ಕೊಕ್ಕಡ:ಅನಾರು-ಪಟ್ರಮೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 2024ರ ಕ್ಯಾಲೆಂಡರ್ ಬಿಡುಗಡೆ
ಕೊಕ್ಕಡ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅನಾರು -ಪಟ್ರಮೆ ಇದರ 2024 ವರ್ಷದ ಕ್ಯಾಲೆಂಡರ್ ನ್ನು ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರರಾದ ನಿತೇಶ್ ಬಲ್ಲಾಳ್ ದೇವಸ್ಥಾನದ ಆವರಣದಲ್ಲಿ ಬಿಡುಗಡೆಗೊಳಿಸಿದರು.
ಈ ಸಂಧರ್ಭದಲ್ಲಿ ಪವಿತ್ರಪಾಣಿ ಶ್ರೀಧರ ಶಬರಾಯ ಅಕ್ಕೋ, ಅರ್ಚಕರಾದ ಗುರುಪ್ರಸಾದ್ ನಿಡ್ವಣ್ಣಾಯ, ದೇವಪಾಲ ಅಜ್ರಿ ಉಳಿಯಬೀಡು, ಜಾತ್ರಾ ಸಮಿತಿ ಅಧ್ಯಕ್ಷ ಹರೀಶ್ ಅಪ್ರೋಡಿ, ಯುವರಾಜ್ ಜೈನ್ ಉಳಿಯಬೀಡು, ಚಂದ್ರಶೇಖರ ಗೌಡ ಅನಾರು, ನಿರಂಜನ್ ಜೈನ್ ಉಳಿಯಬೀಡು, ಜಿನ್ನಪ್ಪ ಗೌಡ ನೆಕ್ಕಿಲು, ರುಕ್ಮಯ್ಯ ಗೌಡ ನೆಕ್ಕಿಲು, ನೀಲಯ್ಯ ಹಿರ್ತಡ್ಕ, ಆನಂದ ಮೂರ್ಲೆಗುಂಡಿ, ರಾಘವ ಗೌಡ ಅನಾರು, ಗೋವಿಂದ ಗೌಡ ಹೊಸಮನೆ, ಚಂದ್ರಶೇಖರ ಪಟ್ರಮೆ, ಪುರಂದರ ಸೂರ್ಯತಾವು, ಪ್ರಸನ್ನ ನೆಕ್ಕಿಲು, ವಿಠಲ ಓಟಕಜೆ, ಸೂರಪ್ಪ ಕೇರಿಕಟ್ಟೆ, ಮತ್ತಿತರರು ಉಪಸ್ಥಿತರಿದ್ದರು.