Home 2024 January (Page 18)

ಬಂಟ್ವಾಳ: ಮನೆಯೊಂದಕ್ಕೆ ನುಗ್ಗಿ ನಗ, ನಗದು ದರೋಡೆ

ಬಂಟ್ವಾಳ: ನಾಲ್ವರು ಮುಸುಕುಧಾರಿಗಳು ಮನೆಯೊಂದಕ್ಕೆ ನುಗ್ಗಿ ತಾಯಿ ಮಗಳಿಗೆ ಚೂರಿ ತೋರಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದರೋಡೆಗೈದ ಘಟನೆ ಶುಕ್ರವಾರ ಮುಂಜಾನೆ ವಗ್ಗದಲ್ಲಿ ನಡೆದಿದೆ. ವಗ್ಗ ಸಮೀಪದ ಅಂಚಿಕಟ್ಟೆ ಸಾಲುಮರ ತಿಮ್ಮಕ್ಕ ಟ್ರೀ ಪಾರ್ಕ್ ಮುಂಭಾಗದಲ್ಲಿರುವ ಪ್ಲೋರಿನ್ ಪಿಂಟೋ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ತಾಯಿ ಪ್ಲೋರಿನಾ

ಪುತ್ತೂರು: ಅಂದ್ರಟ್ಟ ಸೇತುವೆ ಕಾಮಗಾರಿಗೆ ಎರೆಡೆರಡು ಬಾರಿ ಶಿಲಾನ್ಯಾಸ

ಪುತ್ತೂರು: ಶಾಂತಿಗೋಡು ಮತ್ತು ನರಿಮೊಗರು ಗ್ರಾಮದ ಅಂದ್ರಟ್ಟದ ಸಂಪರ್ಕ ಸೇತುವೆಗೆ 2023 ರ ಮಾರ್ಚ್ 19ರಂದು ಆಗಿನ ಶಾಸಕ ಸಂಜೀವ ಮಠಂದೂರು ಅವರು ಶಿಲಾನ್ಯಾಸ ನೆರವೇರಿಸಿದ್ದರು. ಇದೀಗ ಅದೇ ಕಾಮಗಾರಿಗೆ ಈಗಿನ ಶಾಸಕ ಅಶೋಕ್ ಕುಮಾರ್ ರೈ ಅವರು ಶಿಲಾನ್ಯಾಸ ನೆರವೇರಿಸಿದ್ದಾರೆ ಎಂದು ಶಾಂತಿಗೋಡು ಶಕ್ತಿ ಕೇಂದ್ರದ ಅಧ್ಯಕ್ಷ ಶ್ಯಾಂ ಭಟ್ ಮತ್ತು ಚಿಕ್ಕಮುಡ್ನೂರು ಶಕ್ತಿ

ಉಳ್ಳಾಲ: ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯಿಂದ ನುಡಿನಮನ

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ) ವತಿಯಿಂದ ಇತ್ತೀಚೆಗೆ ನಿಧನರಾದ ಪ್ರೊ.ಅಮೃತ ಸೋಮೇಶ್ವರರವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು. ಮಾಜಿ ಶಾಸಕ ಹಾಗೂ ಸಮಿತಿಯ ಸ್ವಾಗತಾಧ್ಯಕ್ಷ ಕೆ.ಜಯರಾಮ ಶೆಟ್ಟಿ ಮಾತನಾಡಿ, ಅಮೃತರು ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದರು. ಸಾಹಿತ್ಯ ಲೋಕದ ದಿಗ್ಗಜರೂ, ಶ್ರೇಷ್ಠ ವಿದ್ವಾಂಸ, ಶಿಕ್ಷಕ, ಹಾಗೂ ಸಮಿತಿಯ ಗೌರವ

