Bantwala : ವಾಣಿಜ್ಯ ಸಂಕೀರ್ಣದಿಂದ ಕೆಳಗೆ ಚಿಮ್ಮುತ್ತಿರುವ ಮಳೆ ನೀರು – ಪಾದಚಾರಿಗಳಿಗೆ ಸಮಸ್ಯೆ

ಬಂಟ್ವಾಳ: ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿರುವ ಪುರಸಭೆಯ ವಾಣಿಜ್ಯ ಸಂಕೀರ್ಣದ ಮುಂಭಾಗ ಖಾಸಗಿ ಬಸ್ಸುಗಳು ತಂಗುತ್ತವೆ. ಪ್ರಯಾಣಿಕರು ವಾಣಿಜ್ಯ ಕೇಂದ್ರದ ಅಂಗಡಿಗಳ ಮುಂಭಾಗದ ಪ್ಯಾಸೇಜ್ ನಲ್ಲಿ ನಿಲ್ಲುತ್ತಾರೆ. ಖಾಲಿ ಬಿಟ್ಟ ಕೋಣೆಯಲ್ಲಿ ಸೊಳ್ಳೆಗಳ ಸಾಮ್ರಾಜ್ಯ. ಅದು ಒಂದು ಭಾಗವಾದರೆ, ಇನ್ನೊಂದು ಸಮಸ್ಯೆ ಈ ಸಂಕೀರ್ಣದ ಹಿಂದೆ ಮತ್ತೊಂದು ವಾಣಿಜ್ಯ ಸಂಕೀರ್ಣವಿದೆ. ಇವೆರಡರ ಮಧ್ಯೆ ರಸ್ತೆಯೂ ಇದೆ. ಇಲ್ಲಿನ ಮಳಿಗೆಗಳಿಗೆ ನೂರಾರು ಮಂದಿ ನಿತ್ಯ ಓಡಾಡುತ್ತಾರೆ.

ಆದರೆ ವರ್ಷದ 365 ದಿನವೂ ಪ್ರಖರ ಬೆಳಕು ಇಲ್ಲದ ಈ ಓಣಿಯಂಥ ರಸ್ತೆಯಲ್ಲಿ ಮಳೆ ಬಂದರೆ ಮೇಲೆ ವಾಣಿಜ್ಯ ಸಂಕೀರ್ಣದಲ್ಲಿ ನೀರು ತುಂಬಿದರೆ, ಕೇಳುವುದೇ ಬೇಡ. ನೀರು ಧಾರಾಕಾರವಾಗಿ ಕೆಳಗೆ ಬೀಳುತ್ತದೆ. ಕೊಡೆ ಇಲ್ಲದಿದ್ದರೆ ನಡೆದುಕೊಂಡು ಹೋಗುವವನ ತಲೆ ಮೇಲೆ ಬೀಳುವುದು ಗ್ಯಾರಂಟಿ. ಈ ವಾಣಿಜ್ಯ ಸಂಕೀರ್ಣದ ಮೇಲ್ಭಾಗದಲ್ಲಿ ಸ್ವಿಮ್ಮಿಂಗ್ ಪೂಲ್ ನಂತೆ ನೀರು ತುಂಬಿಕೊಂಡಿದ್ದು, ಅಲ್ಲಿಂದ ಹೊರಚೆಲ್ಲಿದ ನೀರು ಜಲಪಾತದಂತೆ ಧುಮ್ಮಿಕ್ಕುತ್ತಿದೆ. ಸ್ಥಳೀಯ ವರ್ತಕರು, ಸಾರ್ವಜಕರು ಇದರಿಂದ ತೊಂದರೆಗೆ ಒಳಗಾಗಿದ್ದಾರೆ.

Related Posts

Leave a Reply

Your email address will not be published.