ಕಾರ್ಕಳ: ಯಕ್ಷಗಾನವೆಂಬುದು ಕರಾವಳಿಯ ಮಣ್ಣಿನ ಕಲೆಯಾಗಿದೆ ಈ ಕಲೆಯು ಸ್ವರ್ಗವನ್ನ ಭೂಮಿಯಲ್ಲಿ ಭಾಸವಾಗುವಂತೆ ಸ್ಪರ್ಶವಿಲ್ಲದೆ ನಿಭಾಯಿಸುವಂತೆ ಮಾಡುತ್ತದೆ ಕಲಾವಿದನ ಬದುಕಿಗೆ ಕಲಾ ಸಂಘಟಕರು ಕಲಾ ಕಲಾಭಿಮಾನಿಗಳು ಜೀವ ತುಂಬುವವರು ಆಗಿರುತ್ತಾರೆ. ಎಂದು ಕಟೀಲ್‍ನ ಹರಿನಾರಾಯಣ ಅಸ್ರಣ್ಣರು ಹೇಳಿದರು. ಅವರು ನಾರಾವಿಯ ಧರ್ಮ ಶ್ರೀ ಸಭಾಭವನದ ಬಲಿಪ ಪ್ರಸಾದ ಭಟ್
ಕೊಂಕಣಿ ಭಾಶಾ ಮಂಡಲ್ ಕರ್ನಾಟಕ ಇದರ ಆಶ್ರಯದಲ್ಲಿ ಕೊಂಕಣಿಯನ್ನು ಸಂವಿಧಾನದ ಎಂಟನೆಯ ಪರಿಚ್ಛೇದದ ಅಡಿಯಲ್ಲಿ ಸೇರಿಸಿದ ಮೂವತ್ತು ವರ್ಷದ ಸಂಭ್ರಮಾಚರಣೆಯು ನಗರದ ಡೊನ್ ಬೊಸ್ಕೊಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟನೆ ಮಾಡಿದ ಸಿಎ ಎಸ್ ಎಸ್ ನಾಯಕ್ ಅವರು ಮಾತನಾಡುತ್ತಾ, ತಾಯಿಯ ಮಾತಿನ ಮಹತ್ವವು ಜೀವನದಲ್ಲಿ ಯಾವುದೇ ದಿನ ಕಡಿಮೆ ಆಗದು.ಹಾಗೆನೇ ಮಾತೃ ಭಾಷೆಯ ಮಹತ್ವ ಕೂಡಾ ಆಗಿದೆ. ಇತರ ಯಾವುದೇ ಭಾಷೆಗಳು ವ್ಯಾವಹಾರಿಕವಾಗಿ ಕಲಿತರೂ ಮಾತೃಭಾಷೆಯ ಜಾಗವು ನಮ್ಮ
ದಿನಾಂಕ 28-08-2022 ರ ಅದಿತ್ಯವಾರ ಬೆಳಗ್ಗೆ 10-30ಗಂಟೆಗೆ ಪುತ್ತೂರಿನ ಸೈನಿಕಭವನದಲ್ಲಿ ಒಂದು ದಿನದ ಪೂರ್ಣ ಜಿಲ್ಲಾ ಕಾರ್ಯಕಾರಿಣಿಯನ್ನು ಜಿಲ್ಲಾಧ್ಯಕ್ಷರಾದ ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಸಮಸ್ಯೆಗಳನ್ನು ಎದುರಿಸಲು ಅನುಸರಿಸಬೇಕಾದ ಕ್ರಮಗಳು ಹಾಗೂ ಕಾರ್ಯಯೋಜನೆಗಳ ಕುರಿತು ಸಲಹೆ ಸೂಚನೆಗಳನ್ನು ನೀಡಿದರು. ಕಾರ್ಯಕಾರಿಣಿಯಲ್ಲಿ ಜಿಲ್ಲಾ ಉಪಾಧ್ಯಕ್ಷರುಗಳಾದ ದಿವಾಕರ ಪೈ
ತುಳು ಭಾಷೆಯ ಮೇಲೆ ಪ್ರೀತಿ ಇಟ್ಟು ಸಿನಿಮಾ ಮಾಡುತ್ತಿದ್ದೇವೆ. ಆದರೆ ಲಾಕ್‍ಡೌನ್ ಸಂದರ್ಭದಲ್ಲಿ ಬೊಳ್ಳಿ ಮೂವಿಸ್ ಬ್ಯಾನರ್ ಅಡಿಯಲ್ಲಿ ಅಬತರ ಸಿನಿಮಾವನ್ನು ಕಷ್ಟಪಟ್ಟು ಚಿತ್ರೀಕರಣ ಮಾಡಿದ್ದೇವೆ. ಇದೀಗ ಸಾಮಾಜಿಕ ಜಾಲತಾಣದ ಮೂಲಕ ಕೆಲವೊಬ್ಬರು ಬ್ಯಾಡ್ ಕಮೆಂಟ್‍ಗಳನ್ನು ಹಾಕಿ ಸಿನಿಮಾ ನೋಡದ ಹಾಗೆ ಮಾಡುತ್ತಿರುವುದು ಬೇಸರದ ಸಂಗತಿ ಎಂದು ನಟ ,ನಿರ್ದೇಶಕ ಅರ್ಜುನ್ ಕಾಪಿಕಾಡ್ ಹೇಳಿದರು.ಕಳೆದ ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಕಲಾವಿದರು
