ಅಮರನಾಥ ಯಾತ್ರೆ ಕೈಗೊಂಡಿದ್ದ ದ.ಕ. ಜಿಲ್ಲೆಯ ಯಾತ್ರಾರ್ಥಿಗಳು ಸುರಕ್ಷಿತ
ಬಂಟ್ವಾಳ: ಜಮ್ಮು ಕಾಶ್ಮೀರದ ಪವಿತ್ರ ಅಮರನಾಥ ಯಾತ್ರೆ ಕೈಗೊಂಡಿದ್ದ ದ.ಕ.ಜಿಲ್ಲೆಯ ವಿವಿಧ ತಾಲೂಕಿನ ಒಟ್ಟು ೨೦ ಮಂದಿ ಯಾತ್ರಾರ್ಥಿಗಳು ಸುರಕ್ಷಿತವಾಗಿ ಸಿ.ಆರ್.ಪಿ.ಎಫ್ ನ ಕ್ಯಾಂಪ್‌ನಲ್ಲಿ ಇರುವುದಾಗಿ ತಿಳಿದು ಬಂದಿದೆ.
ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಸಂತೋಷ್ ಎಂಬವರ ಜೊತೆ ಕಳೆದ ಜಿಲೈ 4 ರಂದು 20 ಮಂದಿ ಯಾತ್ರಾರ್ಥಿಗಳು ಯಾತ್ರೆ ಕೈಗೊಂಡಿದ್ದರು. ಅತಿಯಾದ ಮಳೆಗೆ ಭೂಕುಸಿತ ಉಂಟಾದ ಹಿನ್ನಲೆಯಲ್ಲಿ ಜು.7 ರಿಂದ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.
ಸಂತೋಷ್ ನರಿಕೊಂಬು ಅವರನ್ನೊಳಗೊಂಡ 20 ಜನ ಯಾತ್ರಾರ್ಥಿಗಳ ತಂಡ ಅತ್ತ ಅಮರನಾಥ ದೇವಲಯಕ್ಕೂ ಹೋಗಲು ಸಾಧ್ಯವಾಗದೆ, ಇತ್ತ ಜಮ್ಮು ಕಾಶ್ಮೀರ ಕ್ಕೂ ಹೋಗಲು ಸಾಧ್ಯವಾಗದೆ ಸಿ.ಆರ್.ಪಿ.ಎಫ್ ಕ್ಯಾಂಪ್ ನಲ್ಲಿ ಉಳಿದಿದ್ದಾರೆ. ರೈಲಿನ ಮೂಲಕ ಇವರು ಯಾತ್ರೆ ಕೈಗೊಂಡಿದ್ದು, ಅಮರನಾಥ ಯಾತ್ರೆ ಬಳಿಕ ವೈಷ್ಣೋದೇವಿ ಯಾತ್ರೆ ಮಾಡಲಿದ್ದಾರೆ.
ನರಿಕೊಂಬಿನಿಂದ ಒಟ್ಟು 5. ಮಂದಿ, ಅಡ್ಯಾರ್ ನಿಂದ 8 ಮಂದಿ, ಪುತ್ತೂರಿನಿಂದ 1, ಉಡುಪಿಯಿಂದ 1 , ಮೂಡಬಿರೆಯಿಂದ 1 , ಸಜೀಪದಿಂದ 3, ಉಪ್ಪಿನಂಗಡಿ ಕರಾಯದಿಂದ 1 ಹೀಗೆ ಒಟ್ಟು 20 ಯಾತ್ರಾರ್ಥಿಗಳು ಯಾತ್ರೆಗೆ ತೆರಳಿದ್ದಾರೆ.