ಯುವ ಜನತೆಯ ಸಮಾಜ ಸೇವೆಯ ಚಿಂತನೆ ಶ್ಲಾಘನೀಯ: ವಂದನೀಯ ಪಾವ್ಲ್ ಸಿಕ್ವೇರ

ಭಾರತೀಯ ಕಥೊಲಿಕ ಯುವ ಸಂಚಲನ ಬಳಕುಂಜೆ ಘಟಕವು ತನ್ನ 50 ಸಂವತ್ಸರಗಳನ್ನು ಪೂರೈಸಿದ ಸವಿ ನೆನಪಿಗಾಗಿ, ಸಮಾಜಕ್ಕೆ ಕೊಡುಗೆಯಾಗಿ ಬಳಕುಂಜೆ ಗುತ್ತು ಧೂಮಾವತಿ ದ್ವಾರದ ಮುಂಭಾಗದಲ್ಲಿ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣದ ಉದ್ಘಾಟನಾ ಸಮಾರಂಭವು ಜೂನ್ 29ರಂದು ಬೆಳಿಗ್ಗೆ 9:15 ಕ್ಕೆ ಜರುಗಿತು.

ಈ ಪ್ರಯಾಣಿಕರ ತಂಗುದಾಣದ ಆಶೀರ್ವಚನವನ್ನು ಬಳಕುಂಜೆಯ ಸಂತ ಪೌಲರ ದೇವಾಲಯದ ಧರ್ಮಗುರುಗಳಾದ ವಂದನೀಯ ಪಾವ್ಲ್ ಸಿಕ್ವೇರಾರವರು ನೆರವೇರಿಸಿ, “ನಾವೆಲ್ಲರು ಇಲ್ಲಿ ಜಾತಿ-ಮತ-ಧರ್ಮವಿಲ್ಲದೆ ಒಗ್ಗೂಡಿ ಮಾನವೀಯತೆಯಿಂದ ಬಾಳಬೇಕು. ಯುವ ಜನರು ಸಮಾಜದ ಒಳಿತಿಗಾಗಿ ಯೋಜನೆಗಳನ್ನು ಜಾರಿಗೆ ತರುವುದರಿಂದ ನವ ಸಮಾಜ ನಿರ್ಮಾಣ ಸಾಧ್ಯ ” ಎಂದು ಹೇಳಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದೇಂದಡ್ಕ ಇಲ್ಲಿಯ ಶ್ರೀ ಸುಬ್ರಹ್ಮಣ್ಯ ಭಟ್ ರವರು ಹಾಗೂ ಬಳಕುಂಜೆ ಮಸೀದಿಯ ಮಹಮ್ಮದ್ ಶರೀಫ್ ಹನೀಫಿಯವರು ಉಪಸ್ಥಿತರಿದ್ದು, ಯುವಜನರ ಸೇವಾ ಕಾರ್ಯಗಳಿಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಸ್ಥಳ ದಾನ ನೀಡಿದ ದಿ| ರಾಧಮ್ಮ ಶೆಡ್ತಿ (ದಿ| ಸಂಕು ಅಜಿಲರ ಧರ್ಮಪತ್ನಿ) ಅವರ ಕುಟುಂಬಸ್ಥರಾದ ಶ್ರೀಮತಿ ಸುಹಾಸಿನಿ ಶೆಡ್ತಿ ಮತ್ತು ಶ್ರೀ ಪ್ರಸಾದ್ ಶೆಟ್ಟಿಯವರು ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು.

ತಂಗುದಾಣ ನಿರ್ಮಾಣಕ್ಕೆ ಸಹಕಾರ ನೀಡಿದ ಸರ್ವರನ್ನೂ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಬಳಕುಂಜೆ ಚರ್ಚ್ ಪಾಲನಾ ಸಮಿತಿಯ ಉಪಧ್ಯಕ್ಷರಾದ ಡಾ. ಫ್ರೀಡಾ ರೊಡ್ರಿಗಸ್, ಕಾರ್ಯದರ್ಶಿ ಶ್ರೀಮತಿ ನ್ಯಾನ್ಸಿ ಕರ್ಡೋಜಾ, ಸರ್ವ ಆಯೋಗಗಳ ಸಂಯೋಜಕರಾದ ಶ್ರೀಮತಿ ಲವೀನ ಸೆರಾವೊ, ಕು. ಮೆಲ್ರೀಡ ಜೇನ್ ರೊಡ್ರಿಗಸ್ ಹಾಗೂ ಇನ್ನಿತರು ಉಪಸ್ಥಿತರಿದ್ದರು.

ಐಸಿವೈಎಮ್ ಬಳ್ಕುಂಜೆ ಘಟಕದ ಅಧ್ಯಕ್ಷರಾದ ಕು. ನೆಲಿಶಾ ಲೋಬೊರವರು ನೆರೆದಿದ್ದ ಎಲ್ಲರನ್ನು ಸ್ವಾಗತಿಸಿ, ಕಾರ್ಯದರ್ಶಿಯಾದ ಕು. ನೇಹ ಸೆರಾವೊ ವಂದಿಸಿದರು. ಕು. ಜೊನಿಟಾ ಡಿಸೋಜ ರವರು ಕಾರ್ಯಕ್ರಮನ್ನು ನಿರೂಪಿಸಿದರು,

Related Posts

Leave a Reply

Your email address will not be published.