿ

ನಿನ್ನೆ ಸುರಿದ ಮಳೆಯಿಂದಾಗಿ ಹಾನಿಗೊಳಗಾದ ಸುಳ್ಯ ಹಾಗೂ ಕಡಬ ತಾಲೂಕುಗಳಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾತ್ರಿ ಗುಡ್ಡ ಕುಸಿದು ಇಬ್ಬರು ಮಕ್ಕಳು ಮೃತಪಟ್ಟ ಸುಬ್ರಹ್ಮಣ್ಯ ಸಮೀಪದ ಪರ್ವತಮಿಖಿ ಘಟನಾ ಸ್ಥಳಕ್ಕೂ ಜಿಲ್ಲಾಧಿಕಾರಿ ಭೇಟಿ ನೀಡಿದರು. ಅಧಿಕಾರಿಗಳು, ಸ್ಥಳೀಯಾಡಳಿತ ಅಧಿಕಾರಿಗಕಳಿಂದ ಮಾಹಿತಿ ಪಡೆದರು.

ಜೀವಂತ ನಾಗರ ಹಾವಿಗೆ ತನು ಎರೆದು ನಾಗರಪಂಚಮಿ ಆಚರಣೆ

ಕಾಪು ಸಮೀಪದ ಮಜೂರಿನ ಗೋವರ್ಧನ ಭಟ್ ಅವರು ಜೀವಂತ ನಾಗರ ಹಾವಿಗೆ ತನು ಎರೆದು,ಆರತಿ ಬೆಳಗಿಸಿ ಮಂಗಳವಾರ ನಾಗರಪಂಚಮಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಪ್ರತೀ ವರ್ಷ ನಾಗರ ಪಂಚಮಿಯಂದು ತನ್ನ ಮನೆಯಲ್ಲಿ ಶುಶ್ರೂಷೆಯಲ್ಲಿರುವ ನಾಗರ ಹಾವುಗಳಿಗೆ ತನು ಎರೆಯುವ ಗೋವರ್ಧನ ಭಟ್ ಅವರು ಈ ಬಾರಿ ಒಂದು ಹಾವಿಗೆ ಮನೆಯವರ ಜೊತೆಗೂಡಿ ತನು ಎರೆದು, ಪೂಜೆ ಮಾಡಿ, ನಾಗರ