ಗಾಂಜಾ ಮಾರಾಟ ಮಾಡಲು ಬಂದವ ಅರೆಸ್ಟ್

ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರಕಡ ಗ್ರಾಮದ ಪಡುಶೆಡ್ಡೆ ಕಡೆಗೆ ಹೋಗುವ ಕಾಂಕ್ರಿಟ್ ರಸ್ತೆಯಲ್ಲಿ ಆಪಾದಿತ ಯುವಕನಾದ ಸುಹಾನ್ ಎಸ್.ಪೂಜಾರಿ( 23 ವರ್ಷ) ಎಂಬಾತನು ಗಾಂಜಾ ಮಾದಕ ಪದಾರ್ಥವನ್ನು ಸ್ಕೂಟರ್ ನಲ್ಲಿರಿಸಿ ಮಾರಾಟ ಮಾಡಲು ಬಂದವನನ್ನು ಪೊಲೀಸರು ವಶಕ್ಕೆ ಪಡೆದು, ಆಪಾದಿತನು ಮಾರಾಟ ಮಾಡಲು ತಂದಿದ್ದ ಖಾಕಿ ಬಣ್ಣದ ಪ್ಯಾಕೇಟ್ ನಲಿದ್ದ 1 ಕೆ.ಜಿ 990 ಗ್ರಾಂ ಗಾಂಜಾವನ್ನು, ಕೃತ್ಯಕ್ಕೆ ಬಳಸಿದ ಮೋಬೈಲ್ ಪೋನ್ ಹಾಗೂ ಸ್ಕೂಟರನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿ ಕೊಂಡಿದ್ದು, ಸದ್ರಿ ಸೊತ್ತುಗಳ ಒಟ್ಟು ಮೌಲ್ಯ: 76,000- ರೂ ಆಗಬಹುದು ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಗುರುರಾಜ್ ರವರು ಕೇಸು ದಾಖಲಿಸಿಕೊಂಡಿರುತ್ತಾರೆ.
ಮಂಗಳೂರು ನಗರದ ಮಾನ್ಯ ಪೊಲೀಸ್ಆಯುಕ್ತರ ಮಾರ್ಗದರ್ಶನದಂತೆ ಈ ಕಾರ್ಯಾಚರಣೆಯನ್ನು ಮಾನ್ಯ ಉಪ ಪೊಲೀಸ್ ಆಯುಕ್ತರಾದ ಆಯುಕ್ತರಾದ (ಕಾ&ಸು) ಮತು (ಅಪರಾಧ ಮತು ಸಂಚಾರ) ರವರ ನಿರ್ದೇಶನದಂತೆ ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಉಪ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಕಾವೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಗುರುರಾಜ್ ಮತು ಪಿ.ಎಸ್.ಐ ಗಳಾದ ರಘು ನಾಯಕ್ , ರೇವಣಸಿದ್ದಪ್ಪ ಜಿ ಮತ್ತು ಹೆಡ್ ಕಾಸ್ಟೇಬಲ್ : ಸಂತೋಷ್ ಸಿ ಜಿ. ಸಂಭಾಜಿ ಕದಂ, ಮೋಹನ್ ದಾಸ್ ಕೊಟ್ಯಾನ್, ಕಾನ್ ಸ್ಟೇಬಲ್ ಗಳಾದ: ಶ್ರೀಧರ್, ಮಲ್ಲಣ್ಣ ಗೌಡ, ರಾಜೇಸಾಬ್ ,ಲತೇಶ ರವರ ತಂಡ ಪ್ರಕರಣವನ್ನು ಪತ್ತೆ ಮಾಡಿರುತ್ತಾರೆ