BANTWALA : ನರಹರಿ ಪರ್ವತದಲ್ಲಿ ಆಟಿ ಅಮವಾಸ್ಯೆ
ಬಂಟ್ವಾಳ: ನರಹರಿ ಸದಾಶಿವ ದೇವಾಲಯದಲ್ಲಿ ಇಂದು ಆಟಿ ಅಮವಾಸ್ಯೆ, ತೀರ್ಥ ಸ್ನಾನ ನಡೆಯಿತು.
ಪ್ರತಿ ವರ್ಷವೂ ಆಟಿ ತಿಂಗಳಲ್ಲಿ ಬರುವ ಅಮವಾಸ್ಯೆ ದಿನದಂದು ಇಲ್ಲಿನ ತೀರ್ಥ ಸ್ನಾನ ನಡೆಯುತ್ತದೆ. ತೀರ್ಥ ಬಾವಿಯಲ್ಲಿ ತೀರ್ಥ ಸ್ನಾನ ಮಾಡಿದರೆ ಸಕಲ ಇಷ್ಟಾರ್ಥಗಳು ನೆರವೇರುವುದು ಎಂಬ ಪ್ರತೀತಿ ಇದೆ. ಇಂದು ಮುಂಜಾನೆಯಿಂದಲೇ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.