Home 2024 (Page 157)

ಮೂಡುಬಿದಿರೆ: ಚಿನ್ನ ಕದ್ದ ಆರೋಪಿಯ ಬಂಧನ

ಮೂಡುಬಿದಿರೆ: ಇಲ್ಲಿನ ಅರಣ್ಯ ಇಲಾಖೆ ಕಚೇರಿ ಸಮೀಪದ ಮನೆಯಲ್ಲಿದ್ದ ಚಿನ್ನ ಮತ್ತು ಮೊಬೈಲನ್ನು ಕಳ್ಳತನ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಬಂಟ್ವಾಳ ರಾಯಿ ನಿವಾಸಿ ದೀಕ್ಷಿತ್ ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ಇಲ್ಲಿ ಬಾಗಲಕೋಟೆ ಮೂಲದ ನಿವಾಸಿಗಳು ವಾಸವಿದ್ದ ಮನೆಗೆ ಹಾಡು ಹಗಲೇ ನುಗ್ಗಿದ ಆರೋಪಿ ಮನೆಯಲ್ಲಿದ್ದ ಚಿನ್ನದ

ಕೊಕ್ಕಡ:ಅನಾರು-ಪಟ್ರಮೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 2024ರ ಕ್ಯಾಲೆಂಡರ್ ಬಿಡುಗಡೆ

ಕೊಕ್ಕಡ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅನಾರು -ಪಟ್ರಮೆ ಇದರ 2024 ವರ್ಷದ ಕ್ಯಾಲೆಂಡರ್ ನ್ನು ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರರಾದ ನಿತೇಶ್ ಬಲ್ಲಾಳ್ ದೇವಸ್ಥಾನದ ಆವರಣದಲ್ಲಿ ಬಿಡುಗಡೆಗೊಳಿಸಿದರು. ಈ ಸಂಧರ್ಭದಲ್ಲಿ ಪವಿತ್ರಪಾಣಿ ಶ್ರೀಧರ ಶಬರಾಯ ಅಕ್ಕೋ, ಅರ್ಚಕರಾದ ಗುರುಪ್ರಸಾದ್ ನಿಡ್ವಣ್ಣಾಯ, ದೇವಪಾಲ ಅಜ್ರಿ ಉಳಿಯಬೀಡು, ಜಾತ್ರಾ ಸಮಿತಿ

ಪುತ್ತೂರು: ತನಿಯ ಮೋಟಾರ್ಸ್ಸ್‌ನ ಶೋರೂಂ ಶುಭಾರಂಭ

ಮೊಂಟ್ರಾ ಇಲೆಕ್ಟ್ರಿಕ್‌ನ ಅಧಿಕೃತ ಡೀಲರ್ ತನಿಯ ಮೋಟಾರ್‍ಸ್‌ನ ಮತ್ತೊಂದು ಶೋರೂಂ ಪುತ್ತೂರಿನ ದಾರಂದಕುಕ್ಕು ಡಿಕೆ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು. ಭಾರತದಲ್ಲಿ ಇಲೆಕ್ಟ್ರಿಕ್ ವಾಹನಗಳ ಬೇಡಿಕೆ ಹಾಗೂ ಉತ್ಪಾದನೆ ಹೆಚ್ಚಾಗುತ್ತಿದೆ. ಇದೀಗ ತ್ರಿಚಕ್ರದ ವಾಹನಗಳು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗುತ್ತಿದೆ. ಮೊಂಟ್ರಾ ಎಲೆಕ್ಟ್ರಿಕ್‌ನ ಆಟೋ

ಮೂಡುಬಿದಿರೆ: ಮಾಂಟ್ರಾಡಿ ಗ್ರಾಮದಲ್ಲಿ ಕೂಸಿನ ಮನೆ ಉದ್ಘಾಟನೆ

ಮೂಡುಬಿದಿರೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಆಯ್ಕೆಯಾಗಿರುವ ಮೂಡುಬಿದಿರೆ ತಾಲೂಕಿನ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಂಟ್ರಾಡಿ ಗ್ರಾಮದಲ್ಲಿ ಕೂಸಿನ ಮನೆ  ಕೇಂದ್ರವು  ಉದ್ಘಾಟನೆಗೊಂಡಿತು.  ಪಂಚಾಯತ್ ಅಧ್ಯಕ್ಷ ಉದಯ್ ಪೂಜಾರಿ ಅವರು ಕೂಸಿನ ಮನೆಯನ್ನು  ಉದ್ಘಾಟಿಸಿ, ಗ್ರಾಮಸ್ಥರ ಪ್ರೋತ್ಸಾಹದಿಂದ ಹೆಚ್ಚಿನ ಮಕ್ಕಳ

