Home 2024 February (Page 9)

ನೂತನ ಸ್ವರ್ಣ ಲಾಲ್ಕಿ ವೆಂಕಟರಮಣ ದೇವರಿಗೆ ಸಮರ್ಪಣೆ

ಮಂಗಳೂರು : ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ದೇವರ ಮಹೋತ್ಸವ ಕಾರ್ಯಕ್ರಮಕ್ಕೆ ನೂತನವಾಗಿ ನಿರ್ಮಿಸಲಾದ ಸ್ವರ್ಣ ಲಾಲ್ಕಿ ಯ ಸಮರ್ಪಣಾ ಕಾರ್ಯಕ್ರಮ ಬುಧವಾರ ಶ್ರೀ ದೇವಳದಲ್ಲಿ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಶ್ರೀ ದೇವರಿಗೆ ಸಮರ್ಪಿಸಲಾಯಿತು . ಈ ಸ್ವರ್ಣ ಪಲ್ಲಕಿಯನ್ನು ಬ್ರಹ್ಮರಥೋತ್ಸವದ

ಭಾರತ್ ಬ್ಯಾಂಕ್ ಗೆ “ಅತ್ಯುತ್ತಮ ಐಟಿ ರಿಸ್ಕ್ ಮ್ಯಾನೇಜ್ಮೆಂಟ್ ಪ್ರಶಸ್ತಿ” ಯ ಗರಿ

ಮುಂಬೈನಲ್ಲಿ ನಡೆದ 19 ನೆಯ ಬ್ಯಾಂಕಿಂಗ್ ತಂತ್ರಜ್ಞಾನ ಸಮ್ಮೇಳನದಲ್ಲಿ *ಪ್ರತಿಷ್ಠಿತ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ನಿಂದ ಭಾರತ್ ಕೋ-ಅಪರೇಟಿವ್ ಬ್ಯಾಂಕ್ “ಅತ್ಯುತ್ತಮ ಐಟಿ ರಿಸ್ಕ್ ಮ್ಯಾನೇಜ್ಮೆಂಟ್ ಪ್ರಶಸ್ತಿ” ಯನ್ನು ಪಡೆದುಕೊಂಡಿದೆ. ಭಾರತ್ ಬ್ಯಾಂಕ್ ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಅವರ ಪರವಾಗಿ *ಶ್ರೀ ಭಾಸ್ಕರ್

ಮೂಡುಬಿದಿರೆ : ಜೆಇಇ ಮೈನ್ಸ್ ಫಲಿತಾಂಶ:ಆಳ್ವಾಸ್ ಪದವಿಪೂರ್ವ ಕಾಲೇಜಿನ 53 ವಿದ್ಯಾರ್ಥಿಗಳಿಗೆ 95ಕ್ಕೂ ಅಧಿಕ ಪರ್ಸಂಟೈಲ್

ಮೂಡುಬಿದಿರೆ : ಜೆಇಇ ಮೈನ್ಸ್ ಫೆಸ್-1 ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿಯೂ ಉತ್ತಮ ಸಾಧನೆ ಮಾಡಿದ್ದಾರೆ. 53 ವಿದ್ಯಾರ್ಥಿಗಳು 95 ಪರ್ಸಂಟೈಲ್‌ಗಿಂತ ಅಧಿಕ ಅಂಕ ಪಡೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.ವಿದ್ಯಾರ್ಥಿ ಎಚ್.ಆರ್. ರಜತ್ 99.271023 ಪರ್ಸಂಟೈಲ್

ಸುರತ್ಕಲ್: ಫೆ.18 ರಂದು ಸುರತ್ಕಲ್ ನಲ್ಲಿ ಆಯುಷ್ಮಾನ್ ಮತ್ತು ಇ ಶ್ರಮ ಕಾಡ್೯ ವಿತರಣೆ

ಸುರತ್ಕಲ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಭಾರತ ಸರ್ಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ ಬಂಟರ ಸಂಘ (ರಿ) ಸುರತ್ಕಲ್ ಇದರ ಸಹಯೋಗದಲ್ಲಿ ಸಾರ್ವಜನಿಕರಿಗೆ ಅಯುಷ್ಮಾನ್ ಭಾರತ ಕಾರ್ಡ್ ಮತ್ತು ಇ ಶ್ರಮ ಕಾರ್ಡ್ ವಿತರಣಾ ಕಾರ್ಯ ಕ್ರಮ ಸಮಾರಂಭ ಫೆಬ್ರವರಿ 18 ರಂದು ಆದಿತ್ಯವಾರ ಬೆಳಿಗ್ಗೆ 9-30 ಕ್ಕೆ ಬಂಟರ ಭವನ ಸುರತ್ಕಲ್ ಇಲ್ಲಿ

