Home 2025 January (Page 6)

ಮಂಗಳೂರು: ಜ.19ರಂದು ಮಂಗಳೂರಿನಲ್ಲಿ “ವಿಶಿಷ್ಟರಿಗಾಗಿ ವಿಶಿಷ್ಟ ಮೇಳ”

ಮಂಗಳೂರು: ಸೇವಾ ಭಾರತಿ(ರಿ) ಮಂಗಳೂರು ಕಳೆದ 33 ವರ್ಷಗಳಿಂದ ದಿವ್ಯಾಂಗರ ಜೀವನ ಸ್ತರ ಸುಧಾರಿಸಲು ಶ್ರಮಿಸುತ್ತಿದೆ. ತನ್ನ ಅಂಗಸಂಸ್ಥೆಗಳ ಮೂಲಕ ಅವರಿಗೆ ಅವಶ್ಯವಿರುವ ಶಿಕ್ಷಣ, ತರಬೇತಿ, ಚಿಕಿತ್ಸೆ ಇತ್ಯಾದಿ ಈ ಪೈಕಿ 1998ರಲ್ಲಿ ಸೌಕರ್ಯಗಳನ್ನು ಒದಗಿಸಿಕೊಟ್ಟು ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಆರಂಭವಾದ “ಆಶಾಜ್ಯೋತಿ”ಯೂ ಒಂದು.

ಮೂಡುಬಿದಿರೆ: ಸಮಾಜ ಸೇವಕ, ಹೊಸಂಗಡಿ ಗ್ರಾಂ.ಪಂ.ಮಾಜಿ ಅಧ್ಯಕ್ಷ ಹರಿಪ್ರಸಾದ್ ನಿಧನ

ಮೂಡುಬಿದಿರೆ: ಸಮಾಜ ಸೇವಕ, ಹೊಸಂಗಡಿ ಗ್ರಾ.ಪಂ.ನ ಮಾಜಿ ಅಧ್ಯಕ್ಷ, ಪ್ರಸ್ತುತ ಸದಸ್ಯರಾಗಿರುವ ಹರಿಪ್ರಸಾದ್ ಅವರು ಹೃದಯಾಘಾತದಿಂದ ಭಾನುವಾರ ನಿಧನ ಹೊಂದಿದರು. ಹೊಸಂಗಡಿ ನಿವಾಸಿಯಾಗಿರುವ ಅವರು ಹರಿಯಣ್ಣ ಎಂದೇ ಚಿರಪರಿಚಿತರಾಗಿದ್ದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಧರಣೇಂದ್ರ ಕುಮಾರ್ ಅವರ ಸಹೋದರ. ಪೆರಾಡಿ ಸೊಸೈಟಿ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವುದು

ಮೂಲ್ಕಿ : ಕ್ಯಾನ್ ಕೋಸ್ ಗಿವ್ ವೇ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಮೂಲ್ಕಿಯ ಕ್ಯಾನ್ ಕೋಸ್ ಡ್ರೈ ಫ್ರುಡ್ಸ್ ಸ್ಟೋರ್ ಮೂಲ್ಕಿ ಯಲ್ಲಿ ಕ್ಯಾನ್ ಕೋಸ್ ಗಿವ್ ವೇ ಎಂಬ ಸ್ಪರ್ಧೆಯನ್ನು ಸೋಶಿಯಲ್ ಮೀಡಿಯಾ ಕಾಂಪೊಸಿವ್ ನಲ್ಲಿ ಏರ್ಪಡಿಸಲಾಗಿತ್ತು ಇದಕ್ಕೆ ಸಂಬಂಧ ಪಟ್ಟ ಹತ್ತಿರದ ಉತ್ತರವನ್ನು ನೀಡಿದ ಆಯುಷ್ ಪೂಜಾರಿ ಯವರು ವಿಜೇತರಾದರು. ಪ್ರಶಸ್ತಿಯನ್ನು ಮೂಲ್ಕಿಯ ಲಯನ್ಸ್ ಕ್ಲಬ್ ಅಧ್ಯಕ್ಷರಾದ ರೊಲ್ಪಿ ಡಿ’ಕೊಸ್ತ ವಿಜೇತರಿಗೆ