ಮೂಡುಬಿದಿರೆ: ಪಂಚಾಯತ್ ಸಿಬ್ಬಂದಿ ಚಂದ್ರಹಾಸ್‌ ಗೆ ನುಡಿನಮನ

ಮೂಡುಬಿದಿರೆ: ಇತ್ತೀಚೆಗೆ ಅಕಾಲಿಕವಾಗಿ ಮರಣ ಹೊಂದಿರುವ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಸಿಬಂದಿ ದಿ.ಚಂದ್ರಹಾಸ್ ಅವರಿಗೆ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದ.ಕ.ಜಿಲ್ಲಾ ಪಂಚಾಯತ್, ಮೂಡುಬಿದಿರೆ ತಾಲೂಕು ಪಂಚಾಯತ್, ತಾ.ಪಂ.ವ್ಯಾಪ್ತಿಯ ಅಧಿಕಾರಿ ಮತ್ತು ನೌಕರರ ವತಿಯಿಂದ ಶನಿವಾರ ಸಮಾಜ ಮಂದಿರದಲ್ಲಿ ಶ್ರದ್ಧಾಂಜಲಿ ಅರ್ಪಿಸುವ ಸಭೆ ನಡೆಯಿತು.  

ಮೂಡುಬಿದಿರೆ: ಕರಾಟೆಯಲ್ಲಿ ವರ್ಲ್ಡ್ ರೆಕಾರ್ಡ್‌ಗೆ ಮೂಡುಬಿದಿರೆಯ ಮಹಮ್ಮದ್ ನದೀಂ ಭಾಜನ

ಮೂಡುಬಿದಿರೆ : 540 ಹಂಚುಗಳನ್ನು 1ನಿಮಿಷ 57 ಸೆಕೆಂಡುಗಳಲ್ಲಿ ಎರಡೂ ಕೈಗಳಿಂದ ಪುಡಿಗಟ್ಟುವ ಮೂಲಕ ಕರಾಟೆ ಪಟು ಮಹಮ್ಮದ್ ನದೀಂ ನೋಬಲ್ ವರ್ಲ್ಡ್ ರೆಕಾಡ್೯ಗೆ ಭಾಜನರಾದರು. ನೋಬಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯು ವಿವಿಧ ಕ್ಷೇತ್ರಗಳಲ್ಲಿ ನಡೆಯುವ ಸ್ಪರ್ಧೆಗಳ ಫಲಿತಾಂಶಗಳನ್ನು ದಾಖಲೀಕರಿಸಿ ನೋಬಲ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿಗೆ ಆಯ್ಕೆ ಮಾಡುವ ಸಂಸ್ಥೆಯಾಗಿದೆ.

ಉಳ್ಳಾಲ: ಕೇರಳಕ್ಕೆ ಗೋವಾ ಮದ್ಯ ಸಾಗಾಟ- ಆರೋಪಿ ಸೇರಿದಂತೆ ಮದ್ಯ, ವಾಹನ ವಶಕ್ಕೆ 

ಉಳ್ಳಾಲ : ಗೂಡ್ಸ್ ಟೆಂಪೋದಲ್ಲಿ ಗೋವಾ ಮದ್ಯದ ಪೆಟ್ಟಿಗೆಗಳನ್ನು  ಕೇರಳಕ್ಕೆ ಸಾಗಾಟ ನಡೆಸುತ್ತಿದ್ದ  ವ್ಯಕ್ತಿಯನ್ನು ಮುಡಿಪು- ನೆತ್ತಿಲಪದವು ಎಂಬಲ್ಲಿ ಅಬಕಾರಿ ಪೊಲೀಸರು  ಬಂಧಿಸಿ ಆತನಿಂದ ರೂ.6,87,720 ಮದ್ಯ ಹಾಗೂ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಿಂದೆಯೂ ತೆಂಗಿನ ಗೆರಟೆಗಳನ್ನು ಮೇಲಿಟ್ಟು ಸಾರಾಯಿ ಸಾಗಾಟ ನಡೆಸಿ ಬಂಧಿತನಾಗಿದ್ದ ಆರೋಪಿ ಇದೀಗ