ಸುರತ್ಕಲ್: ಯುವ ಜನತೆ ಕೃಷಿಯತ್ತ ಒಲವು ತೋರಿಸುವ ಅಗತ್ಯ ಇದೆ: ಅಬ್ದುಲ್ ಬಶೀರ್

ಸುರತ್ಕಲ್: ಭಾರತವು ಕೃಷಿ ಪ್ರಧಾನವಾದ ದೇಶವಾಗಿದ್ದು ಇಂದಿನ ಯುವ ಜನತೆ ಕೃಷಿಯತ್ತ ಒಲವು ತೋರಿಸುವ ಅಗತ್ಯ ವಿದೆ ಎಂದು ನಿವೃತ್ತ ಸುರತ್ಕಲ್ ಕೃಷಿ ಅಧಿಕಾರಿ ಅಬ್ದುಲ್ ಬಸೀರ್ ನುಡಿದರು ಅವರು ಬಂಟರ ಸಂಘ ಸುರತ್ಕಲ್, ಲಯನ್ಸ್ ಕ್ಲಬ್ ಸುರತ್ಕಲ್ ಮತ್ತು ಜೆಸಿಐ ಸುರತ್ಕಲ್ ಸಹಯೋಗ ದಲ್ಲಿ ಬಂಟರ ಭವನ ಸುರತ್ಕಲ್ ನಲ್ಲಿ ನಡೆದ ಸಾವಯವ ಕೃಷಿಕರ ಮತ್ತು ಗ್ರಾಹಕರ ಮುಖಾಮುಖಿ

ತೊಕ್ಕೊಟ್ಟು: ಐಸ್ ಕ್ರೀಮ್ ಪಾರ್ಲರ್ ವೈಟರ್ ಆತ್ಮಹತ್ಯೆ

ಉಳ್ಳಾಲ: ಐಸ್ ಕ್ರೀಮ್ ಪಾರ್ಲರ್ ಒಂದರ ವೈಟರ್ ಆಗಿದ್ದ ಕೊಡಗು ಜಿಲ್ಲೆ ಸೋಮವಾರಪೇಟೆಯ ಬೆಳ್ಳಾರೆ ಹಳ್ಳಿ ನಿವಾಸಿ ಯೋಗೇಶ್ (31) ಎಂಬಾತ ಪಿಲಾರ್ ನ ಗೋಡೌನ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋಡೌನ್ ನ ಅಂಗಳದಲ್ಲಿ ಸ್ಥಳೀಯ ಯುವಕರು ಬೆಳಿಗ್ಗೆ ಶಟಲ್ ಆಡುತ್ತಿದ್ದಾಗ ಕಿಟಕಿ ತೆರೆದು ಯೋಗೇಶ್ ನೋಡಿದ್ದರು. ಯುವಕರು ತೆರಳಿದ ಬಳಿಕ ಯೋಗೇಶ್ ಡೆತ್ ನೋಟ್ ಬರೆದು

