ರಾಜ್ಯ ಹೆದ್ದಾರಿಯಲ್ಲಿ ಟಿಪ್ಪರ್ ಡಿಕ್ಕಿ ಹೊಡೆದು ಕಾರಿನಲ್ಲಿದ್ದವರ ಪೈಕಿ ಓರ್ವ ಮೃತ ಪಟ್ಟರೆ ಉಳಿದವರು ಗಂಭೀರ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.ಮೃತರನ್ನು ಮೂಡುಬಿದಿರೆ ಸಮೀಪದ ಬೆಳುವಾಯಿ ನಿವಾಸಿ ರಾಮಣ್ಣ ಎಂದು ಗುರುತಿಸಲಾಗಿದೆ. ಐಕಳ ಕಡೆಯಿಂದ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಮೂರುಕಾವೇರಿ ಸಮೀಪದ ಮಾರಿಗುಡಿ ಬಳಿ ಕಾರ್ನಾಡ್ ಕಡೆಯಿಂದ
ಬಿಎನ್‍ಐ ಇನ್‍ಸ್ಪೈಯರ್ ಚಾಪ್ಟರ್ ವತಿಯಿಂದ ಮಂಗಳೂರು ನಗರದಾದ್ಯಂತ ಸೇವ್ ಟ್ರಿ ಸೇವ್ ಲೈಫ್ ಅಭಿಯಾನದ ಮೂಲಕ ವನಮಹೋತ್ಸವ ಕಾರ್ಯಕ್ರಮvu ಆಗಸ್ಟ್ 10ರಂದು ಬೆಳಿಗ್ಗೆ 11.30ಕ್ಕೆ ಮಣ್ಣಗುಡ್ಡೆಯ ವರ್ಟೆಕ್ಸ್ ಮ್ಯಾನೇಜ್ ಮಾರ್ಕೆಟ್‍ಸ್ಪೇಸ್‍ನಲ್ಲಿ ನಡೆಯಲಿದೆ.
ಸವಣೂರು : ತೆಂಗಿನ ಮರ ಹತ್ತಿ ತೆಂಗಿನಕಾಯಿ ಕೀಳುವ ಕಾಯಕದಲ್ಲಿ ಖ್ಯಾತಿ ಪಡೆದಿದ್ದ ಸುಚಿತ್ರ (30) ರವರು ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಘಟನೆ ಸವಣೂರು ಸಮೀಪದ ಪುಣ್ಚಪ್ಪಾಡಿ ಗ್ರಾಮದಲ್ಲಿ ನಡೆದಿದೆ.ಪ್ರಮೋದ್ ಬೊಳ್ಳಾಜೆಯವರ ಪತ್ನಿಯಾಗಿದ್ದ ಸುಚಿತ್ರ ರವರು ತೆಂಗಿನ ಮರ ಹತ್ತಿ ತೆಂಗಿನಕಾಯಿ ಕೀಳುವ ಕಾಯಕದಲ್ಲಿ ಖ್ಯಾತಿ ಪಡೆದಿದ್ದರು.ಸುಚಿತ್ರ ರವರ ಈ ಕಾಯಕಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿತ್ತು.ಮೃತರು ಪತಿ,
ಮಂಗಳೂರು: ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ವಿಚಾರಣೆ ಸಮಯ ಹಾಜರಾಗದೇ ಸುಮಾರು ಒಂದೂವರೆ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯೋರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ಸುರತ್ಕಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಬಂಧಿತ ಮಂಗಳೂರು ಮೆನ್ನಬೆಟ್ಟು ಗ್ರಾಮದ ಮೊಹಮ್ಮದ್ ನೌಷದ್ ಯಾನೆ ಉಲ್ಲಂಜೆ ನೌಷದ್(28). ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದೀಪಕ್ ರಾವ್ ಕೊಲೆ ಪ್ರಕರಣ ಸೇರಿದಂತೆ 4
ಬಂಟ್ವಾಳ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಇದರ 5 ಮಂದಿ ನೌಕರರು ಸ್ವಾರ್ಥ ಸಾಧನೆಗಾಗಿ ಸಂಘದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿಕೊಂಡು ಸಂಘ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸುಳ್ಳು ದಾಖಲೆ ಸೃಷ್ಟಿಸಿ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡಲು ಸುಳ್ಳು ದೂರು ನೀಡಿರುವ ಇವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ನೌಕರರ ಸಂಘದಿಂದ ಮನವಿ ಸಲ್ಲಿಸಿದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಶಾಖೆಯ ವತಿಯಿಂದ
