ಕುಲಾಲ ಸಂಘ ಮುಂಬಯಿ ಮಹಿಳಾ ವಿಭಾಗದ ಆಶ್ರಯದಲ್ಲಿ, ”ಆಟಿದ ಒಂಜಿ ದಿನ” ಕಾರ್ಯಕ್ರಮ

ಮುಂಬಯಿ : ಕುಲಾಲ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ಅ. 6 ರಂದು ಆಟಿದ ಒಂಜಿ ದಿನ ಕಾರ್ಯಕ್ರಮವನ್ನು ಕುರ್ಲಾ ಪೂರ್ವ ಬಂಟರ ಭವನದ ಅನೆಕ್ಸ್ ಹಾಲ್ ನಲ್ಲಿ ಕುಲಾಲ ಸಂಘ ಮುಂಬಯಿ ಇಲ್ಲಿ ಅಧ್ಯಕ್ಷರಾದ ರಘು ಎ. ಮೂಲ್ಯ ಪಾದೆ ಬೆಟ್ಟು, ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕುಲಾಲ ಸಂಘ ಮುಂಬಯಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ಮಮತಾ ಎಸ್. ಗುಜರನ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಂಘದ ಅಧ್ಯಕ್ಷ ರಘು ಎ ಮೂಲ್ಯ ಅವರು ಮಾತನಾಡುತ್ತಾ ಮಹಿಳಾ ವಿಭಾಗ ಮಹಿಳೆಯರನ್ನು ಒಗ್ಗಟ್ಟು ಗಳಿಸಿ ಕಾರ್ಯಕ್ರಮವನ್ನು ಭಾಗ ಯಶಸ್ವಿಯಾಗಿ ನಡೆಸಿದ್ದಾರೆ. ಬಹಳ ಹಿಂದೆ ಈ ತಿಂಗಳಲ್ಲಿ ನಮ್ಮ ಬದುಕು ಬಾಳ ಕಷ್ಟಕರವಾಗಿತ್ತು . ಅಂದು ನಮ್ಮ ಜೀವನ ಸಾಗಿಸುವುದಕ್ಕೂ ಕೂಡ ಕಷ್ಟಕರವಾಗಿತ್ತು ಅದನ್ನೆಲ್ಲ ಯುವ ಜನಾಂಗಕ್ಕೆ ತಿಳಿಸಬೇಕೆನ್ನುವ ಉದ್ದೇಶದಿಂದ ನಗರದ ಬೇರೆ ಬೇರೆ ಸಂಘಟನೆಗಳು ಆಚರಿಸಿಕೊಳ್ಳುತ್ತಿದೆ. ನಮ್ಮ ಊರಿನ ಸಂಸ್ಕೃತಿ ಆಚರಣೆಗಳು ಉಳಿಯುವಂತಾಗಳು ಮತ್ತು ಸಮಾಜಕ್ಕೆ ತಿಳಿಯುವಂತಾಗಲು ಕುಲಾಲ ಸಂಘ ನಿರಂತರವಾಗಿ ಹಲವಾರು ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಇಂದಿನ ಈ ಕಾರ್ಯಕ್ರಮದಲ್ಲಿ ಮಹಿಳೆಯರು ಬಹಳ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಇದು ನಿರಂತರವಾಗಿರಲಿ. ಸಂಘದ ಮಹತ್ವವಾದ ಕುಲಾಲ ಭವನ ಮಂಗಳೂರಿನ ಕುಲಾಲ ಭವನ ಪೂರ್ಣಗೊಳ್ಳುವ ಮಟ್ಟಕ್ಕೆ ತಲುಪಿದೆ ಅದಕ್ಕೆ ಇನ್ನಷ್ಟು ಸಹಕಾರವನ್ನು ಸಮಾಜ ಬಾಂಧವರು ನೀಡಬೇಕು ಎಂದು ನುಡಿದರು.

