ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಆದರ್ಶ್ ಶೆಟ್ಟಿ ನೆಲ್ಯಾಡಿ
ನೆಲ್ಯಾಡಿ: ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಅಮೆಚೂರ್ ಕ್ರೀಡಾಕೂಟದಲ್ಲಿ ಆದರ್ಶ್ ಶೆಟ್ಟಿ ಇವರು ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ತೆಲಂಗಾಣದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ದೈಹಿಕ ಶಿಕ್ಷಕರಾದ ಏಲಿಯಸ್ ಪಿಂಟೋ, ರಾಜೇಶ್ ಮೂಲ್ಯ ಹಾಗೂ ಪುಷ್ಪರಾಜ್ ಇವರಿಗೆ ತರಬೇತಿಯನ್ನು ನೀಡಿದ್ದಾರೆ.
ಪ್ರಸ್ತುತ ಇವರು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ. ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ಹಳೆವಿದ್ಯಾರ್ಥಿ.
ನೆಲ್ಯಾಡಿ ಅಶ್ವಮೇಧ ಕ್ಯಾಟರರ‍್ಸ್ ಮಾಲಕರಾದ ರತ್ನಾಕರ ಶೆಟ್ಟಿ ಮತ್ತು ಶ್ರೀಮತಿ ಹೇಮಲತಾ ಅವರ ಪುತ್ರ