ಮಂಗಳೂರು : ಜ.6 ರಂದು “ಸ್ಪೆಕ್ಟ್ರಮ್-2024” ಒಂದು ದಿನದ ಕಾರ್ಡಿಯಾಲಜಿ ಸಮ್ಮೇಳನ

ಮಂಗಳೂರು : ಎ.ಜೆ. ಆಸ್ಪತ್ರೆ & ಸಂಶೋಧನ ಕೇಂದ್ರದ ಕಾರ್ಡಿಯಾಲಜಿ ವಿಭಾಗದ ವತಿಯಿಂದ ಒಂದು ದಿನದ ಕಾರ್ಡಿಯಾಲಜಿ ಸಮ್ಮೇಳನ “ಸ್ಪೆಕ್ಟ್ರಮ್ – 2024” ಅನ್ನು ಜನವರಿ 6, 2024 ರಂದು ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿರುವ “ದಿ ಓಶಿಯನ್ ಪರ್ಲ್” ಹೋಟೆಲ್ನಲ್ಲಿ ಆಯೋಜಿಸಲಾಗಿದೆ ಎಂದು ಆಯೋಜಕ ಸಮಿತಿಯ ಅಧ್ಯಕ್ಷ ಹಾಗೂ ಎ.ಜೆ. ಆಸ್ಪತ್ರೆ & ಸಂಶೋಧನ ಕೇಂದ್ರದ ಮುಖ್ಯ ಕಾರ್ಡಿಯಾಲಜಿಸ್ಟ್ ಎ.ಜೆ. ವೈದ್ಯಕೀಯ ವಿಜ್ಞಾನ ಸಂಸ್ಥೆ & ಸಂಶೋಧನ ಕೇಂದ್ರದ ಪ್ರೊಫೆಸರ್ ಮತ್ತು ಎಚ್‌ಒಡಿ ಡಾ. ಬಿ.ವಿ. ಮಂಜುನಾಥ್ ಹೇಳಿದ್ದಾರೆ.
ಸ್ಪೆಕ್ಟ್ರಮ್ ಅನ್ನು 2012 ರಲ್ಲಿ ಪ್ರಾರಂಭಿಸಲಾಗಿದ್ದು, ಇದು 13 ನೇ ಆವೃತ್ತಿ ಯ ಸ್ಪೆಕ್ಟ್ರಮ್ ಆಗಿದೆ. ಹೃದಯ ಸಂಬಂಧಿ ವಿಷಯಗಳ ಕುರಿತು ಚರ್ಚೆ, ಉಪನ್ಯಾಸ, ಮತ್ತು ಸಂವಾದಗಳ ರೋಚಕ ಕಾರ್ಯಕ್ರಮ ಇದಾಗಿದ್ದು, ಕರ್ನಾಟಕ ಮತ್ತು ನೆರೆಯ ರಾಜ್ಯಗಳಿಂದ 250ಕ್ಕೂ ಹೆಚ್ಚು ವೈದ್ಯರು, ತಜ್ಞರು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ನಮ್ಮ ದೇಶದ ಮತ್ತು ವಿದೇಶದ ಪ್ರಮುಖ ವೈದ್ಯಕೀಯ ತಜ್ಞರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೃದಯರೋಗಶಾಸ್ತ್ರದ ವಿವಿಧ ಕ್ಷೇತ್ರಗಳಲ್ಲಿ ಉಪನ್ಯಾಸಗಳು, ಚರ್ಚೆಗಳು, ಮತ್ತು ಸಂವಾದಾತ್ಮಕ ಅವಧಿಗಳು ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.