ಕನ್ನಡಿಗ ಕಲಾವಿದರ ಪರಿಷತ್ತು, ಮಹಾರಾಷ್ಟ್ರ ಇದರ ಅಧ್ಯಕ್ಷರಾದ ಡಾ. ಸುರೇಂದ್ರಕುಮಾರ್ ಹೆಗ್ಡೆ, ಮಾತನಾಡುತ್ತಾ
ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹೆಚ್ಚು ಪ್ರಾಧ್ಯಾನತೆಯನ್ನು ನೀಡಿದ್ದೀರಿ ನಮ್ಮ ಯುವ ಜನಾಂಗ ನಮ್ಮ ಸಂಸ್ಕೃತಿಯನ್ನು ಮತ್ತು ಸಂಸ್ಕಾರವನ್ನು ತಿಳಿಯಬೇಕಿದ್ದರೆ ಅವರಿಗೆ ಎಲ್ಲಾ ರೀತಿಯಲ್ಲಿ ನಾವು ತಿಳುವಳಿಕೆ ನೀಡಬೇಕಾಗುತ್ತದೆ, ಹುಟ್ಟಿನಿಂದ ಸಾವಿನ ತನಕ ನಡೆಯುವ ಎಲ್ಲಾ ಕಾರ್ಯಗಳಲ್ಲಿ ಹಾಗೂ ಸಭೆ ಸಮಾರಂಭಗಳಿರಲಿ ಅದರಲ್ಲಿ ಮಕ್ಕಳನ್ನು ಕರೆ ತರಬೇಕು ಮತ್ತು ಅದರಲ್ಲಿ ಅವರು ಪಾಲು ಪಡೆಯುವಂತೆ ಅವಕಾಶ ಕಲ್ಪಿಸಬೇಕು. ಅದರಿಂದ ಅವರಿಗೆ ಮನೋರಂಜನೆಯು ಸಿಗುತ್ತದೆ ಮತ್ತೊಂದು ರೀತಿಯ ಖುಷಿ ಕೂಡ ಸಿಗುತ್ತದೆ ಮುಂದೆ ಅವರು ಸಂಘ-ಸಂಸ್ಥೆಗಳಲ್ಲಿ ,ಕುಟುಂಬದ ಕಾರ್ಯಕ್ರಮದಲ್ಲಿ ಹೆಚ್ಚು ತೊಡಗಿಕೊಳ್ಳಲು ಪ್ರಯತ್ನಿಸುತ್ತಾರೆ. ಹಿಂದೆಆಟಿ ತಿಂಗಳಂದರೆ ಅದು ಬದುಕಿಗೆ ಪಾಠ ಕಲಿಸಿದ ತಿಂಗಳು ಕೂಡ ಆಗಿತ್ತು.
ಈಗ ನಡೆಯುವ ಆಟಿಯ ಕಾರ್ಯಕ್ರಮಗಳು ಒಂದು ರೀತಿಯ ಸಂಭ್ರಮವಾಗಿದೆ, ಆದರೆಸಂಭ್ರಮವನ್ನು ಆಚರಿಸಿಕೊಳ್ಳೋಣ ಆದರೆ ಅದು ಹೇಗೆ ಇತ್ತು ಊರಿನಲ್ಲಿ ಈ ರೀತಿಯ ಆಚರಣೆಗಳಿದ್ದವು ಈ ರೀತಿಯ ತಿಂಡಿ ತಿನಿಸುಗಳು ಸಿಗುತ್ತಿತ್ತು ಎನ್ನುವ ತಿಳಿಸಬೇಕು ತಿಳಿಸಬೇಕಾಗುವ ರೀತಿಯಲ್ಲಿ ಕಾರ್ಯಕ್ರಮವನ್ನು ಮಾಡಬೇಕಾಗಿದೆ. ನಮ್ಮ ಹಿರಿಯರು ಬಹಳಷ್ಟು ಸಂಪ್ರದಾಯದ ಆಚರಣೆಗಳನ್ನು ಆಚರಿಸಿಕೊಂಡು ಅದನ್ನು ನಾವು ಶಿಸ್ತಿನಿಂದ ಸಾಂಪ್ರದಾಯಿಕ ಶೈಲಿನಿಂದಲೇ ನಡೆಸಿ ಮುನ್ನಡೆಸಬೇಕು ಅದರಿಂದ ಮಕ್ಕಳು ಕೂಡ ಕಲಿಯುವುದಕ್ಕೆ ಬಹಳಷ್ಟು ಸುಲಭವಾಗುತ್ತದೆ ಎಂದು ನುಡಿದರು

