ಮಹಾಪ್ರಭು ಮೋದಿಯವರ ಮುಖದಲ್ಲಿ ಆತಂಕ : ಪ್ರಕಾಶ್ ರಾಜ್

400 ಬಿಡಿ 200 ಕೂಡ ಕಷ್ಟ ಎಂಬ ಆತಂಕ ಮಹಾಪ್ರಭು ಮೋದಿಯವರ ಮುಖದಲ್ಲಿ ಕಾಣಿಸುತ್ತಿದೆ. ಆದರೂ ರಾಜ ಸೋಗಿನಲ್ಲಿ ಸುತ್ತುತ್ತಿದ್ದಾರೆ ಎಂದು ನಟ ರಾಜಕಾರಣಿ ಪ್ರಕಾಶ್ ರಾಜ್ ಹೇಳಿದರು.
ಅವರು ಮೈಸೂರಿನಲ್ಲಿ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ್ದ 133ನೇ ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಮಹಾಪ್ರಭುವಿಗೆ ಬೇಕಾದುದು ವಿದೂಷಕರ ತಂಡ. ಕರ್ನಾಟಕದಿಂದ ಲೋಕ ಸಭೆಗೆ ಆಯ್ಕೆ ಆಗಿದ್ದ 27 ಮಂದಿ ಕೂಡ ವಿದೂಷಕರು. ಈ ಬಾರಿ ಅದಕ್ಕೆ ಅವಕಾಶ ನೀಡಬೇಡಿ. ಮಹಾಪ್ರಭು ಎನ್ನುವುದೇ ಸಂವಿಧಾನಕ್ಕೆ ಅಪಚಾರ. ಈ ರಾಜಕೀಯ ಪಕ್ಷಗಳಲ್ಲ; ನೀವು ಆ ಅಪಚಾರ ಸರಿ ಮಾಡಲು ಸಮರ್ಥರು ಎಂದು ಪ್ರಕಾಶ್ ರಾಜ್ ಹೇಳಿದರು.
