ಮೂಡುಬಿದಿರೆ : ಜೆಇಇ ಮೈನ್ಸ್ ಫಲಿತಾಂಶ:ಆಳ್ವಾಸ್ ಪದವಿಪೂರ್ವ ಕಾಲೇಜಿನ 53 ವಿದ್ಯಾರ್ಥಿಗಳಿಗೆ 95ಕ್ಕೂ ಅಧಿಕ ಪರ್ಸಂಟೈಲ್
ಮೂಡುಬಿದಿರೆ : ಜೆಇಇ ಮೈನ್ಸ್ ಫೆಸ್-1 ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿಯೂ ಉತ್ತಮ ಸಾಧನೆ ಮಾಡಿದ್ದಾರೆ. 53 ವಿದ್ಯಾರ್ಥಿಗಳು 95 ಪರ್ಸಂಟೈಲ್‌ಗಿಂತ ಅಧಿಕ ಅಂಕ ಪಡೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.
ವಿದ್ಯಾರ್ಥಿ ಎಚ್.ಆರ್. ರಜತ್ 99.271023 ಪರ್ಸಂಟೈಲ್ (ಭೌತಶಾಸ್ತ್ರ- 97.2200028, ರಸಾಯನಶಾಸ್ತ್ರ – 97.1516355 ಹಾಗೂ ಗಣಿತ- 99.537079) ಪಡೆದಿದ್ದಾರೆ.
ಎಸ್ಸೆಸ್ಸೆಲ್ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿ ಪ್ರಶಾಂತ್ ಭೌತಶಾಸ್ತçದಲ್ಲಿ 100 ಪರ್ಸಂಟೈಲ್ ಪಡೆಯುವುದರ ಜೊತೆಗೆ ಒಟ್ಟು 98.7993863 ಪರ್ಸಂಟೈಲ್ ಪಡೆದಿರುತ್ತಾರೆ.
ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತ ಸೇರಿದಂತೆ ಮೂರು ವಿಷಯಗಳಲ್ಲಿ 98 ಪರ್ಸಂಟೈಲ್‌ಗಿಂತ ಅಧಿಕ ಒಂಬತ್ತು ವಿದ್ಯಾರ್ಥಿಗಳು, 97 ಪರ್ಸಂಟೈಲ್‌ಗಿಂತ ಅಧಿಕ 19 ವಿದ್ಯಾರ್ಥಿಗಳು ಪಡೆದಿದ್ದಾರೆ.
ವಿದ್ಯಾರ್ಥಿಗಳಾದ ರಜತ್ ಮತ್ತು ಪ್ರಶಾಂತ್ ಜೊತೆ ದರ್ಶನ್‌ಕುಮಾರ್ ತಲ್ಲೊಳ್ಳಿ (98.6175507), ನಮಿತ್ ಎ.ಪಿ. (98.5761436), ಪ್ರೀತಮ್ ಎಂ. (98.1895688), ಪ್ರಜ್ವಲ್ ಡಿ.ಎಸ್. (98.1603894), ನವೀನ್ ಬಿ. ಸೋಲಂಕಿ (98.0893667), ಪುನೀತ್ ಎಸ್. (98.079865) ಮತ್ತು ರೋಹಿತ್ ಕುಮಾರ್ ಎಲ್. (98.0132287) ಅವರು 98 ಪರ್ಸಂಟೈಲ್‌ಗಿಂತ ಅಧಿಕ ಅಂಕ ಪಡೆದಿದ್ದಾರೆ.
ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದನೆ ಸಲ್ಲಿಸಿದರು. ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪ್ರೊ. ಸದಾಕತ್ ಇದ್ದರು.