ಬೈಂದೂರು: ಪ್ರಧಾನಿ ಮೋದಿ ಹುಟ್ಟಿಹಬ್ಬದ ಪ್ರಯುಕ್ತ ಬಿಜೆಪಿಯಿಂದ ವಿವಿಧ ಕಾರ್ಯಕ್ರಮ
ಪ್ರಧಾನಿ ನರೇಂದ್ರ ಮೋದಿ ಅವರ 73ನೇ ಜನ್ಮದಿನದ ಪ್ರಯುಕ್ತ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಬಿಜೆಪಿ ಬೈಂದೂರು ಮಂಡಲ ವತಿಯಿಂದ ದೇಶದಾದ್ಯಂತ ನಡೆಯುತ್ತಿರುವ ಸೇವಾ ಪಾಕ್ಷಿಕ ದ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಬೈಂದೂರಿನ ಅಂಬಿಕಾ ಇಂಟರ್ನ್ಯಾಷನಲ್ ಹೋಟೆಲ್ ನ ಶಾರದಾ ಸಭಾಂಗಣದಲ್ಲಿ ನಡೆಯಿತು. ಚಿತ್ತೂರು ಮತ್ತು ತ್ರಾಸಿಯಲ್ಲಿ ಚಾ ಫೆ ಚರ್ಚಾ ಕಾರ್ಯಕ್ರಮವು ನಡೆಯಿತು.
ನಾವುಂದ ಗ್ರಾಮದ ಕಂತಿಹೊಂಡ ಸೇವಾಬಸ್ತಿಯ ಬಂಧುಗಳ ಮನೆಗೆ ಭೇಟಿ ನೀಡಿದ ಶಾಸಕರು ಅವರ ಕುಟುಂಬದ ಜೊತೆ ಭೋಜನ ಸ್ವೀಕರಿಸಿ ಕುಶಲೋಪರಿ ವಿಚಾರಿಸಿದರು.
ತ್ರಾಸಿಯ ಉದಯ ಖಾರ್ವಿ ಅವರ 4 ನೆ ವರ್ಷದ ಉಚಿತ ಆಟೋ ಸೇವೆಯನ್ನ ನೀಡಿದರು.
ಗಂಗೊಳ್ಳಿ ದಾಕುಹಿತ್ಲು ಬಂದಂತಹ ಎಲ್ಲಾ ಮಾತೇರಿಗೂ ಸ್ವತ ಶಾಸಕರೇ ಸಿಹಿ ತಿಂಡಿ ವಿತರಿಸಿದರು. ರಿಂಗ್ ರೋಡ್ ಮತ್ತು ವಿದ್ಯುತ್ ಟ್ರಾನ್ಸ್ಫರ್ಮೆರ್ ಸಮಸ್ಯೆ ಕುರಿತು ಸ್ಥಳೀಯ ಮೀನುಗಾರರ ಜೊತೆ ಚರ್ಚಿಸಿದರು.
ಉಪ್ರಳ್ಳಿ ಉಳ್ಳೂರು -11 ಮೂಡುಮಠದ ಶ್ರೀ ಕಾಳಿಕಾಂಬಾ ದೇವಾಸ್ಥಾನದಲ್ಲಿ ವಿಶ್ವಕರ್ಮ ಜಯಂತಿಯನ್ನು ಆಚರಿಸಿದರು. ಬೈಂದೂರ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಅಂಪಾರು ಮೂಡುಬಗೆ ಗ್ರಾಮ ಪಂಚಾಯತ್ ಡಾ. ಭೀಮ್‍ರಾವ್ ಅಂಬೇಡ್ಕರ್ ಸೇವಾ ಸಂಘದಿಂದ ನಿರ್ಮಿಸಿದ ನೂತನ ಅಂಬೇಡ್ಕರ್ ಭವನವನ್ನು ಶಾಸಕ ಗುರುರಾಜ್ ಗಂಟಿಹೊಳೆ ಅವರು ಉದ್ಘಾಟಿಸಿದರು.