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಿನೋದಿನಿ ಸುರೇಂದ್ರ ಹೆಗ್ಡೆ, ಶುಭ ಹಾರೈಸಿ ಮಹಿಳೆಯರ ಒಗ್ಗಟ್ಟು ನಿರಂತರವಾಗಿರಲಿ ಸಂಘಟನೆಯನ್ನು ಇನ್ನಷ್ಟು ಬಳಗೊಳಿಸಿ ಎಂದು ನುಡಿದರು.

ಮುಖ್ಯ ಅತಿಥಿ ಠಾಣೆಯ ಸ್ತ್ರೀ ಶಕ್ತಿ ಮಹಿಳಾ ಮಂಡಳಿಯ ಅಧ್ಯಕ್ಷೆ ಉಷಾ ಹೆಗ್ಡೆ ಮಾತನಾಡುತ್ತಾ ಆಟಿ ಅಮಾವಾಸ್ಯೆಯ ಕಷಾಯ ಕುಡಿಯುವ ಹಾಗೂ ಗಂಜಿ ಊಟವನ್ನು ಸೇವಿಸುವ ಪದ್ಧತಿಯನ್ನು ನೆನಪಿಸಿಕೊಂಡು ಮುಂಬಯಿ ಮಹಾನಗರದಲ್ಲಿ ನಮ್ಮ ಮಕ್ಕಳಿಗೆ ಇದರ ಅರಿವು ಆಗಬೇಕು ಎಂಬ ದೃಷ್ಟಿಯಿಂದ ನಾವು ಇಂತಹ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ಆಟಿದ ಕೂಟವನ್ನು ಮಹಿಳೆಯರು ಮಾಡುತ್ತಿದ್ದು, ಒಂದು ಸಂಸಾರವನ್ನು ಅರ್ಥಪೂರ್ಣವಾಗಿ ನಡೆಸುವಲ್ಲಿ ಮಹಿಳೆಯರು ಮುಖ್ಯ ಪಾತ್ರವನ್ನು ವಹಿಸುತ್ತಿದ್ದಾಳೆ ಎಂದು ನುಡಿದರು

ವೇದಿಕೆಯಲ್ಲಿ ಕುಲಾಲ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುಚಿತ ಡಿ. ಬಂಜನ್, ಕಾರ್ಯದರ್ಶಿ ಕವಿತಾ ಸಿ ಹಂಡ, ಕೋಶಾಧಿಕಾರಿ ಲತಾ ಎಸ್. ಮೂಲ್ಯ ವಿವಿಧ ಸ್ಥಳೀಯಸಮಿತಿಯ ಮಹಿಳಾ ವಿಭಾಗದ ಕಾರ್ಯ ಅಧ್ಯಕ್ಷ ಚಂದ್ರಾವತಿ ಸಾಲಿಯನ್ ಆಶಾಲತಾ ಮುಲ್ಯ ಮಲ್ಲಿಕಾ ಯಸ್ ಮೂಲ್ಯ ಮಮತಾ ಕುಲಾಲ್ ಕುಶಲಜಿ ಬಂಗೇರ ಉಪಸ್ಥಿರಿದ್ದರು

ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ದೇವದಾಸ್ ಕುಲಾಲ್, ಸಮಜ ಸೇವಕಿ ಸುಶೀಲ್ ಎನ್ ಮೂಲ್ಯ , ದಾನಿ ಜಗದೀಶ್ ಬಂಜನ್. ಯೋಗದಲ್ಲಿ ಪಿ ಎಚ್ ಡಿ ಮಾಡಿದ ಡಾ ಸುರೇಖಾ ರತನ್ ಕುಲಾಲ್. ಯುವ ಉದ್ಯಮಿ ಅಶೋಕ್ ಕುಲಾಲ್ ತಾನೇ.ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಸನ್ಮಾನಿಸಲಾಯಿತುಹಾಗೂ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ ದಂಪತಿಯನ್ನು ಗೌರವಿಸಲಾಯಿತು

