ಜೀವಂತ ನಾಗರ ಹಾವಿಗೆ ತನು ಎರೆದು ನಾಗರಪಂಚಮಿ ಆಚರಣೆ

ಕಾಪು ಸಮೀಪದ ಮಜೂರಿನ ಗೋವರ್ಧನ ಭಟ್ ಅವರು ಜೀವಂತ ನಾಗರ ಹಾವಿಗೆ ತನು ಎರೆದು,ಆರತಿ ಬೆಳಗಿಸಿ ಮಂಗಳವಾರ ನಾಗರಪಂಚಮಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಪ್ರತೀ ವರ್ಷ ನಾಗರ ಪಂಚಮಿಯಂದು ತನ್ನ ಮನೆಯಲ್ಲಿ ಶುಶ್ರೂಷೆಯಲ್ಲಿರುವ ನಾಗರ ಹಾವುಗಳಿಗೆ ತನು ಎರೆಯುವ ಗೋವರ್ಧನ ಭಟ್ ಅವರು ಈ ಬಾರಿ ಒಂದು ಹಾವಿಗೆ ಮನೆಯವರ ಜೊತೆಗೂಡಿ ತನು ಎರೆದು, ಪೂಜೆ ಮಾಡಿ, ನಾಗರ ಪಂಚಮಿ ಆಚರಿಸಿದರು.

ಕಾಪು ಪರಿಸದಲ್ಲಿ ಅಪಾಯಕ್ಕೆ ಸಿಲುಕಿ ಗಾಯಗೊಳ್ಳುವ ನಾಗರ ಹಾವುಗಳನ್ನು ಮನೆಗೆ ತಂದು ಶುಶ್ರೂಷೆ ನೀಡಿ, ಆರೈಕೆ ಮಾಡುವ ಕಾಯಕದಲ್ಲಿ ನಿರತರಾಗಿರುವ ಗೋವರ್ಧನ ಭಟ್ ಅವರು ವೃತ್ತಿಯಲ್ಲಿ ಎಲೆಕ್ಟ್ರೀಶಿಯನ್ ಆಗಿದ್ದು, ಕೇಟರಿಂಗ್ ಉದ್ಯಮ ನಡೆಸುತ್ತಿದ್ದಾರೆ.
