Home 2023 August (Page 14)

ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯು ಬ್ಯಾಂಕ್ ಆಫ್ ಬರೋಡದಲ್ಲಿ ಬಹು ಉಪಕ್ರಮಗಳೊಂದಿಗೆ ಆಚರಣೆ

ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡ ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ರಾಷ್ಟ್ರವ್ಯಾಪಿ ಉಪಕ್ರಮಗಳೊಂದಿಗೆ ಆಚರಿಸಿತು.ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀ ದೇಬದತ್ತ ಚಂದ್ ಮಾತನಾಡಿ, ನಾವು ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವಾಗ ಬ್ಯಾಂಕ್ ಆಫ್ ಬರೋಡಾ,

ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿ ಕಾಮಗಾರಿ ಕುಂಠಿತ: ಕರವೇ ನೇತೃತ್ವದಲ್ಲಿ ಪ್ರತಿಭಟನೆ

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳೆದ ಏಳು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಬೈರಾಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಅಧಿಕಾರಿಗಳು ಆಗಮಿಸುವಂತೆ ಪ್ರತಿಭಟನಾಕಾರರು

ಮೂಡುಬಿದಿರೆ: ಓಮ್ನಿ ಕಾರಿಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ: ಅಪಾಯದಿಂದ ಪಾರಾದ ಪ್ರಯಾಣಿಕರು

ಮೂಡುಬಿದಿರೆಯ ಹಂಡೇಲು ಬಳಿಯಲ್ಲಿ ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಹೊರಗೋಡಿ ಅಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕದಳದ ಸಿಬಂದಿಗಳು ತಕ್ಷಣ ಧಾವಿಸಿ ಬಂದು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರಿನಲ್ಲಿದ್ದ ಗ್ಯಾಸ್ ಸ್ಪೋಟಗೊಂಡು ಬೆಂಕಿ ಹಿಡಿದಿರಬೇಕೆಂದು ಶಂಕಿಸಲಾಗಿದೆ.

ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಟೂರ್ನಮೆಂಟ್ ಸಮಾರೋಪ

ದ.ಕ. ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್‌ನ ಆಶ್ರಯದಲ್ಲಿ ನಡೆದ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಟೂರ್ನಮೆಂಟ್‌ನ ಪದವಿ ವಿಭಾಗದಲ್ಲಿ ಯೆನೆಪೋಯ ಕಾಲೇಜು ವಿದ್ಯಾರ್ಥಿಗಳ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ನೆಹರೂ ಮೈದಾನದ ಪಕ್ಕದ ಫುಟ್ಬಾಲ್ ಗ್ರೌಂಡ್‌ನಲ್ಲಿ ನಡೆದ ಫೈನಲ್‌ನಲ್ಲಿ ಯೆನಪೋಯ ಕಾಲೇಜು ತಂಡ 1-0 ಅಂತರದಲ್ಲಿ ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜು

ಶಿಥಿಲಾವಸ್ಥೆಯಲ್ಲಿ ಕರ್ನಾಟಕ-ಕೇರಳ ಸಂಪರ್ಕದ ಕೊಂಡಿ

ಪುತ್ತೂರು; ಎರಡು ಪ್ರಬಲ ರಾಜ್ಯಗಳ ಸಂಪರ್ಕದ ಕೊಂಡಿಯಾಗಿರುವ ಕಿರುಸೇತುವೆಯೊಂದು ಯಾರೂ ಕೇಳುವವರಿಲ್ಲದೆ ಅನಾಥಪ್ರಜ್ಞೆಯಿಂದ ಶಿಥಿಲಗೊಂಡು ಬಳಲುತ್ತಿದೆ. ಆರ್ಥಿಕ ಮತ್ತು ಶೈಕ್ಷಣಿಕವಾಗಿ ಬಲಾಡ್ಯವಾಗಿರುವ ಈ ರಾಜ್ಯಗಳ ನಡುವೆ ಈ ಕಿರುಸೇತುವೆಗೆ ಕಾಯಕಲ್ಪವಾಗದೆ ಇಲ್ಲಿ ಸಂಚರಿಸುವ ವಾಹನಗಳಿಗೆ ಮಾರಕ ಪ್ರದೇಶವಾಗಿ ಮಾರ್ಪಟ್ಟಿದೆ. ಸುಮಾರು 42 ವರ್ಷಗಳ ಹಿಂದೆ

ಬ್ರಹ್ಮಾವರ ; ಅಟೋ ಚಾಲಕರು ಸೂಕ್ತ ದಾಖಲೆ ಅಟೋದಲ್ಲಿರಿಸಿಕೊಳ್ಳಿ – ಠಾಣಾಧಿಕಾರಿ ರಾಜಶೇಖರ

ಬ್ರಹ್ಮಾವರ ರಥ ಬೀದಿಯ ಬಳಿ ಆರ್. ಕೆ. ಶೆಟ್ಟಿಯರಿಂದ ಕೊಡುಗೆಯಾಗಿ ನೂತನವಾಗಿ ರಚನೆಯಾದ ಅಯ್ಯಪ್ಪ ರಿಕ್ಷಾ ನಿಲ್ದಾಣವನ್ನು ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿ ರಾಜಶೇಖರ ವಂದಲಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆಟೋ ಚಾಲಕರು ಯಾವತ್ತೂ ಸೂಕ್ತ ದಾಖಲೆಯನ್ನು ಅಟೋದಲ್ಲಿ ಇರಿಸಿಕೊಳ್ಳಿ. ದೇಶದ ಬಹತೇಕ ಜನರು ಅಟೋ ರಿಕ್ಷಾವನ್ನು ನಂಬಿಕೊಂಡಿದ್ದಾರೆ. ಪ್ರಯಾಣಿಕರ