ಕಾರ್ಕಳ: ಜ.21ರಿಂದ 26ರ ವರೆಗೆ ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕೋತ್ಸವ

ಅತ್ತೂರು ಸಂತ ಲಾರೆನ್ಸ್ ಬಸಿಲಿಕ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ಜ. 21ರಿಂದ 26ರ ವರೆಗೆ ನಡೆಯಲಿದ್ದು, 6 ದಿನಗಳ ಉತ್ಸವದ ಅವಧಿಯಲ್ಲಿ ಕೊಂಕಣಿ ಭಾಷೆಯಲ್ಲಿ 45, ಕನ್ನಡ ಭಾಷೆಯಲ್ಲಿ 3 ಒಟ್ಟು 48 ಬಲಿ ಪೂಜೆಗಳು ನಡೆಯಲಿದೆ ಎಂದು ಸಂತ ಲಾರೆನ್ಸರ ಬಸಿಲಿಕ ಧರ್ಮಗುರು ಅಲ್ಬನ್ ಡಿಸೋಜಾ ಹೇಳಿದರು. ಅವರು ಕಾರ್ಕಳ ಅತ್ತೂರು ಚರ್ಚ್‌ನಲ್ಲಿ ನಡೆದ

ನೆಲ್ಯಾಡಿ: ಸಂತ ಜಾರ್ಜ್ ಪದಪೂರ್ವ ಕಾಲೇಜಿನಲ್ಲಿ ಯುವ ಸಪ್ತಾಹ ಕಾರ್ಯಕ್ರಮ

ನೆಲ್ಯಾಡಿ: ಇಲ್ಲಿನ ಸಂತ ಜಾರ್ಜ್ ಪ.ಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ವಿವೇಕ ಜಯಂತಿ ರಾಷ್ಟ್ರೀಯ ಯುವ ದಿನದ ಅಂಗವಾಗಿ ಯುವ ಸಪ್ತಾಹ ಕಾರ್ಯಕ್ರಮ ಜ.12ರಂದು ಸಂಸ್ಥೆಯ ಸಂಚಾಲಕರಾದ ರೆ.ಫಾ.ನೋಮಿಸ್ ಕೊರಿಯಾಕೋಸ್ ರವರ ಮಾರ್ಗದರ್ಶನದಲ್ಲಿ ಆರಂಭಗೊಂಡಿತು. ಬೆಥನಿ ಕೈಗಾರಿಕಾ ತರಬೇತಿ ವಿದ್ಯಾಸಂಸ್ಥೆಯ ಉಪನ್ಯಾಸಕರಾದ ಜೋನ್ ಪಿ.ಎಸ್. ರವರು ದೀಪ ಬೆಳಗಿಸುವ ಮೂಲಕ

ಮಂಗಳೂರು: ಜ.15ರಂದು ಕದ್ರಿಯಲ್ಲಿ ವಿಶ್ವಪ್ರಸನ್ನ ತೀರ್ಥರಿಗೆ ಸಾರ್ವಜನಿಕ ಗುರುವಂದನೆ

ಮಂಗಳೂರು: “ವಿಶ್ವ ಹಿಂದೂ ಪರಿಷತ್ ವತಿಯಿಂದ ಜ.15ರಂದು ಸಂಜೆ 7 ಗಂಟೆಗೆ ಶ್ರೀ ಕ್ಷೇತ್ರ ಕದ್ರಿಯ ರಾಜಾಂಗಣದಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಸಾರ್ವಜನಿಕ ಗುರುವಂದನೆ ಕಾರ್ಯಕ್ರಮ ಜರುಗಲಿದೆ” ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್ ಕೆ ಪುರುಷೋತ್ತಮ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಅಂದಿನ ಕಾರ್ಯಕ್ರಮದಲ್ಲಿ ಕದಳಿ ಶ್ರೀ