ಕುಡಿತದ ಮತ್ತಿನಲ್ಲಿ ತಮ್ಮನಿಂದಲೇ ಅಣ್ಣನ ಕೊಲೆ

ವಿಟ್ಲ: ಕುಡಿತದ ಮತ್ತಿನಲ್ಲಿ ತಮ್ಮನೋರ್ವ ಅಣ್ಣನನ್ನು ಹೊಡೆದು ಕೊಲೆ ನಡೆಸಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಟ್ಲ ಪಡ್ನೂರು ಗ್ರಾಮದ ಕೊಡಂಗೆ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದ್ದು, ಘಟನಾ ಸ್ಥಳಕ್ಕೆ ಎಎಸ್ಪಿ ಕುಮಾರ ಚಂದ್ರರವರು ಭೇಟಿ ನೀಡಿದ್ದಾರೆ.

ವಿಟ್ಲ ಪಡ್ನೂರು ಗ್ರಾಮದ ಕೊಡಂಗೆ ದಿ. ಸೀನಪ್ಪ ದೇವಾಡಿಗರವರ ಪುತ್ರ ಗಣೇಶ್ ಬಂಗೇರ(54) ಮೃತದುರ್ದೈವಿಯಾಗಿದ್ದಾರೆ. ಮೃತರ ಸಹೋದರ ಪದ್ಮನಾಭ ಬಂಗೇರ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಸಹೋದರರಿಬ್ಬರಿರೂ ತಾಯಿ ಕಮಲರವರೊಂದಿಗೆ ವಿಟ್ಲ ಪಡ್ನೂರು ಗ್ರಾಮದ ಕೊಡಂಗೆಯಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದರು. ಸೆ.13ರ ತಡರಾತ್ರಿ ಕುಡಿತದ ಮತ್ತಿನಲ್ಲಿ ತಮ್ಮ ಪದ್ಮನಾಭ ಬಂಗೇರ ಗಣೇಶ ಬಂಗೇರರವರನ್ನು ಯಾವುದೋ ಆಯುಧ ಬಳಸಿ ಕೊಲೆಗೈದಿರಯವುದಾಗಿ ಮೃತರ ಸಹೋದರಿ ಆರೋಪಿಸಿದ್ದಾರೆ. ಬೆಳಗ್ಗೆ ತಾಯಿ ಫೋನ್ ಮಾಡಿ ಗಣೇಶ ಬಂಗೇರರವರು ಮಲಗಿದಲ್ಲೇ ಇದ್ದಾರೆ ಮಾತನಾಡುವುದಿಲ್ಲ ಎಂದು ತಿಳಿಸಿದ್ದು, ಬಳಿಕ ನಾನು ಹಾಗೂ ಅಕ್ಕನ ಮಗ ತಾಯಿ ಮನೆಗೆ ಬಂದು ನೋಡಿದಾಗ ಅವರು ಮೃತಪಟ್ಟ ಸ್ಥಿತಿಯಲ್ಲಿದ್ದರು ಎಂದು ಮೃತರ ಸಹೋದರಿ ತಿಳಿಸಿದ್ದಾರೆ.

bantwala murder

ಸಹೋದರರಿಬ್ಬರು ವಿವಾಹಿತರಾಗಿದ್ದರೂ ಪತ್ನಿಯರನ್ನು ತೊರೆದಿದ್ದರೆಂದು ಸಂಬಂಧಿಕರು ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ರವರ ನೇತೃತ್ವದ ಪೊಲೀಸರ ತಂಡ ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದೆ. ಮೃತದೇಹವನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಎಎಸ್ಪಿ ಕುಮಾರ ಚಂದ್ರರವರು ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

URO HEALTH PLUS

Related Posts

Leave a Reply

Your email address will not be published.