ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳದ 55ನೇ ಸಂಸ್ಥಾಪನಾ ದಿನ
ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಇದರ 55ನೇ ಸಂಸ್ಥಾಪನ ದಿನವನ್ನು ರೋಟರಿ ಕ್ಲಬ್ ಬಂಟ್ವಾಳದ ಸಭಾಂಗಣದಲ್ಲಿ ಆಚರಿಸಲಾಯಿತು.
ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಪ್ರಕಾಶ್ ಬಾಳಿಗ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಕಟಪೂರ್ವ ಜಿಲ್ಲಾ ಗವರ್ನರ್, ಕ್ಲಬ್‌ನ ಪೂರ್ವಾಧ್ಯಕ್ಷ ಎನ್.ಪ್ರಕಾಶ್ ಕಾರಂತ್ ಅನಿಸಿಕೆ ವ್ಯಕ್ತಪಡಿಸಿ 55 ವರ್ಷಗಳಲ್ಲಿ ರೋಟರಿ ಕ್ಲಬ್ ಬಂಟ್ವಾಳ ನಡೆದು ಬಂದ ಹಾದಿಯ್ನು ಅವಲೋಕನ ಮಾಡುವುದರ ಜೊತೆಗೆ ಕ್ಲಬ್‌ನ ಬೆಳವಣಿಗೆಗೆ ಸಹಕರಿಸಿದವರನ್ನು ಸ್ಮರಿಸಿಕೊಳ್ಳಬೇಕು ಎಂದರು.
ರೋಟರಿ ಸಹಾಯಕ ಗವರ್ನರ್ ಲೋರೆನ್ಸ್ ಗೋನ್ಸ್ವಾಲಿಸ್ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕ್ಲಬ್ ನಡೆದು ಬಂದ ಹಾದಿಯ ಸಿಂಹಾವಲೋಕನ ಮಾಡುವುದು ಉತ್ತಮವಾದ ಕಾರ್ಯ ಎಂದರು. ರೋಟರಿ ಕ್ಲಬ್ ಬಂಟ್ವಾಳ ಹಿರಿಯ ಕ್ಲಬ್ ಆಗಿದ್ದು ಈವರೆಗಿನ ಎಲ್ಲಾ ಪೂರ್ವಧ್ಯಕ್ಷರ ಪರಿಶ್ರಮದಿಂದ ಉತ್ತಮವಾಗಿ ನಡೆದುಕೊಂಡು ಬಂದಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ ಓಸಿಯಾನ 2024 ಪ್ರಶಸ್ತಿ ಮುಡುಗೇರಿಸಿಕೊಂಡಿರುವ ಮಂಗಳೂರಿನ ಇಷಿಕಾ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಇಷಿಕಾ ಶೆಟ್ಟಿ ಅವರು ಯುವ ಸಮುದಾಯ ಜಗತ್ತಿನ ಭವಿಷ್ಯವಾಗಿದ್ದು ಯುವ ಸಮುದಾಯಕ್ಕೆ ಸರಿಯಾದ ಮಾಗದರ್ಶನ ಸಿಕ್ಕಿದರೆ ಅವರು ದೇಶದ ಆಸ್ತಿಯಾಗುತ್ತಾರೆ ಎಂದರು. ರೋಟರಿ ಕ್ಲಬ್ ಬಂಟ್ವಾಳ ನನ್ನ ಸಾಧನೆಯನ್ನು ಗುರುತಿಸಿ ಗೌರಿವಿಸಿರುವುದು ಸಂತೋಷ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬಂಟ್ವಾಳದ ಪೂವಾಧ್ಯಕ್ಷರನ್ನು ಗೌರವಿಸಲಾಯಿತು. ಮನೋರಂಜನಾ ಆಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕೇಕ್ ತುಂಡರಿಸಿ ೫೫ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.
ವಲಯ ಲೆಫ್ಟಿನೆಂಟ್ ರವೀಂದ್ರ ದರ್ಬೆ, ಮಾತೃ ಘಟಕ ಮಂಗಳೂರು ರೋಟರಿ ಕ್ಲಬ್ ಅಧ್ಯಕ್ಷ ಕಿಶನ್, ಕ್ಲಬ್‌ನ ನಿಯೋಜಿತ ಅಧ್ಯಕ್ಷ ಬೇಬಿ ಕುಂದರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ವಸಂತ ಬಾಳಿಗ, ಬಿ.ರಾಮಚಂದ್ರ ರಾವ್, ಡಾ. ರಮೇಶಾನಂದ ಸೋಮಯಾಜಿ, ಅಶ್ವನಿ ಕುಮಾರ್ ರೈ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯದರ್ಶಿ ಸದಾಶಿವ ಬಾಳಿಗ ವರದಿ ವಾಚಿಸಿ, ವಂದಿಸಿದರು.