ಎಲ್ಲೆಲ್ಲೋ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಿದ್ದತೆಗಳು ಆಗುತ್ತಿದಂತೆ, ಅಮಲು ಪದಾರ್ಥ ಸೇವಿಸುವವರಿಗೆ ಹಾಗೂ ಸಂಘಟಕರಿಗೆ ಪೊಲೀಸ್ ಎಚ್ಚರಿಕೆ ನೀಡಿದ್ದು, ಯಾವುದೇ ಸಂದರ್ಭದಲ್ಲಿ ಅಮಲು ಪದಾರ್ಥ ಸೇವಿಸಿ ಕಾರ್ಯಕ್ರಮಕ್ಕೆ ಭಾಗವಹಿಸುವಂತಿಲ್ಲ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಪೂವಯ್ಯ ನೀಡಿದ್ದಾರೆ. ಗಣೇಶೋತ್ಸವ ಹಿನ್ನಲೆಯಲ್ಲಿ ಪಡುಬಿದ್ರಿ ಠಾಣೆಯಲ್ಲಿ ಕರೆದ ಸರ್ವದರ್ಮಿಯರ ಸಭೆಯಲ್ಲಿ
ದುಬೈನ ಲ್ಯಾಂಡ್‍ಮಾರ್ಕ್ ಗ್ರೂಪ್ ಆರಂಭಿಸಿದ ಈಜಿ ಬೈ ಸ್ಟೋರ್ಸ್ ದೇಶದ ಮೆಟ್ರೋ ಮತ್ತು ನಾನ್-ಮೆಟ್ರೊ ಮಾರುಕಟ್ಟೆಗಳು ಸೇರಿದಂತೆ ಕೇರಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಒರಿಸ್ಸಾ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಕರ್ನಾಟಕ, ಉತ್ತರಖಂಡ ಮತ್ತು ಮಧ್ಯ ಪ್ರದೇಶದಲ್ಲಿ ತನ್ನ ಛಾಪನ್ನು ಮೂಡಿಸಿದೆ. ಈಜಿ ಬೈ, ಕರ್ನಾಟಕದಾದ್ಯಂತ ಒಟ್ಟು 25 ಸ್ಟೋರ್ಸ್‍ಗಳನ್ನ ಹೊಂದಿದೆ. ಇದೀಗ ನೂತನವಾಗಿ ಉಡುಪಿ ಜಿಲ್ಲೆಯ ಮಣಿಪಾಲದ ಲಕ್ಷ್ಮೀಂದ್ರ ನಗರದಲ್ಲಿ
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ 2022-23 ನೇ ಸಾಲಿನ ಕರ್ನಾಟಕ ಕಲಾಶ್ರೀ ಗೌರವ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದೆ, ಸ್ಯಾಕ್ಸೋಪೋನ್ ವಾದಕ ಡಾ.ಪಿ.ಕೆ. ದಾಮೋದರ ಪುತ್ತೂರು ಹಾಗೂ 18 ಜನ ಕಲಾವಿದರು ಇತರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಅನೂರು ಅನಂತ ಕೃಷ್ಣ ಶರ್ಮ , ಈ ಬಾರಿ ಕಲಾಶ್ರೀ ಪ್ರಶಸ್ತಿ ನೀಡಲಾಗುತ್ತಿದು ಪುರಸ್ಕೃತರಿಗೆ 50 ಸಾವಿರ ರೂ,ವಾರ್ಷಿಕ ಪ್ರಶಸ್ತಿ 25 ಸಾವಿರ ರೂ.