ಪುತ್ತೂರು : ‘ಇಲ್ಲಗೊಂಜಿ ಗೇನೊದ ಬಂಡಾರ’ – ತುಳು ಅಕಾಡೆಮಿಯ ಮನೆ ಮನೆ ಗ್ರಂಥಾಲಯ ಅಭಿಯಾನಕ್ಕೆ ಚಾಲನೆ

ಕರ್ನಾಟ‌ಕ ತುಳು ಸಾಹಿತ್ಯ ಅಕಾಡೆಮಿಯು ಹಮ್ಮಿಕೊಂಡಿರುವ ‘ಇಲ್ಲಗೊಂಜಿ ಗೇನೊದ‌ ಬಂಡಾರ’ ( ಮನೆಗೊಂದು ತುಳು ಗ್ರಂಥಾಲಯ) ಅಭಿಯಾನಕ್ಕೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಕೋಡಿಂಬಾಡಿಯ ಮನೆಯಲ್ಲಿ ಶನಿವಾರ ಚಾಲನೆ‌ ನೀಡಲಾಯಿತು. ಅಕಾಡೆಮಿ ಪ್ರಕಟಿಸಿದ ಹಾಗೂ ಇತರ ತುಳು ಪುಸ್ತಕಗಳು ಸೇರಿದಂತೆ ಹತ್ತು ಸಾವಿರ ರೂಪಾಯಿ ಮೌಲ್ಯದ 150 ಕೃತಿಗಳನ್ನು

ಪುತ್ತೂರು: ನಿರೂಪಕರಾದ ಬಾಲಕೃಷ್ಣ ರೈ ಪೊರ್ದಾಲ್ ರವರಿಗೆ ಪುತ್ತೂರು ತಾಲೂಕು ಯುವ ಪ್ರಶಸ್ತಿ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು, ತಾಲೂಕು ಯುವಜನ ಒಕ್ಕೂಟ ಪುತ್ತೂರು ಇವುಗಳ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಕೊಡಮಾಡುವ ಪುತ್ತೂರು ತಾಲೂಕು ಯುವ ಪ್ರಶಸ್ತಿಗೆ ಖ್ಯಾತ ನಿರೂಪಕರಾದ ಬಾಲಕೃಷ್ಣ ರೈ ಪೊರ್ದಾಲ್ ಆಯ್ಕೆಯಾಗಿದ್ದಾರೆ. ಪುತ್ತೂರು ದರ್ಬೆ ಲಿಟ್ಲ್ ಫ್ಲವರ್ ಹಿರಿಯ

ಮುಖ್ಯಮಂತ್ರಿಗೆ ಭಿತ್ತಿಪತ್ರ ಪ್ರದರ್ಶಿಸಿ ಘೇರಾವ್‌ಗೆ ಯತ್ನ: ನಂತೂರು ಬಳಿ ಡಿವೈಎಫ್‌ ಐ ಕಾರ್ಯಕರ್ತರು ಪೊಲೀಸ್ ವಶಕ್ಕೆ

ಮಂಗಳೂರು: ನಗರಕ್ಕೆ ಆಗಮಿಸುವ ಸಿಎಂ ಸಿದ್ದರಾಮಯ್ಯಗೆ ಭಿತ್ತಿಪತ್ರ ಪ್ರದರ್ಶಿಸಿ ಘೆರಾವ್ ಹಾಕಲು ಸಿದ್ಧತೆಯಲ್ಲಿರುವಾಗಲೇ ಡಿವೈಎಫ್‌ಐ ಮುಖಂಡರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.  ನಗರದ ಹೊರವಲಯ ನರಿಂಗಾನದಲ್ಲಿ ಸ್ಪೀಕರ್ ಯು.ಟಿ.ಖಾದರ್ ನೇತೃತ್ವದಲ್ಲಿ ನಡೆಯುವ ಕಂಬಳದಲ್ಲಿ ಭಾಗವಹಿಸಲು ಸಿಎಂ ಸಿದ್ದರಾಮಯ್ಯ ಶನಿವಾರ ಸಂಜೆ ಮಂಗಳೂರಿಗೆ

