ಬೈಂದೂರು – ಕಟ್ಟನಾಡಿ ಚಕ್ರಾನದಿಗೆ ಅಡ್ಡಲಾಗಿ ಸೇತುವೆ ಕಾಮಗಾರಿ

ಬೈಂದೂರು ತಾಲೂಕಿನ ಹಳ್ಳಿಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಬಾಳು ಕಟ್ಟಿನಾಡಿ ಚಕ್ರಾ ನದಿಗೆ ಅಡ್ಡಲಾಗಿ ಸೇತುವೆ ಕಾಮಗಾರಿ ಕೆಲಸ ನಡೆಯುತ್ತಿದ್ದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಪರಿಶೀಲನೆ ನಡೆಸಿದರು.
ಹೊಳೆಯ ಪಕ್ಕದ ಜನರ ಬದುಕಿಗೆ ಹಲವು ವರ್ಷಗಳ ಕಾಲ ಸಂಕಷ್ಟದ ಸ್ಥಿತಿಯಿತ್ತು. ಶಾಲಾ ಮಕ್ಕಳು, ಹಳ್ಳಿಯ ನಾಗರಿಕರು, ಊರಿನ ಗ್ರಾಮಸ್ಥರು ಯಾವುದೇ ಕೆಲಸಕ್ಕಾದರೂ ಸುಮಾರು 5ರಿಂದ6 ಕಿ.ಮೀ ನಡೆದು ಅಪಾಯಕಾರಿ ಮರದ ಸೇತುವೆಯನ್ನು ದಾಟಿ ಬರಬೇಕಾದ ಕಠಿಣ ಪರಿಸ್ಥಿತಿ ಒದಗಿಬಂದಿತ್ತು. ಅಂತಹ ಸಂದರ್ಭದಲ್ಲಿ ಹಲವು ವರ್ಷ ಬೇಡಿಕೆ ಕಳೆದ ವರ್ಷ ಈಡೇರಿz.É ಸುಮಾರು 3.75 ಕೋಟಿಯ ಹಣ ಮಂಜುರಾಗಿದ್ದು ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ.

ಸೇತುವೆ ಮೂಲಕವಾಗಿ ಸಾಗಿ ಬರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಸಬಾಳು ಶಾಲೆಗೆ ಆಗಮಿಸಿ ಮಕ್ಕಳಿಗಾಗುವ ತೊಂದರೆಗೆ ಧ್ವನಿಯಾಗಿ ಕೂಡಲೇ ಸರಿಪಡಿದುವುದಾಗಿ ತಿಳಿಸಿದರು ಶಾಲೆಯ ಪ್ರಗತಿಗೆ ಮೆಚ್ಚುಗೆ ವ್ಯಕ್ತಪಡಿಸಿ.
ಈ ಸಂದರ್ಭದಲ್ಲಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ,ಹಳ್ಳಿಹೊಳೆ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಪ್ರದೀಪ್ ಕೊಠಾರಿ. ಕಾಮಗಾರಿಯ ಇಂಜಿನಿಯರ್ ಹಾಗೂ ಮಂಡಲ ಅಧ್ಯಕ್ಷರಾದ ಶ್ರೀ ದೀಪಕ್ ಕುಮಾರ್ ಶೆಟ್ಟಿಯವರು ಉಪಸ್ಥಿತರಿದ್ದರು.