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ಮಮತಾ ಎಸ್. ಗುಜರನ್ ಸ್ವಾಗತಿಸಿ ಮಹಿಳಾ ವಿಭಾಗದ ಸೇವಾ ಕಾರ್ಯಗಳ ಬಗ್ಗೆ ತಿಳಿಸಿದರು, ಉಪ ಸುಚಿತ್ರ ಬಂಜನ್ . ,ಕಾರ್ಯದರ್ಶಿ ಕವಿತಾ ಸಿ ಹಂಡ ಕಾರ್ಯಕ್ರಮ ನಿರೂಪಿಸಿದರು , ಕೋಶಾಧಿಕಾರಿ ಲತಾ ಎಸ್. ಮೂಲ್ಯ ಧನ್ಯವಾದ ನೀಡಿದರು. ಅತಿಥಿಗಳನ್ನು ಇಂದಿರಾ ಬಂಜನ್ ,ಆರತಿ ಕೆ ಸಾಲ್ಯಾನ್, ರತ್ನ ಕುಲಾಲ್, ನಯನ ಬಂಗೇರ, ಪ್ರೇಮ ಮೂಲ್ಯ, ಪರಿಚಯಿಸಿದರು.ಆಟಿ ತಿಂಗಳ ಮತ್ತು ಆಚರಣೆಯ ಬಗ್ಗೆ ರಸಿಕ ಸಿಮೂಲ್ಯ ಹಾಗೂ ಸುಚಿತ ಬಂಜನ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು,

ಸನ್ಮಾನಿತರ ನುಡಿ ತುಳುನಾಡಿನ ಮಣ್ಣಿನ ಪ್ರಾಮುಖ್ಯತೆಯನ್ನ ತಿಳಿಸಲು ಆಟಿ ದಿನಾಚರಣೆ ಅಗತ್ಯ:ಕಸ್ತೂರಿ ಪಂಜ,

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಮಾತನಾಡುತ್ತಾ ವಿಭಾಜಿತ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳು ಜೀರ್ಣೋದ್ಧಾರವಾಗಲು ಮುಂಬಯಿ ಮಹಾನಗರದಲ್ಲಿನ ಬಂಧುಗಳ ಕೊಡುಗೆ ಅಪಾರ. ಮುಂಬಯಿ ಮಹಾನಗರದಲ್ಲಿರುವ ಬಂಧುಗಳು ಅವರ ಸಹಾಯ ಮಾಡಿದ್ದರಿಂದ ಮಾತ್ರ ಅದು ಸಾಧ್ಯ . ಊರಿನಲ್ಲಿರುವ ಹಿರಿಯರು ಮುಂಬೈಯ ತಮ್ಮ ಬಂಧುಗಳಿಗೆ ಮಕ್ಕಳಿಗೆ ದೇವರು ಸುಖ ಶಾಂತಿಯನ್ನು ನೀಡಲಿ, ಅವರ ಆರೋಗ್ಯ ಆಯುಷ್ಯ ವೃದ್ಧಿಯಾಗಲಿ ಎಂದು ಪ್ರಾರ್ಥಿಸುವುದು ಕ್ರಮ ನಿರಂತರವಾಗಿದೆ ಅವರ ಪ್ರಾರ್ಥನೆಗಳು ಈ ನಗರದಲ್ಲಿ ವಾಸ್ತವಿರುವ ಬಂಧುಗಳಿಗೆ ಪ್ರಾಪ್ತಿ ಆಗಿರುವುದರಿಂದ ಇಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ನಮ್ಮ ತುಳುನಾಡಿನ ಜನ ಯಶಸ್ವಿಯಾಗಿ ತಮ್ಮ ಸಾಧನೆಗಳನ್ನು ಮಾಡುತ್ತಿದ್ದಾರೆ. . ನಮ್ಮ ನಾಡಿನ ಯುವ ಜನಾಂಗಕ್ಕೆ ತುಳುನಾಡಿನ ಮಣ್ಣಿನ ಪ್ರಾಮುಖ್ಯತೆಯನ್ನ ತಿಳಿಸಲು ಆಟಿ ದಿನಾಚರಣೆಯನ್ನು ಮುಂಬಯಿ ಮಹಾನಗರದ ವಿವಿದೆಡೆ ಚರಿಸುತ್ತಿದ್ದೇವೆ ಸಂತೋಷವನ್ನು ತಂದಿದೆ ಎಂದು ನುಡಿದರು.