ಬಿ.ಸಿ.ರೋಡು ಅಡ್ಡಹೊಳೆ ಚತುಷ್ಫಥ ಹೆದ್ದಾರಿ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ಬಂಟ್ವಾಳ: ಬಿ.ಸಿ.ರೋಡು ಅಡ್ಡಹೊಳೆ ಚತುಷ್ಫಥ ಹೆದ್ದಾರಿ ಕಾಮಗಾರಿಯ ಪ್ರಗತಿಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾಣಿ, ಸೂರಿಕುಮೇರು, ಕಲ್ಲಡ್ಕ, ಮೆಲ್ಕಾರ್, ನೆಹರುನಗರದಲ್ಲಿ ಅಭಿವೃದ್ದಿ ಕಾಮಗಾರಿಯ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಎಂಜಿನಿಯರ್ ಹಾಗೂ ಗುತ್ತಿಗೆ ಸಂಸ್ಥೆ ಕೆಎನ್‌ಆರ್‌ಸಿಯ ಅಧಿಕಾರಿಗಳೊಂದಿಗೆ

ಕಡಬದ ಸೈಂಟ್ ಆನ್ಸ್ ಶಾಲೆಯಲ್ಲಿ ಮಾರ್ಗದರ್ಶನ ಶಿಬಿರ

ಕಡಬದ ಸೈಂಟ್ ಆನ್ಸ್ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧತೆಗೊಳಿಸಲು ಕಲಿಕಾ ಬಲವರ್ಧನೆ ಹಾಗೂ ವೃತ್ತಿ ಮಾರ್ಗದರ್ಶನ ಶಿಬಿರವನ್ನು ಆಯೋಜಿಸಲಾಗಿತ್ತು. ಪುತ್ತೂರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂಟ ಅಶೋಕ್ ರಾಯನ್ ಕ್ರಾಸ್ತ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹೇಗೆ ತಯಾರಿಯಾಗಬೇಕು, ಓದುವ ವಿಧಾನ ಹಾಗೂ ಗುರಿ

ಉಡುಪಿ : ಉದ್ಯಾವರದಲ್ಲಿ ಈಚರ್ ಲಾರಿ, ಬೈಕ್ ನಡುವೆ ಢಿಕ್ಕಿ – ಬೈಕ್ ಸವಾರ ಮೃತ್ಯು

ಉದ್ಯಾವರ ಗುಡ್ಡೆ ಅಂಗಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ನಸುಕಿನ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಈಚರ್ ಲಾರಿ ಹೊತ್ತಿ ಉರಿದಿದ್ದು ಬೈಕ್ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಬೈಕ್ ಸವಾರ ಕೊರಂಗ್ರಪಾಡಿ ನಿವಾಸಿ ಅವಿನಾಶ್ ಆಚಾರ್ಯ( 19 ) ಎಂದು ಗುರುತಿಸಲಾಗಿದೆ. ಗುಜರಾತ್ ಕಡೆಯಿಂದ ಕೇರಳ ಕಡೆಗೆ ಬರುತ್ತಿದ್ದ ಈಚರ್ ಲಾರಿ

ಮಂಜೇಶ್ವರ : ಜ.19ರಿಂದ ಜ.24ರವರೆಗೆ ಶ್ರೀ ಕ್ಷೇತ್ರ ಸಂತಡ್ಕ ಮಾಡದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ವಾರ್ಷಿಕ ಜಾತ್ರಾ ಮಹೋತ್ಸವ

ಮಂಜೇಶ್ವರ ಕುಳೂರು ಸಂತಡ್ಕದ ಶ್ರೀ ಅರಸು ಸಂಕಲ ದೈವ ಕ್ಷೇತ್ರ ಶ್ರೀ ಕ್ಷೇತ್ರ ಸಂತಡ್ಕ ಮಾಡದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವವು ಜ.19ರಿಂದ ಜ.24ರವರೆಗೆ ನಡೆಯಲಿದೆ. ಜ.19ರಿಂದ ಜ.22ರವರೆಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಜ.23, 24ರಂದುವಾರ್ಷಿಕ ಜಾತ್ರಾ ಮಹೋತ್ಸವವು ನಡೆಯಲಿದೆ. ಜ.16ರಂದು ಗೊನೆಮುಹೂರ್ತ,