ವಿಟ್ಲ: ಜ.13ರಂದು ಕನ್ಯಾನ ದೇಲಂತಬೆಟ್ಟು ಶಾಲೆಯ ಅಮೃತ ಮಹೋತ್ಸವ

ಕನ್ಯಾನ ಗ್ರಾಮದ ದೇಲಂತಬೆಟ್ಟು ದ.ಕ.ಜಿ.ಪಂ.ಉನ್ನತ ಹಿ.ಪ್ರಾ.ಶಾಲೆಯ ಅಮೃತ ಮಹೋತ್ಸವ ಸಮಾರಂಭ ಅಮೃತ ಸಿಂಚನ ಕಾರ್ಯಕ್ರಮ ಜ.13ರಂದು ನಡೆಯಲಿದೆ. 1948 ಜೂ.1ರಂದು ಆರಂಭವಾದ ಈ ಶಾಲೆಗೆ 75 ವರ್ಷ ತುಂಬಿದ್ದು, ಹಳೆ ವಿದ್ಯಾರ್ಥಿಗಳು, ಅಮೃತ ಮಹೋತ್ಸವ ಸಮಿತಿ ಮತ್ತು ಶಾಲಾಭಿವೃದ್ಧಿ ಸಮಿತಿ ಜತೆಗೂಡಿ ಅಮೃತ ಮಹೋತ್ಸವವವನ್ನು ಆಚರಿಸಲಿದೆ ಎಂದು ಅಧ್ಯಕ್ಷ ಡಿ.ಶ್ರೀನಿವಾಸ್

ಉಡುಪಿ: ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷರಾಗಿ ಡಾ. ಗಣೇಶ್ ಗಂಗೊಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ ಸುವರ್ಣ ಕಟಪಾಡಿ ಆಯ್ಕೆ

ಉಡುಪಿ: ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರಾಗಿ ಆಕಾಶವಾಣಿ ಮತ್ತು ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿ ಹಾಗೂ ಜಿಲ್ಲಾ ಪ್ರದಾನ ಕಾರ್ಯದರ್ಶಿಯಾಗಿ ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಆಯ್ಕೆಯಾಗಿದ್ದಾರೆ. ಕನ್ನಡ ಜಾನಪದ ಪರಿಷತ್ ರಾಜ್ಯ ಸಮಿತಿಯ ನಿರ್ಣಯದಂತೆ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಅವರು ಉಡುಪಿ ಜಿಲ್ಲಾ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ

ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಜಾತ್ರೋತ್ಸವದ ಕಾರ್ಯಾಧ್ಯಕ್ಷರಾಗಿ ಶ್ರೀಶೈಲೇಂದ್ರ ಸುವರ್ಣ

ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯು ಮಂಗಳೂರಿನಲ್ಲಿ ನಡೆಯಿತು. ಫೆಬ್ರವರಿ ತಾರೀಕು 25 ರಿಂದ 28 ರ ವರೆಗೆ ನಡೆಯುವ ಜಾತ್ರಾ ಮಹೋತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಬೇಕಾದರೆ ಆಮಂತ್ರಣ ಪತ್ರಿಕೆಯನ್ನು ಪ್ರತಿಯೊಂದು ಕ್ಷೇತ್ರಕ್ಕೂ ಕಳುಹಿಸಿಕೊಡಬೇಕು ಎಂಬುದಾಗಿ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.ಈ ಸಮಯದಲ್ಲಿ

ಮಂಗಳೂರು: ಟೋನಿ & ಗೈ ಹೇರ್ ಡ್ರೆಸ್ಸಿಂಗ್‌ನ ನೂತನ ಔಟ್‌ಲೇಟ್ ಶುಭಾರಂಭ

ಹೆವನ್ ರೋಸ್‌ನ ಮಾಲಕರಾದ ಮುಸ್ತಫಾ ಪ್ರೇಮಿ ಅವರ ಫ್ರಾಂಚೈಸ್‌ಯ ಟೋನಿ ಆಂಡ್ ಗೈ ಹೇರ್ ಡ್ರೆಸ್ಸಿಂಗ್‌ನ ನೂತನ ಔಟ್ ಲೇಟ್‌ನ ಮಂಗಳೂರಿನ ಸಿಟಿಸೆಂಟರ್‌ನ ಮೂರನೇ ಮಹಡಿಯಲ್ಲಿ ಶುಭಾರಂಭಗೊಂಡಿತು. ಈಗಾಗಲೇ ವಿವಿಧ ಕಡೆಗಳಲ್ಲಿ ಗ್ರಾಹಕರಿಗೆ ಸೇವೆಯನ್ನು ನೀಡಿ, ಗ್ರಾಹಕರ ಮೆಚ್ಚುಗೆ ಪಾತ್ರವಾಗಿರುವ ಹೆವನ್ ರೋಸ್‌ನ ಮಾಲಕರಾದ ಮುಸ್ತಫಾ ಪ್ರೇಮಿ ಅವರ ಫ್ರಾಂಚೈಸ್‌ಯ ಟೋನಿ ಆಂಡ್

