ಅಖಿಲ ಭಾರತ ವಕೀಲೆಯರ ರಾಜ್ಯ ಸಮಾವೇಶ
ಭ್ರಷ್ಟಾಚಾರದ ಕಾರಣಕ್ಕೆ ಭಾರತದ ಶಾಸಕಾಂಗ, ಕಾರ್ಯಾಂಗಗಳು ಜನರ ವಿಶ್ವಾಸ ಕಳೆದುಕೊಂಡಿದ್ದರೂ ನ್ಯಾಯಾಂಗವು ಜನರ ನಂಬಿಕೆ ಉಳಿಸಿಕೊಂಡಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಂ. ಜಿ. ಉಮಾ ಹೇಳಿದರು.
ಅವರು ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದ ಹಾಲ್‍ನಲ್ಲಿ ನಡೆದ ಮಹಿಳಾ ವಕೀಲರ ರಾಜ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ನ್ಯಾಯಾಂಗವು ಬಲವಾಗಿದ್ದರೆ ಪ್ರಜಾಪ್ರಭುತ್ವವೂ ಗಟ್ಟಿ. ಭಾರತದ ನ್ಯಾಯಾಂಗ ಅಚಲವಾಗಿದೆ. ಆದರೆ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ 15% ಮಾತ್ರ ಮಹಿಳೆಯರು ಇದ್ದಾರೆ. ಇದು ಹೆಚ್ಚಾಗಬೇಕು ಎಂದು ಅವರು ಹೇಳಿದರು.
ಅಖಿಲ ಭಾರತ ವಕೀಲರ ಸಂಘಟನೆಯ ಮಹಿಳಾ ವಿಭಾಗದ ಅಧ್ಯಕ್ಷೆ ಈರಮ್ಮ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸೆಶನ್ಸ್ ನ್ಯಾಯಮೂರ್ತಿ ಮಾರುತಿ ಬಾಗಡೆ, ಅಖಿಲ ಭಾರತ ವಕೀಲರ ಸಂಘದ ಚಮಕಿರಾಜ್, ವಕೀಲರ ನಾಯಕಿ ಸವಿತಾ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.