ಜ.20 : ಆಳ್ವಾಸ್ ನಲ್ಲಿ ಯಕ್ಷ ರಂಗಾಯಣದ ಪರಶುರಾಮ ನಾಟಕ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡುಬಿದಿರೆ ,ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಇದರ ಆಶ್ರಯದಲ್ಲಿ, ವಿದ್ಯಾಗಿರಿಯ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಾಳೆ (ಜ.20)ಸಂಜೆ 6.45 ಕ್ಕೆ ಯಕ್ಷ ರಂಗಾಯಣ ಕಾರ್ಕಳ ಇದರ ಕಲಾವಿದರು ಅಭಿನಯಿಸುವ ಪರಶುರಾಮ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಶಶಿರಾಜ್ ಕಾವೂರು ರಚಿಸಿದ ಈ ನಾಟಕವನ್ನು ಡಾ||ಜೀವನ್ ರಾಂ ಸುಳ್ಯ ನಿರ್ದೇಶಿಸಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವರು ನಾಟಕ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ತುಳುನಾಡಿನ ಸೃಷ್ಟಿಕರ್ತನೆಂದೇ ಕರಾವಳಿಯಲ್ಲಿ ಕರೆಯಲ್ಪಡುವ ಪರಶುರಾಮನ ಕಥೆಯನ್ನು ರಂಗಾಭಿನಯ, ರಂಗವಿನ್ಯಾಸ, ಸಂಗೀತ, ಬೆಳಕು ಸಂಯೋಜನೆ ಇತ್ಯಾದಿಗಳಿಂದ ಬಹಳ ವಿಭಿನ್ನವಾಗಿ ಹೆಣೆಯಲಾಗಿದೆ. ಸಮಯಕ್ಕೆ ಸರಿಯಾಗಿ ನಡೆಯುವ ಈ ನಾಟಕಕ್ಕೆ ಮುಕ್ತ ಅವಕಾಶವಿದೆ.