ಪುತ್ತೂರು: ತನಿಯ ಮೋಟಾರ್ಸ್ಸ್‌ನ ಶೋರೂಂ ಶುಭಾರಂಭ

ಮೊಂಟ್ರಾ ಇಲೆಕ್ಟ್ರಿಕ್‌ನ ಅಧಿಕೃತ ಡೀಲರ್ ತನಿಯ ಮೋಟಾರ್‍ಸ್‌ನ ಮತ್ತೊಂದು ಶೋರೂಂ ಪುತ್ತೂರಿನ ದಾರಂದಕುಕ್ಕು ಡಿಕೆ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.
ಭಾರತದಲ್ಲಿ ಇಲೆಕ್ಟ್ರಿಕ್ ವಾಹನಗಳ ಬೇಡಿಕೆ ಹಾಗೂ ಉತ್ಪಾದನೆ ಹೆಚ್ಚಾಗುತ್ತಿದೆ. ಇದೀಗ ತ್ರಿಚಕ್ರದ ವಾಹನಗಳು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗುತ್ತಿದೆ. ಮೊಂಟ್ರಾ ಎಲೆಕ್ಟ್ರಿಕ್‌ನ ಆಟೋ ಮಾರುಕಟ್ಟೆಗೆ ಬಿಡುಗಡೆಗೊಳ್ಳುತ್ತಿದೆ. ಒಂದು ಬಾರಿ ಚಾರ್ಜ್ ಮಾಡಿದ್ರೆ 197 ಕಿಲೋ ಮೀಟರ್‌ಗಳ ಅತ್ಯುತ್ತಮ ಮೈಲೇಜ್ ರೇಂಜ್‌ನ್ನು ಒದಗಿಸುತ್ತದೆ.

ಇದೀಗ ಪುತ್ತೂರಿನ ದಾರಂದಕುಕ್ಕು ಡಿಕೆ ಕಾಂಪ್ಲೆಕ್ಸ್‌ನಲ್ಲಿ ತನಿಯ ಮೋಟಾರ್‍ಸ್ ಕಾರ್ಯಾರಂಭಗೊಂಡಿತು. ನೂತನ ಶೋರೂಂನ್ನು ಶಾಸಕರಾದ ಅಶೋಕ್ ಕುಮಾರ್ ರೈ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮೊಂಟ್ರಾ ಎಲೆಕ್ಟ್ರಿಕ್‌ನ ಆಟೋವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಇದೇ ವೇಳೆ ಮಾತನಾಡಿದ ಅವರು, ಬೆಳೆಯುವಂತಹ ಪುತ್ತೂರಿನಲ್ಲಿ ತನಿಯ ಮೋಟಾರ್‍ಸ್‌ನ ಶೋರೂಂ ಉದ್ಘಾಟನೆಗೊಂಡಿರುವುದು ನಮ್ಮ ಹೆಮ್ಮೆ. ಉದ್ಯಮಿಯಾಗಿರುವ ಗೌತಮ್ ಅವರ ಮಾಲಕತ್ವದಲ್ಲಿ ಈ ಶೋರೂಂ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ಯಶಸ್ಸನ್ನು ಕಾಣಲಿ ಎಂದು ಹಾರೈಸಿದರು.


ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ಅವರು ಮಾತನಾಡಿ, ಇವತ್ತು ಹೆಚ್ಚೆಚ್ಚು ವಿದ್ಯುತ್ ಚಾಲಿತ ವಾಹನಗಳು ಬರುವ ಸಮಯ. ಪರಿಸರ ಮಾಲಿನ್ಯವನ್ನು ಹೋಗಲಾಡಿಸಲು ಇಂತಹ ಇಲೆಕ್ಟ್ರಿಕ್ ವಾಹನಗಳು ಬಹಳ ಉಪಯುಕ್ತವಾಗಿದೆ. ಗೌತಮ್ ಅವರ ಮುಂದಾಳತ್ವದಲ್ಲಿ ಈ ಶೋರೂಂ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.

ವಕೀಲರಾದ ರಾಘವೇಂದ್ರ ರಾವ್ ಅವರು ಮಾತನಾಡಿ, ಗೌತಮ್ ಅವರು ಯಶಸ್ವಿ ಉದ್ಯಮಿಯಾಗಿದ್ದು, ಇತ್ತೀಚೆಗೆ ಉಡುಪಿಯಲ್ಲಿ ಕೂಡ ಶೋರೂಂ ಆರಂಭಗೊಂಡಿದ್ದು, ಗ್ರಾಹಕರ ಸ್ಪಂದನೆ ಉತ್ತಮ ರೀತಿಯಲ್ಲಿದೆ. ಇದೀಗ ಪುತ್ತೂರಿನಲ್ಲಿ ತನಿಯ ಮೋಟಾರ್‍ಸ್ ಕಾರ್ಯಾರಂಭಗೊಂಡಿದ್ದು, ಗ್ರಾಹಕರು ಉತ್ತಮ ಸ್ಪಂದನೆಯನ್ನು ನೀಡಲಿ ಎಂದರು.

ಪುತ್ತೂರು ಪುರಸಭೆಯ ಮಾಜಿ ಅಧ್ಯಕ್ಷರಾದ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಅವರು ಮಾತನಾಡಿ ನೂತನ ಶೋರೂಂಗೆ ಶುಭ ಹಾರೈಸಿದರು.



ಈ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೇಶವ ಭಂಡಾರಿ ಬೆಳ್ಳಿಪ್ಪಾಡಿ, ನಾಯಕ್ ಸೇಲ್ಸ್ ಕಾರ್ಪೋರೇಶನ್‌ನ ಮಾಲಕರಾದ ರಾಕೇಶ್ ನಾಯಕ್, ನಿವೃತ್ತ ಅರಣ್ಯಾಧಿಕಾರಿ ಕೃಷ್ಣಪ್ಪ ಕೆ, ಬನ್ನೂರು ಗ್ರಾ.ಪಂ. ಅಧ್ಯಕ್ಷರಾದ ಸ್ಮಿತ ಎನ್. ಕೆಮ್ಮಾಯಿ ಬದ್ರಿಯಾ ಜುಮ್ಮಾ ಮಸೀದಿನ ಅಧ್ಯಕ್ಷರಾದ ಎ.ಕೆ. ಬಶೀರ್ ಹಾಜಿ, ಪೊಲೀಸ್ ಅಧಿಕಾರಿ ಲಕ್ಷ್ಮೇಶ ಗೌಡ, ಹಾಗೂ ತನಿಯ ಮೋಟಾರ್‍ಸ್‌ನ ಮಾಲಕರಾದ ಗೌತಮ್ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.
ನವೀನ್ ಕುಲಾಲ್ ಅವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.