ಮೂಡುಬಿದಿರೆ: ಮೆಕ್ಕಾ ಮದೀನಕ್ಕೆ ಯಾತ್ರೆಗೆ ತೆರಳಿದ್ದ ಇಲ್ಲಿನ ಕೊಡಂಗಲ್ಲು ನಿವಾಸಿ ಶನಿವಾರ ಹ್ರದಯಾಘಾತಕ್ಕೊಳಗಾಗಿ ಸಾವನಪ್ಪಿದ ಘಟನೆ ನಡೆದಿದೆ.ಮೃತ ವ್ಯಕ್ತಿ ಕೊಡಂಗಲ್ಲು ನಿವಾಸಿ ಹಾಮ್ಮದ್(73)ಎಂದು ತಿಳಿದು ಬಂದಿದೆ. ಇವರು ಎರಡು ವಾರಗಳ ಹಿಂದೆ ತನ್ನ ಕುಟುಂಬಿಕರ ಜತೆ ಮೆಕ್ಕಾ ಮತ್ತು ಮದೀನ ಕ್ಷೇತ್ರಕ್ಕೆ ಯಾತ್ರೆ ಹೊರಟಿದ್ದರು. ಪುಣ್ಯ ಕ್ಷೇತ್ರಕ್ಕೆ ಭೇಟಿ
ತಲಪಾಡಿ ಗ್ರಾಮ ಪಂಚಾಯಿತಿನಲ್ಲಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಎಸ್‍ಡಿಪಿಐ ಅಭ್ಯರ್ಥಿಗಳನ್ನು ಬೆಂಬಲಿಸಿದ ಇಬ್ಬರು ಬಿಜೆಪಿ ಬೆಂಬಲಿತ ಸದಸ್ಯರನ್ನು ಜಿಲ್ಲಾಧ್ಯಕ್ಷರ ಆದೇಶದಂತೆ ತಕ್ಷಣದಿಂದ ಪಕ್ಷದ ಚಟುವಟಿಕೆಗಳಿಂದ ಉಚ್ಛಾಟಿಸಲಾಗುವುದು ಹಾಗೂ ಮುಂದಿನ ಆರು ವರ್ಷಗಳ ಕಾಲ ಪಕ್ಷಕ್ಕೆ ಬರದಂತೆ ನಿರ್ಭಂಧಿಸಲಾಗುವುದು ಎಂದು ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಹೇಳಿದ್ದಾರೆ. ಅವರು ಪಂಡಿತ್ ಹೌಸ್‍ನ ಚುನಾವಣಾ
ಶಿಕ್ಷಕರಿಗೆ ಕನ್ನಡ ಸಾಹಿತ್ಯ ಚರಿತ್ರೆ, ಭಾರತದ ಎಲ್ಲ ಮತಧರ್ಮಗಳು, ಸಾಹಿತ್ಯ, ಸಂಗೀತಾದಿ ಸಾಂಸ್ಕೃತಿಕ ಪರಿಚಯ ಒಂದಿಷ್ಟು ಇರಬೇಕಾಗಿದೆ; ಶರೀರ ಭಾಷೆಯನ್ನೂ ಬೋಧನೆಯ ಮಾಧ್ಯಮವಾಗಿ ಬಳಸುವ, ನೋಟ್ಸ್ ಕೊಡದೆ ಸ್ವಂತಿಕೆ ಬೆಳೆಸುವ, ಪಾಠ ಬಿಟ್ಟು ಅನ್ಯ ಲೇಖನಗಳ ಕಾಪಿ ಬರೆಸುವ, ಉಚ್ಚಾರ ಹೇಳಿಕೊಡುವ, ಪಾಠವನ್ನು ವಿಷಯದ ದೃಷ್ಟಿಗಿಂತಲೂ ಭಾಷೆಯ ದೃಷ್ಟಿಯಿಂದ ನೋಡುವ , ಕಲಿಸುವ ಸಾಮರ್ಥ್ಯವನ್ನು ಹೊಂದಿರಬೇಕಾಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ
ಉಳ್ಳಾಲ: ಮಂಗಳೂರು ವಿವಿ ಇತಿಹಾಸ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಉದಯ ಬಾರ್ಕೂರು(59) ಅವರು ಶುಕ್ರವಾರ ಸಂಜೆ ನಿಧನರಾದರು.ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಳೆದ 34 ವರ್ಷಗಳಿಂದ(1989)ರಿಂದ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಅವರು ವಿಭಾಗದ ಅಧ್ಯಕ್ಷರಾಗಿ, ವಿವಿಯ ಸಿಂಡಿಕೇಟ್ ಸದಸ್ಯರಾಗಿ, ಕಲಾ ವಿಭಾಗದ ಡೀನ್ ಆಗಿ ವಿವಿಧ ಜವಬ್ಧಾರಿಗಳನ್ನು ನಿರ್ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾಲಯದ
ನಗರದ ಮಿಲಾಗ್ರಿಸ್ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಹಿರಿಯ ಪತ್ರಕರ್ತ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟನೆ ನೆರವೇರಿಸಿದರು. ಉದ್ಘಾಟನೆ ನೆರವೇರಿಸಿದ ತಾರಾನಾಥ್ ಗಟ್ಟಿ ಅವರು ಮಾತನಾಡಿ, ಜಾತಿ ಮತ ಪಂಥಗಳ ಬೇಧ ಭಾವವನ್ನು ಮರೆತು ಸಮಾಜ ಸೇವೆಯನ್ನು ಮಾಡಲು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇ.
ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಔಷಧೀಯ ಸಸ್ಯಗಳ ಪ್ರಾಧಿಕಾರ ಸಹಯೋಗದಲ್ಲಿ ಕಲ್ಲಬೆಟ್ಟು ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆ ಆವರಣದಲ್ಲಿ ಗುರುವಾರ ‘ಶಾಲಾ ಔಷಧಿ ವನ’ವನ್ನು ಸಸ್ಯಗಳ ನಾಟಿ ಮೂಲಕ ಉದ್ಘಾಟಿಸಲಾಯಿತು. ಪುರಸಭಾ ಸದಸ್ಯ ಜೊಸ್ಸಿ ಮಿನೇಜಸ್ ಹಾಗೂ ಸುರೇಶ್ ಕೋಟ್ಯಾನ್ ಸಸಿ ನೆಡುವ ಮೂಲಕ ಉದ್ಘಾಟಿಸಿದರು. ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ದ್ರವ್ಯಗುಣ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಸುಬ್ರಹ್ಮಣ್ಯ
ಉಳ್ಳಾಲ: ತಲಪಾಡಿ ಗ್ರಾ.ಪಂ ಎರಡನೇ ಅವಧಿಗೆ ಎಸ್ ಡಿಪಿಐ ಬೆಂಬಲಿತ ಅಧ್ಯಕ್ಷ ಟಿ.ಇಸ್ಮಾಯಿಲ್ ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಪುಷ್ಪಾವತಿ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಬೆಂಬಲಿತರು ಎಸ್ ಡಿಪಿಐ ಬೆಂಬಲಿತರಿಗೆ ಬೆಂಬಲಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಿರೀಕ್ಷಿತ ಅಭ್ಯರ್ಥಿಯಾಗಿದ್ದ ಸತ್ಯರಾಜ್ ಪರಾಭವಗೊಂಡಿದ್ದಾರೆ. ಗ್ರಾಮದ ಆಡಳಿತದಲ್ಲಿ ಒಟ್ಟು 24 ವಾರ್ಡುಗಳ ಸದಸ್ಯರ ಪೈಕಿ 13 ಬಿಜೆಪಿ
ಅಂತರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ವತಿಯಿಂದ ದಕ್ಷಿಣ ಕೊರಿಯಾದ ಸಿಮನ್ ಗಾಮ್ ದ್ವೀಪದಲ್ಲಿ ನಡೆಯುತ್ತಿರುವ ವಿಶ್ವ ಜಾಂಬೂರಿಯಲ್ಲಿ ಮಂಗಳವಾರ ದ.ಕ ಜಿಲ್ಲೆಯ 25 ವಿದ್ಯಾರ್ಥಿಗಳ ತಂಡ ಕರಾವಳಿಯ ಯಕ್ಷಗಾನ ಹಾಗೂ ಹುಲಿವೇಷ ಪ್ರದರ್ಶನವನ್ನು ನೀಡುವ ಮೂಲಕ ಜನಮನ ಗೆದ್ದಿದೆ ಅಲ್ಲದೆ ಭರತನಾಟ್ಯ, ಕೇರಳದ ಮೋಹಿನಿಯಾಟ್ಯಂ, ಒರಿಸ್ಸಾದ ಒಡಿಸ್ಸಿ, ಗುಜರಾತ್‍ನ ಬಾಂಗ್ಡಾ, ರಾಜಸ್ಥಾನದ ಗಾರ್ಭಾ ನೃತ್ಯ, ಮಣಿಪುರದ ಸ್ಟಿಕ್ ಡ್ಯಾನ್ಸ್ ಸೊಬಗನ್ನು ಕಂಡು ವಿದೇಶೀಯರು
ಮೂಡುಬಿದಿರೆ: ಕಳೆದ 40 ವರ್ಷಗಳಿಂದ ಕಾರ್ಯಚರಿಸುತ್ತಾ ಜನರಿಗೆ ಸದಭಿರುಚಿಯ ಸಿನೆಮಾಗಳನ್ನು ನೀಡಿ ರಂಜಿಸುತ್ತಿದ್ದ ಮೂಡುಬಿದಿರೆಯ ಅಮರಶ್ರೀ ಚಿತ್ರಮಂದಿರಕ್ಕೆ ಬೀಗಮುದ್ರೆ ಬಿದ್ದಿದೆ. ಮಾಜಿ ಸಚಿವ ದಿ.ಕೆ.ಅಮರನಾಥ ಶೆಟ್ಟಿ ಅವರ ಮಗಳು ಅಮರಶ್ರೀ ಅವರ ಹೆಸರಿನಲ್ಲಿರುವ ಈ ಸಿನೆಮಾ ಮಂದಿರವನ್ನು ಕಳೆದ 10 ವರ್ಷಗಳಿಂದ ಕಾರ್ಕಳದ ಜೆರಾಲ್ಡ್ ಕುಟಿನ್ಹಾ ಅವರು ನಡೆಸುತ್ತಿದ್ದರು. ಕಳೆದ 2021ಕ್ಕೆ ಪರವಾನಿಗೆಯ ಅವಧಿಯು ಮುಕ್ತಾಯಗೊಂಡಿರುತ್ತದೆ. ನಂತರ ನವೀಕರಣಗೊಳಿಸದೆ
ಬ್ರಹ್ಮಾವರ ರೋಟರಿ ರೋಯಲ್, ಕೃಷಿ ಕೇಂದ್ರ ಬ್ರಹ್ಮಾವರ, ತೋಟಗಾರಿಕಾ ಇಲಾಖೆ, ಇವರ ವತಿಯಿಂದ ರಾಷ್ಟ್ರೀಯ ಹೆದ್ದಾರಿ 66 ನಿರ್ಮಲ ಪ್ರೌಢಶಾಲಾ ಆವರಣದಲ್ಲಿ ಅಗಸ್ಟ್ 12 ಮತ್ತು 13ರಂದು ಸಸ್ಯ ಮೇಳ ಮತ್ತು ಆಹಾರೋತ್ಸವ ಜರುಗಲಿದೆ ಎಂದು ರೋಟರಿ ರೋಯಲ್ ಅಧ್ಯಕ್ಷ ಅಭಿರಾಮ್ ನಾಯಕ್ ಕಾರ್ಯಕ್ರಮದ ಆವರಣದಲ್ಲಿ ಹೇಳಿದರು. ಉಡುಪಿ ಶಾಸಕ ಯಶ್‍ಪಾಲ್ ಸುವರ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದು ರೋಟರಿ , ಕೃಷಿ ವಿಜ್ಞಾನಿಗಳು ಇನ್ನಿತರ ಗಣ್ಯರ ಸಮ್ಮುಖದಲ್ಲಿ ಸಸ್ಯ ಮತ್ತು




























