ಬೈಂದೂರು :ಚಾಲಕ-ಮಾಲಕರ ಸಂಘದ ಉದ್ಘಾಟನಾ ಸಮಾರಂಭ

ಬೈಂದೂರು: ತಾಲೂಕು ರಿಕ್ಷಾ, ಟೆಂಪೋ, ಟ್ಯಾಕ್ಸಿ, ಚಾಲಕ ಹಾಗೂ ಮಾಲಕರ ಸಂಘ (ರಿ) ಉದ್ಘಾಟನಾ ಸಮಾರಂಭ ದೇವಕಿ ನಂದವನ ಪರಿಚಯ ಉಪ್ಪುಂದ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.. ಉದ್ಘಾಟನಾ ಸಮಾರಂಭ ಶ್ರೀ ಶ್ರೀ ಸತ್ಯ ಸ್ವರೂಪಾನಂದ ಸ್ವಾಮೀಜಿ ಏಳಜಿತ್ ಬೈಂದೂರು ಇವರ ದಿವ್ಯ ಹಸ್ತದಿಂದ ಉದ್ಘಾಟಿಸಲ್ಪಟ್ಟಿತು.

ಆಶೀರ್ವಚನದಲ್ಲಿ ಸ್ವಾಮೀಜಿಗಳು ಕರ್ತವ್ಯವೇ ಪೂಜೆ ,ಸಾರ್ವಜನಿಕ ಸೇವೆಯೇ ಯಜ್ಞ ಯಾಗಾದಿಗಳು ಸಂಸ್ಥೆ ನೂರಾರು ವರ್ಷ ಉಳಿದು ಬೆಳೆದು ತನ್ನೆಲ್ಲ ಆಶೋತ್ತರಗಳನ್ನು ನೆರವೇರಿಸಿಕೊಳ್ಳಲಿ ಎಂದು ಹರಸಿದರು. ಕಾರ್ಯಕ್ರಮದ ಅಧ್ಯಕ್ಷ ವಹಿಸಿದ ಶ್ರೀ ನವೀನಚಂದ್ರ ಉಪ್ಪುಂದ ರವರು ಸ್ವಾಗತಿಸಿ ತಾಲೂಕು ಸಂಘಟನೆಯ ಅವಶ್ಯಕತೆ, ಸಂಸ್ಥೆಯ ವಿವಿಧ ಯೋಜನೆ ಅಲ್ಲದೆ ವಿವಿಧ ಇಲಾಖೆ ಹಾಗೂ ಸರ್ಕಾರದೊಂದಿಗೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಂಸ್ಥೆ ಮುಂದೆ ನಿಂತು ಕೆಲಸ ಮಾಡುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀಧರ್ ಬೈಂದೂರು ಹಿರಿಯ ವಕೀಲರು ,ಶ್ರೀ ಬಾಬು ಶೆಟ್ಟಿ ತಗ್ಗರ್ಜಿ, ಶ್ರೀ ಪ್ರಣಯಕುಮಾರ್ ಶೆಟ್ಟಿ ಹಕ್ಲಾಡಿ, ಶ್ರೀ ಮುಡೂರ ಅಂಬಾಗಿಲು, ಶ್ರೀ ಯು ರಾಜೀವ ಭಟ್ ನಂದನವನ, ಶ್ರೀ ನಿತಿನ ನಾರಾಯಣ್ ಉದ್ಯಮಿ ಬೆಂಗಳೂರು ಮತ್ತಿತರರು ಉಪಸ್ಥಿತರಿದ್ದರು.