ಆಹಾರ ಸೇವನೆ ಪದ್ದತಿಯೂ ಸರಿಯಾದಲ್ಲಿ ಮಾತ್ರ ಅದು ಪ್ರಯೋಜನಕಾರಿ:ಡಾ. ಸುರೇಖಾ ಕುಲಾಲ್

ಯೋಗಾ ತಜ್ನೆ ಡಾ. ಸುರೇಖಾ ರತನ್ ಕುಲಾಲ್, ಅವರು ಯೋಗದ ಪ್ರಯೋಜನದ ಬಗ್ಗೆ ಮಾಹಿತಿ ನೀಡುತ್ತಾ ಯೋಗಾಭ್ಯಾಸದೊಂದಿಗೆ ಆಹಾರ ಸೇವನೆ ಪದ್ದತಿಯೂ ಸರಿಯಾದಲ್ಲಿ ಮಾತ್ರ ಅದು ಪ್ರಯೋಜನಕಾರಿ. ಉತ್ತಮ ಆಹಾರ ಹಾಗೂ ಸರಿಯಾದ ಯೋಗ ಉತ್ತಮ ಆರೋಗ್ಯಕ್ಕೆ ಪ್ರಯೋಜನಕಾರಿ ಯಾಗುತ್ತದೆ ಎಂದರು.

ಸನ್ಮಾನವನ್ನು ಸಮುದಾಯದ ಬಂಧುಗಳಿಗೆ ಅರ್ಪಿಸುರ್ತ್ತಿದ್ದೇನೆ.ದೇವದಾಸ್ ಕುಲಾಲ್


ಸಂಘದ ಗೌರವ ಅಧ್ಯಕ್ಷರಾದ ದೇವದಾಸ ಎಲ್ ಕುಲಾಲ್ ಮಾತನಾಡುತ್ತಾ ಕುಲಾಲ ಸಂಘದ ಎಲ್ಲಾ ಉಪಸಮಿತಿಗಳು ಉತ್ತಮ ಕೆಲಸವನ್ನು ಮಾಡುತ್ತಿದೆ. ಎಲ್ಲರ ಸಹಾಯದಿಂದ ಮಂಗಳೂರು ಕುಲಾಲ ಭವನದ ಕೆಲಸ ಸುಗಮವಾಗಿ ಸಾಗುತ್ತಿದೆ. ಇಂದು ನನಗೆ ಸಿಕ್ಕಿದ ಸನ್ಮಾನವನ್ನು ಸಮುದಾಯದ ಬಂಧುಗಳಿಗೆ ಅರ್ಪಿಸುರ್ತ್ತಿದ್ದೇನೆ. ದೇವರ ದಯೆಯಿಂದ ಮುಂಬಯಿಗೆ ಬಂದ ಪ್ರಾರಂಭದಲ್ಲಿ ನನಗೆ ಸಮಾಜ ಸೇವೆ ಮಾಡುವ ಅವಕಾಶ ದೊರಕಿದೆ. ನಮ್ಮ ಜೀವನದ ಅಲ್ಪಾವಧಿಯಲ್ಲಿ ಸಮಾಜ ಸೇವೆಯನ್ನು ಮಾಡುವ ಅವಕಾಶ ಎಲ್ಲರಿಗೂ ದೊರೆಯಲಿ ಎಂದರು.

Related Posts

Leave a Reply

Your email address will not be published.