ಡ್ರೋನ್ ಮೂಲಕ ರೈತರ ಕಣ್ಣೀರು ತರಿಸಿದ ಸಂಶೋಧನೆ

ದಿಲ್ಲಿಗೆ ಪ್ರತಿಭಟನೆ ಮಾಡಲು ಬಂದ ರೈತರಿಗೆ ಗೃಹ ಮಂತ್ರಿ ಅಮಿತ್ ಶಾ ನಿರ್ವಹಣೆಯ ಪೊಲೀಸ್ರು ನೀವು ಊಟ ಕೊಟ್ರೆ ನಾವು ಲಾಠಿ ಬೀಸ್ತೀವಿ ಎಂದಿದ್ದಾರೆ. ಕೊಟ್ಟ ಊಟಕ್ಕೆ ನ್ಯಾಯ ಬೆಲೆ ಕೇಳಿದರೆ ಡ್ರೋಣ್ ಮೂಲಕ ಹೊಗೆ ಬಾಂಬು ಸಿಡಿಸಿ ಕಣ್ಣೀರು ತರಿಸ್ತೀವಿ ಎಂದೂ ಹೊಸ ಸಂಶೋಧನೆ ಮಾಡಿ ತೋರಿಸಿದ್ದಾರೆ. ಗದ್ದೆಯಲ್ಲಿ ಇರಬೇಕಾದವರು ದಿಲ್ಲಿಗೆ ಬಂದ್ರೆ ನಾವು ಎಲ್ಲಿಗೆ

ಉಳ್ಳಾಲ: ಸಿಪಿಐಎಂ ಹಿರಿಯ ಮುಖಂಡ ನಾರಾಯಣ ತಲಪಾಡಿ ನಿಧನ

ಉಳ್ಳಾಲ: ಸಿಪಿಐಎಂ ಪಕ್ಷದ ಹಿರಿಯ ಮುಖಂಡ ತಲಪಾಡಿ ನಾರ್ಲ ನಿವಾಸಿ ನಾರಾಯಣ ತಲಪಾಡಿ( 68) ಹೃದಯಾಘಾತದಿಂದ ಇಂದು ನಿಧನ ಹೊಂದಿದರು. ಪಕ್ಷದ ಚಟುವಟಿಕೆ ನಿಮಿತ್ತ ಉಪ್ಪಳದ ಮುಖಂಡರೊಬ್ಬರ ಮನೆಗೆ ತೆರಳಿ ವಾಪಸ್ಸಾಗುವಾಗ ಹೃದಯಾಘಾತ ಉಂಟಾಗಿದೆ.ಇವರು ಸಿಪಿಐಎಂ ಉಳ್ಳಾಲ ವಲಯ ಸಮಿತಿ ಸದಸ್ಯರು, ದಲಿತ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾ ಸದಸ್ಯರು, ಕೋಟೆಕಾರು ಸರ್ಕಲ್ ಬೀಡಿ

ಮಂಜೇಶ್ವರ : ಸಿಪಿಐ ಕಾಸರಗೋಡು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ.ರಾಜನ್ ನಿಧನ

ಮಂಜೇಶ್ವರ : ಸಿಪಿಐ ಕಾಸರಗೋಡು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ.ರಾಜನ್ ನಿಧನರಾದರು. ಮಂಜೇಶ್ವರ ಪಂಚಾಯತ್‌ನ ವತಿಯಿಂದ ನಡೆದ ಶುಚಿತ್ವ ಮಿಷನ್‌ನ ಸಭೆಯಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿರುವ ಮಧ್ಯೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮಂಜೇಶ್ವರದ ರಾಜಕೀಯ ವಲಯದಲ್ಲಿ ಬಿ.ವಿ.ರಾಜನ್ ವಿಶೇಷ ವ್ಯಕ್ತಿತ್ವದೊಂದಿಗೆ ಗುರುತಿಸಿದವರು. ಈ ಪ್ರದೇಶದಲ್ಲಿ

ಪುತ್ತೂರು: ವ್ಯಕ್ತಿ ನಾಪತ್ತೆ

ಪುತ್ತೂರು: ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡ ಎಂಬಲ್ಲಿನ ನಿವಾಸಿ ಸೇಸಪ್ಪ ಗೌಡ(62) ಕಳೆದ 5 ದಿನಗಳ ಹಿಂದೆ ಪುತ್ತೂರಿನಿಂದ ಕಾಣೆಯಾಗಿದ್ದಾರೆ ಎಂದು ಅವರ ಪುತ್ರ ಲೋಕೇಶ್ ದೇವರಗುಂಡ ಎಂಬವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.ಪುತ್ತೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಿಂದ ಔಷಧಿ ಪಡೆದುಕೊಂಡು ಅಲ್ಲಿಂದ ತೆರಳಿದ ಅವರು ತಮ್ಮ ಮನೆಗೆ