ತಾನು ಯಾರೆಂದು ಅರಿತು ಬಾಳಿದಾಗ ಅದು ನಿಜವಾದ ಬದುಕಾಗುತ್ತದೆ. ನಮ್ಮೊಳಗಿನ ಕೆಟ್ಟದ್ದನ್ನು ಬಿಡಬೇಕು. ಸಮಾಜದ ಋಣ ನಮ್ಮ ಮೇಲಿದೆ. ಅದನ್ನು ತೀರಿಸುವ ಕೆಲಸವಾಗಬೇಕು. ಹಿರಿಯರಿಗೆ ಗೌರವ ಕೊಡುವ ಮನಸ್ಸು ನಮ್ಮದಾಗಬೇಕು. ಸನಾತನವನ್ನು ಮರೆಯದಿರೋಣ. ಹಿರಿಯರನ್ನು ಮರೆತರೆ ಅಪಾಯ ಖಂಡಿತ. ಜನ್ಮದಿನೋತ್ಸವದ ಆಚರಣೆ ರಾಷ್ಟ್ರೋತ್ತಾನಕ್ಕೆ ಮುನ್ನುಡಿ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಆ.8ರಂದು ಒಡಿಯೂರು ಶ್ರೀ
ಮೂಡುಬಿದಿರೆ: ಚೀನಾದ ಚೆಂಗ್ಡುವಿನಲ್ಲಿ ನಡೆದ ಜಾಗತಿಕ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ ಲಾಂಗ್‍ಜಂಪ್‍ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾ ದತ್ತು ಯೋಜನೆ ಕ್ರೀಡಾಪಟು ಭವಾನಿ ಯಾದವ್ ಭಗವತಿ ಮೈಲುಗಲ್ಲು ಸಾಧಿಸಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ. ಅವರು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ‘ಭವಾನಿ ಯಾದವ್ ಆಳ್ವಾಸ್
ಬೈಂದೂರು ತಾಲೂಕಿನ ಹಳ್ಳಿಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಬಾಳು ಕಟ್ಟಿನಾಡಿ ಚಕ್ರಾ ನದಿಗೆ ಅಡ್ಡಲಾಗಿ ಸೇತುವೆ ಕಾಮಗಾರಿ ಕೆಲಸ ನಡೆಯುತ್ತಿದ್ದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಪರಿಶೀಲನೆ ನಡೆಸಿದರು. ಹೊಳೆಯ ಪಕ್ಕದ ಜನರ ಬದುಕಿಗೆ ಹಲವು ವರ್ಷಗಳ ಕಾಲ ಸಂಕಷ್ಟದ ಸ್ಥಿತಿಯಿತ್ತು. ಶಾಲಾ ಮಕ್ಕಳು, ಹಳ್ಳಿಯ ನಾಗರಿಕರು, ಊರಿನ ಗ್ರಾಮಸ್ಥರು ಯಾವುದೇ ಕೆಲಸಕ್ಕಾದರೂ ಸುಮಾರು 5ರಿಂದ6 ಕಿ.ಮೀ ನಡೆದು ಅಪಾಯಕಾರಿ ಮರದ ಸೇತುವೆಯನ್ನು ದಾಟಿ ಬರಬೇಕಾದ ಕಠಿಣ
ಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಇದರ 5 ಮಂದಿ ನೌಕರರು ಸ್ವಾರ್ಥ ಸಾಧನೆಗಾಗಿ ಸಂಘದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿಕೊಂಡು ಸಂಘ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸುಳ್ಳು ದಾಖಲೆ ಸೃಷ್ಟಿಸಿ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡಲು ಸುಳ್ಳು ದೂರು ನೀಡಿರುವ ಇವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ನೌಕರರ ಸಂಘದಿಂದ ಮನವಿ ಸಲ್ಲಿಸಿದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಶಾಖೆಯ ವತಿಯಿಂದ
ಬೆಂಗ್ರೆ: ಬೇಂಗ್ರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಎಸ್.ಐ.ಓ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಬೆಂಗ್ರೆಯ ಶಾಲೆಯ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಶಾಲೆಯ ಸುತ್ತಮುತ್ತಲಿನ ಜನರು ಮತ್ತು ಆ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಪೆÇೀಷಕರು ಭಾಗವಹಿಸಿ ತಮ್ಮ ಮಕ್ಕಳ ಶೈಕ್ಷಣಿಕ ಹಕ್ಕಿನ ಲಭಿಸುವಿಕೆಗೆ ಎಸ್.ಐ.ಓ ಸಂಘಟನೆಯೊಂದಿಗೆ ಜೊತೆಗೂಡಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ




























