ಮೀಯಪದವು: ಬದುಕು ಕಟ್ಟೋಣ ಗೆಳೆಯರ ಬಳಗದಿಂದ ಆರೋಗ್ಯ ತಪಾಸಣಾ ಶಿಬಿರ
ಬದುಕು ಕಟ್ಟೋಣ ಗೆಳೆಯರ ಬಳಗ ಎಂಬ ಸಾಮಾಜಿಕ ಕಳಕಳಿಯ ಸಂಸ್ಥೆಯ ವತಿಯಿಂದ ಪ್ರಾಣಮ್ ಭಂಡಾರಿ ದಡ್ಡಗಡಿ ಇವರ ಸ್ಮರಣಾರ್ಥ ಕೆಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಇವರ ಸಹಯೋಗದಲ್ಲಿ, ಶ್ರೀ ಅಯ್ಯಪ್ಪ ಭಜನಾ ಮಂದಿರ ಬಾಳಿಯೂರು ನಲ್ಲಿ ಅತ್ಯಾಪೂರ್ವ ಅರೋಗ್ಯ ತಪಾಸಣಾ ಶಿಬಿರವು ಯಶಸ್ವಿಯಾಗಿ ನಡೆಯಿತು.
ವಿವಿಧ ಗಣ್ಯರ ಸಮ್ಮುಖದಲ್ಲಿ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.
ಸುಮಾರು 160ಕ್ಕಿಂತಲೂ ಅಧಿಕ ಜನರು ಈ ಅರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆ ನಡೆಸಿ ಇದರ ಪ್ರಯೋಜನ ಪಡೆದರು. ಇನ್ನಷ್ಟು ಸಮಾಜಮುಖಿ ಚಟುವಟಿಕೆಯನ್ನು ಈ ಸಂಸ್ಥೆಯ ವತಿಯಿಂದ ಮಾಡುವಂತೆ ನಮ್ಮ ಆರಾಧ್ಯ ದೈವ ದೇವರುಗಳು ಅನುಗ್ರಹಿಸಲಿ ಎಂದು ಗಣ್ಯರು ಶುಭಹಾರೈಸಿದರು.
ಡಾ. ಜಯಪ್ರಕಾಶ ತೊಟ್ಟತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ದೇರಳಕಟ್ಟೆ ನಿಟ್ಟೆ ಅಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಮಂತ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಹರೀಶ್ ಶೆಟ್ಟಿ ಮಾಡ, ರಾಧಾಕೃಷ್ಣ ರೈ, ಬಾಲಕೃಷ್ಣ ಶೆಟ್ಟಿ, ಸುಬ್ಬಣ್ಣ ಶೆಟ್ಟಿ , ರಾಮಚಂದ್ರ ಪೂಜಾರಿ ಸುಣ್ಣಾರಬೀಡು, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಮತ್ತಿರರು ಉಪಸ್ಥಿತರಿದ್ದರು.