ಮಂಗಳೂರು: ಟೋನಿ & ಗೈ ಹೇರ್ ಡ್ರೆಸ್ಸಿಂಗ್‌ನ ನೂತನ ಔಟ್‌ಲೇಟ್ ಶುಭಾರಂಭ

ಹೆವನ್ ರೋಸ್‌ನ ಮಾಲಕರಾದ ಮುಸ್ತಫಾ ಪ್ರೇಮಿ ಅವರ ಫ್ರಾಂಚೈಸ್‌ಯ ಟೋನಿ ಆಂಡ್ ಗೈ ಹೇರ್ ಡ್ರೆಸ್ಸಿಂಗ್‌ನ ನೂತನ ಔಟ್ ಲೇಟ್‌ನ ಮಂಗಳೂರಿನ ಸಿಟಿಸೆಂಟರ್‌ನ ಮೂರನೇ ಮಹಡಿಯಲ್ಲಿ ಶುಭಾರಂಭಗೊಂಡಿತು.


ಈಗಾಗಲೇ ವಿವಿಧ ಕಡೆಗಳಲ್ಲಿ ಗ್ರಾಹಕರಿಗೆ ಸೇವೆಯನ್ನು ನೀಡಿ, ಗ್ರಾಹಕರ ಮೆಚ್ಚುಗೆ ಪಾತ್ರವಾಗಿರುವ ಹೆವನ್ ರೋಸ್‌ನ ಮಾಲಕರಾದ ಮುಸ್ತಫಾ ಪ್ರೇಮಿ ಅವರ ಫ್ರಾಂಚೈಸ್‌ಯ ಟೋನಿ ಆಂಡ್ ಗೈ ಹೇರ್ ಡ್ರೆಸ್ಸಿಂಗ್‌ನ ನೂತನ ಔಟ್ ಲೇಟ್ ಉದ್ಘಾಟನೆಗೊಂಡಿತು. ಮುಸ್ತಫಾ ಪ್ರೇಮಿಯ ಅವರ ತಂದೆ ಮಹಮ್ಮದ್ ಲದ್ದಾನ್ ಪ್ರೇಮಿ ಅವರ ಗೌರವ ಉಪಸ್ಥಿತಿಯಲ್ಲಿ ಗಣ್ಯರು ರಿಬ್ಬನ್ ಕತ್ತರಿಸಿ, ಉದ್ಘಾಟಿಸಿದರು. ತದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಗಣ್ಯರು ದೀಪ ಬೆಳಗಿಸಿ, ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶಾಸಕ ಡಿ.ವೇದವ್ಯಾಸ್ ಕಾಮತ್ ಮಾತನಾಡಿ, ಮಂಗಳೂರಿನ ಸಿಟಿ ಸೆಂಟರ್‌ನಲ್ಲಿ ಟೋನಿ ಆಂಡ್ ಗೈ ಹೇರ್ ಡ್ರೆಸ್ಸಿಂಗ್ ತನ್ನದೇ ಆದ ಛಾಪು ಮೂಡಿಸಲಿ, ಇಂದು ಕೇಶ ವಿನ್ಯಾಸ ಬಹಳಷ್ಟು ಬದಲಾವಣೆ ಆಗಿದೆ. ಯುವ ಸಮುದಾಯ ಇದರ ಪ್ರಯೋಜನಾ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.


ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಹೆವನ್ ರೋಸ್‌ನಲ್ಲಿ ಉತ್ತಮ ಸೇವೆಯನ್ನು ನೀಡಿ, ಗ್ರಾಹಕರ ವಿಶ್ವಾಸವನ್ನು ಪಡೆದಿದೆ. ಗ್ರಾಹಕರು ಅಭಿರುಚಿ ತಕ್ಕಂತೆ ಸೇವೆಯನ್ನು ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಟೋನಿ ಆಂಡ್ ಗೈ ಹೇರ್ ಡ್ರೆಸ್ಸಿಂಗ್‌ನ ನೂತನ ಔಟ್ ಲೇಟ್ ಕೂಡ ಉತ್ತಮ ಸೇವೆಯನ್ನು ನೀಡಲಿ ಎಂದು ಶುಭಾ ಹಾರೈಸಿದರು.
ನಟಿ ಚೈತ್ರಾ ಶೆಟ್ಟಿ ಮಾತನಾಡಿ, ಮುಂದಿನ ದಿನಗಳಲ್ಲಿ ಟೋನಿ ಆಂಡ್ ಗೈ ಹೇರ್ ಡ್ರೆಸ್ಸಿಂಗ್‌ನ ಜೌಟ್ ಲೇಟ್ ಇನ್ನಷ್ಟು ತೆರೆಯಲಿ ಎಂದು ಶುಭಾಹಾರೈಸಿದರು.
ಹೆವನ್ ರೋಸ್‌ನ ಮಾಲಕರಾದ ಮುಸ್ತಫಾ ಪ್ರೇಮಿ ಅವರು ಪ್ರಾಸ್ತಾಮಿಕ ಮಾತುಗಳನ್ನಾಡಿದ್ರು, ಉದ್ಯಮದಲ್ಲಿ ತನ್ನ ಆರಂಭದ ದಿನದಲ್ಲೂ ಮಂಗಳೂರಿನ ಜನತೆ ಬೆಂಬಲ ನೀಡಿ, ಪ್ರೋತಾಹಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


ಈ ವೇಳೆ ಎಎಪಿ ಒಬಿಸಿ ವಿಭಾಗದ ರಾಜ್ಯಾಧ್ಯಕ್ಷ ನವೀನ್ ಚಂದ್ರ ಪೂಜಾರಿ, ಮೋತಿ ಶಾಮ್ ಬಿಲ್ಲರ್ಸ್‌ನ ನಿರ್ದೇಶಕರಾದ ಎಸ್.ಎಂ.ದಾವೂದ್, ವಿ4 ನ್ಯೂಸ್‌ನ ಆಡಳಿತ ನಿರ್ದೇಶಕ ಲಕ್ಷ್ಮಣ್ ಕುಂದರ್ ಹಾಗೂ ಸೇರಿದಂತೆ ಮೊದಲಾದವರು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿಜೆ.ಡಿಕ್ಸಾನ್ ನಿರೂಪಿಸಿ, ವಂದಿಸಿದರು. ಬಿಎನ್‌ಐ ಸದಸ್ಯರು ಕೂಡ ನೂತನ ಮಳಿಗೆ ಭೇಟಿ ನೀಡಿ, ಶುಭಾ ಹಾರೈಸಿದರು.

ಉದ್ಘಾಟನಾ ಪ್ರಯುಕ್ತ ಸಂಗೀತ ಕಾರ್ಯಕ್ರಮ ಫ್ಯಾಶನ್ ಶೋ, ಹಾಗೂ ನೃತ್ಯದ ಮೂಲಕ ನೆರೆದ್ದವರನ್ನು ಮನರಂಜಿಸಲಾಯ್ತು. ಈ ಮಳಿಗೆಯಲ್ಲಿ ಐಬ್ರೋಸ್, ಬ್ಲೀಚ್ ಮತ್ತು ಫೇಶಿಯಲ್, ಮದುಮಗಳ ಅಲಂಕಾರ, ಹೇರ್ ಸ್ಟೈಲ್, ಹೇರ್ ಸ್ಟ್ರೈಟಿಂಗ್, ಪೆಡಿಕ್ಯೂರ್ & ಮೆನಿಕ್ಯೂರ್ ಸೇರಿದಂತೆ ಮೊದಲಾದ ಸೇವೆಗಳು ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 9886017348 ಮೊಬೈಲ್ ಸಂಖ್ಯೆಯನ್ನು ಸಂಪರ್ಕ ಮಾಡಬಹುದು.

Related Posts

Leave a Reply

Your email address will not be published.