ಬಂಟ್ವಾಳದ ಮಿತ್ತನಡ್ಕಲ್ಲಿರುವ ಸರ್ಕಾರಿ ಶಾಲೆ : ಶಾಲೆಯತ್ತ ಮಕ್ಕಳನ್ನು ಆಕರ್ಷಿಸಲು ಆಟದ ಪಾರ್ಕ್

ಇಂಗ್ಲೀಷ್ ಮಾಧ್ಯಮ ಶಾಲೆಗಳ ಮೂಲಭೂತ ಸೌಲಭ್ಯ, ಶಿಕ್ಷಣ ಶೈಲಿಯಿಂದಾಗಿ ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಇದು ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯ ಕುಸಿತಕ್ಕೂ ಕಾರಣವಾಗಿದೆ. ಆದರೆ ಇಲ್ಲೊಂದು ಸರಕಾರಿ ಶಾಲೆಯ ಹಳೆ ವಿದ್ಯಾರ್ಥಿಗಳು ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಯೋಜನೆಯೊಂದನ್ನು ಹಾಕಿಕೊಂಡಿದ್ದಾರೆ. ಆ ಯೋಜನೆ ಏನು ಗೊತ್ತಾ? ನೀವೇ ನೋಡಿ.

ಇದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಬಂಟ್ವಾಳ ತಾಲೂಕಿನ ಗ್ರಾಮೀಣ ಪ್ರದೇಶವಾದ ಮಿತ್ತನಡ್ಕ ದಲ್ಲಿ ಈ ಶಾಲೆ ಇದೆ. 1943ರಲ್ಲಿ ಸ್ತಾಪನೆಗೊಂಡ ಈ ಶಾಲೆಗೆ 80 ವರ್ಷಗಳ ಇತಿಹಾಸವಿದೆ. ಈ ಶಾಲೆಯಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಇಂದು ಸಮಾಜದ ಅತ್ಯುನ್ನತ ಸ್ತರದಲ್ಲಿ ಇದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಂಗ್ಲಿಷ್ ಮಾಧ್ಯಮದ ಭರಾಟೆಯಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗತೊಡಗಿತ್ತು. ಅದಕ್ಕಾಗಿ ಮಕ್ಕಳನ್ನು ಶಾಲೆಯತ್ತ ಆಕರ್ಷಿಸಲು ಹಳೆ ವಿದ್ಯಾರ್ಥಿಗಳು ಹಾಕಿಕೊಂಡ ಯೋಜನೆಯೇ ಶಾಲೆಗೊಂದು ಸುಸಜ್ಜಿತ ಆಟದ ಪಾರ್ಕ್.

ಸಾಮಾನ್ಯವಾಗಿ ಸರಕಾರಿ ಶಾಲೆಗೆ ಬರುವುದು ಬಡ ಮಕ್ಕಳು. ಖಾಸಗಿ ಶಾಲೆಯಷ್ಟಲ್ಲದಿದ್ದರೂ, ಕನಿಷ್ಠ ಸೌಲಭ್ಯ ಒದಗಿಸಬೇಕಾಗಿ ಇಲ್ಲಿ ಈ ಪಾರ್ಕ್ ನಿರ್ಮಿಸಲಾಗಿದೆ. ಉಯ್ಯಾಲೆ, ಜಾರುಬಂಡಿ ಸಹಿತ ಕೆಲವು ಪರಿಕರಗಳನ್ನೊಳಗೊಂಡ ಈ ಪುಟ್ಟ ಪಾರ್ಕ್ ಮಕ್ಕಳಲ್ಲಿ ಸಂತಸ ಮೂಡಿಸಿದೆ

ದಾನಿಗಳ ಸಹಕಾರದಿಂದ ಸುಮಾರು1.75 ಲಕ್ಷ ರೂ ವೆಚ್ಚದ ಲ್ಲಿ ನಿರ್ಮಿಸಿದ ಈ ಪಾರ್ಕ್ ಮಕ್ಕಳಿಗೆ ಮನರಂಜನೆಗೆ ಕಾರಣವಾಗಿದೆ. ಮತ್ತಷ್ಟು ಶಾಲೆಗಳು ಇದೆ ರೀತಿ ಮಾಡಿದಲ್ಲಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಏರಬಹುದು

Related Posts

Leave a Reply

Your email address will not be published.