ವಿಟ್ಲ: ಸೋಣ ಅಮವಾಸ್ಯೆಯ ದಿನದಿಂದ ಬಾದ್ರಪದ ಶುಕ್ಲ ಚೌತಿ ಹಬ್ಬದ ದಿನದವರೆಗೆ ಸುಳ್ಳ ಮಲೆ ತೀರ್ಥ ಸ್ನಾನಕ್ಕೆ ಪೂರ್ವಭಾವಿಯಾಗಿ ಬಿದಿರಿನ ಕೇರ್ಪು ( ಏಣಿ) ಇಡುವ ಸಂಪ್ರದಾಯ ನಡೆಯಿತು. ಅನಾಧಿಕಾಲದಿಂದ ನಡೆದು ಬಂದ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು. ನಮ್ಮ ತುಳುನಾಡಿನಲ್ಲಿ ಅತ್ಯಂತ ಅಪರೂಪದ ವಿಶಿಷ್ಟ ತೀರ್ಥ ಕ್ಷೇತ್ರ ಎನಿಸಿದ ಐತಿಹಾಸಿಕ ಧಾರ್ಮಿಕ ಹಿನ್ನೆಲೆಯುಳ್ಳ ಸುಳ್ಳಮಲೆ ಗುಹಾ ತೀರ್ಥಕ್ಕೆ ಪ್ರಾರ್ಥನೆ ಸಲ್ಲಿಸಿ,ಕೇರ್ಪು ಇಟ್ಟು
ಮೂಡುಬಿದಿರೆ : ಗಣೇಶನ ಹಬ್ಬ ಹಾಗೂ ತೆನೆ ಹಬ್ಬದ ಸಂದರ್ಭಗಳಲ್ಲಿ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಕಬ್ಬಿಗೆ ಸಕತ್ ಬೇಡಿಕೆ ಇರುತ್ತದೆ. ಕಳೆದ ಎರಡು ವರ್ಷ ಕೋರೋನಾ ಕಾರಣದಿಂದ ಚೌತಿ ಮತ್ತು ತೆನೆ ಹಬ್ಬ ಸರಳವಾಗಿ ಆಚರಿಸಿದ ಕಾರಣ ಕಬ್ಬಿಗೆ ಬೇಡಿಕೆ ಇರಲಿಲ್ಲ. ಕೊರೋನಾ ಕಾರಣದಿಂದ ಸಂಕಷ್ಟಕೊಳಗಾದ ಕಬ್ಬು ಬೆಳೆದ ರೈತರ ಮೊಗದಲ್ಲಿ ಇದೀಗ ಈ ಬಾರಿ ಮಂದಹಾಸ ಮೂಡಿದೆ. ಕರಾವಳಿಯಲ್ಲಿ ಚೌತಿ ಹಬ್ಬಕ್ಕೆ ಪ್ರಮುಖವಾಗಿ ಕಬ್ಬು ಉಪಯೋಗಿಸುತ್ತಿದ್ದು ಮನೆ ಗಣಪನಿಗೆ ಅರ್ಪಿಸುವ
ಬಂಟ್ವಾಳ: ಮಂಚಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಕ್ಕಾಜೆಯಲ್ಲಿ ಸಂಜೆ ವೇಳೆ ತಳ್ಳುಗಾಡಿಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ರಾಮಕೃಷ್ಣ ಕಾಮತ್ ಎಂಬವರ ತಳ್ಳುಗಾಡಿಯನ್ನು ಪಂಚಾಯತಿ ಆಡಳಿತ ತೆರವುಗೊಳಿಸಿದ ಘಟನೆ ನಡೆದಿದ್ದು ಈ ಬಗ್ಗೆ ಪಂಚಾಯತಿಗೆ ದಂಡ ಪಾವತಿಸಿ ಗಾಡಿ ಬಿಡಿಸಿಕೊಂಡು ಬರಲು ಹೋಗಿ ವಾಪಸ್ಸು ಬರುತ್ತಿದ್ದ ವೇಳೆ ರಾಮಕೃಷ್ಣ ಕಾಮತ್ ಅವರು ಅಧಿಕ ರಕ್ತದೊತ್ತಡಕ್ಕೆ ಒಳಗಾಗಿ ಕುಸಿದು ಬಿದ್ದು ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಾದ ಘಟನೆ




