ಪೆರುವಾಜೆ: ಶ್ರೀ ಜಲದುರ್ಗಾದೇವಿ ದೇವರ ವಾರ್ಷಿಕ ಜಾತ್ರೆಗೆ ಗೊನೆ ಮುಹೂರ್ತ

ಪೆರುವಾಜೆ: ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಜ.15 ರಿಂದ ಜ.21 ರ ತನಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವ ನಡೆಯಲಿದ್ದು ಜ.10 ರಂದು ಗೊನೆ ಮುಹೂರ್ತ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ದಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ

ಮಂಜೇಶ್ವರ: ಶ್ರೀಮತ್ ಅನಂತೇಶ್ವರ ಹೈಯರ್ ಸೆಕೆಂಡರಿ ಶಾಲೆ ವಿದ್ಯಾರ್ಥಿನಿ ಅಪರ್ಣಾಳ ಸಾಧನೆ

ಮಂಜೇಶ್ವರದ ಶ್ರೀಮತ್ ಅನಂತೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಕುಮಾರಿ ಅಪರ್ಣಾ .ಪಿ ಅವರು ಕೊಲ್ಲಂನಲ್ಲಿ ಜರುಗಿದ ಕೇರಳ ಶಾಲಾ ಕಲೋತ್ಸವದಲ್ಲಿ ಕಥಕ್ಕಳಿ ಸಂಗೀತ ಹುಡುಗಿಯರ ವಿಭಾಗದಲ್ಲಿ, ಇಂಗ್ಲೀಷ್ ಕಥಾರಚನೆಯಲ್ಲಿ ಎ ಗ್ರೇಡ್ ನೊಂದಿಗೆ ಶಾಲೆಗೆ ಹಾಗೂ ಕಾಸರಗೋಡು ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾಳೆ. ಸತತ ಪ್ರಯತ್ನ, ಕಲಿಯಬೇಕೆಂಬ ಹಠ,

ಪುತ್ತೂರು: ಬ್ಯುಸಿನೆಸ್ ಸ್ಟ್ರಾಟಜಿ ಗೇಮ್‌ನಲ್ಲಿ ಪುತ್ತೂರಿನ ಶಮಂತ್ ಆಳ್ವ ನೇತೃತ್ವದ ವಿದ್ಯಾರ್ಥಿ ತಂಡದ ಸಾಧನೆ

ಲಂಡನ್ ನ ಕಿಂಗ್‌ಸ್ಟನ್ ವಿಶ್ವವಿದ್ಯಾಲಯದ ಪುತ್ತೂರಿನ ಶಮಂತ್ ಆಳ್ವ ನೇತೃತ್ವದ ವಿದ್ಯಾರ್ಥಿ ತಂಡ, ಬ್ಯುಸಿನೆಸ್ ಸ್ಟ್ರಾಟಜಿ ಗೇಮ್ ನ ರೋಮಾಂಚಕ ಪ್ರದರ್ಶನದಲ್ಲಿ ವಿಜಯ ಸಾಧಿಸಿದೆ. ಬ್ಯುಸಿನೆಸ್ ಸ್ಟ್ರಾಟಜಿ ಗೇಮ್ ಜಾಗತಿಕ ವಿಶ್ವವಿದ್ಯಾನಿಲಯ ಮಟ್ಟದ ಸ್ಪರ್ಧೆಯಾಗಿದ್ದು, ವಿಶ್ವದಾದ್ಯಂತ ವಿಶ್ವವಿದ್ಯಾನಿಲಯಗಳ ನೂರಾರು ತಂಡಗಳು ಭಾಗವಹಿಸಿದ್ದವು. ಕಿಂಗ್‌ಸ್ಟನ್