ಟಯರ್ಸ್ ಉದ್ಯಮಿ ಪೂವಪ್ಪ ಕುಂದರ್ ನಿಧನ

ಮೂಡುಬಿದಿರೆ : ಕಳೆದ ಹಲವು ವರ್ಷಗಳಿಂದ ಟಯರ್ ಉದ್ಯಮವನ್ನು ನಡೆಸುತ್ತಾ ಬಂದಿರುವ ಹನುಮಾನ್ ಟಯರ‍್ಸ್ ನ ಮಾಲಕ, ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಸಾಮಾಜಿಕ ಕಾರ್ಯಕರ್ತ ಪೂವಪ್ಪ ಕುಂದರ್ ಅವರು ಮಂಗಳವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೂಲತ: ಪರಂಗಿಪೇಟೆಯ ನಿವಾಸಿಯಾಗಿದ್ದ ಪೂವಪ್ಪ ಕುಂದರ್ ಮೂಡುಬಿದಿರೆಗೆ ಉದ್ಯೋಗವನ್ನು ಅರಸಿಕೊಂಡು ಬಂದು

ಉಳ್ಳಾಲ – ಪುತ್ರನ ಆತ್ಮಹತ್ಯೆ ಬೆನ್ನಲ್ಲೇ, ತಂದೆಯೂ ಆತ್ಮಹತ್ಯೆ

ಉಳ್ಳಾಲ : ಕೇರಳ ಕುಂಬಳೆ ಬಳಿಯ ಬಂಬ್ರಾಣ ಕಲ್ಕುಲ ನಿವಾಸಿ ಕಲ್ಲಿನ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಲೋಕೇಶ್ (52) ಎಂಬವರ ಮೃತದೇಹ ಸೋಮವಾರ ಬೆಳಿಗ್ಗೆ ಉಳ್ಳಾಲ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ. ಪುತ್ರನೂ ಆತ್ಮಹತ್ಯೆ ನಡೆಸಿದ 32 ದಿನಗಳ ಅಂತರದಲ್ಲಿ ತಂದೆಯೂ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಪುತ್ರ ರಾಜೇಶ್ (26) ಕಳೆದ ಜು. 10 ರಂದು ನಾಪತ್ತೆಯಾಗಿದ್ದು, ಬಳಿಕ

ಕುಲಾಲ ಸಂಘ ಮುಂಬಯಿ ಮಹಿಳಾ ವಿಭಾಗದ ಆಶ್ರಯದಲ್ಲಿ, ”ಆಟಿದ ಒಂಜಿ ದಿನ” ಕಾರ್ಯಕ್ರಮ

ಮುಂಬಯಿ : ಕುಲಾಲ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ಅ. 6 ರಂದು ಆಟಿದ ಒಂಜಿ ದಿನ ಕಾರ್ಯಕ್ರಮವನ್ನು ಕುರ್ಲಾ ಪೂರ್ವ ಬಂಟರ ಭವನದ ಅನೆಕ್ಸ್ ಹಾಲ್ ನಲ್ಲಿ ಕುಲಾಲ ಸಂಘ ಮುಂಬಯಿ ಇಲ್ಲಿ ಅಧ್ಯಕ್ಷರಾದ ರಘು ಎ. ಮೂಲ್ಯ ಪಾದೆ ಬೆಟ್ಟು, ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕುಲಾಲ ಸಂಘ ಮುಂಬಯಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ಮಮತಾ ಎಸ್. ಗುಜರನ್

ಬೈಂದೂರಿನ ವಿಹಿಂಪ ಮತ್ತು ಭಜರಂಗದಳದಿಂದ ಅಖಂಡ ಭಾರತ ಸಂಕಲ್ಪ ದಿನ ಪ್ರಯುಕ್ತ ಪಂಜಿನ ಮೆರವಣಿಗೆ

ವಿಶ್ವಹಿಂದೂ ಪರಿಷತ್ ಭಜರಂಗದಳ ಬೈಂದೂರು ಪ್ರಖಂಡ ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಪ್ರಯುಕ್ತ ಪಂಜಿನ ಮೆರವಣಿಗೆ ಬೈಂದೂರಿನಲ್ಲಿ ನಡೆಯಿತು. ಯೋಜನಾನಗರದ ನಾಗಬನ ಸಮಿತಿ ಅಧ್ಯಕ್ಷರಾದ ಕೃಷ್ಣದೇವಾಡಿಗ ಬೈಂದೂರು ಪಂಜಿನ ಮೆರವಣಿಗೆಗೆ ವಿದ್ಯುಕ್ತ ಚಾಲನೆ ನೀಡಿದರು. ಸಭಾಕಾರ್ಯಕ್ರಮದಲ್ಲಿ ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಾನಂದ