ಮಣಿಪುರದಲ್ಲಿ ನಡೆದ ಹಿಂಸಾಚಾರಕ್ಕೆ ಖಂಡನೆ : ಬಂಟ್ವಾಳದಲ್ಲಿ ಪ್ರತಿಭಟನೆ
ಬಂಟ್ವಾಳ: ಮಣಿಪುರದಲ್ಲಿ ನಡೆದ ಮಹಿಳೆಯರ ಮೇಲಿನ ದೌರ್ಜನ್ಯ, ಆಡಳಿತರೂಢ ಸರಕಾರದ ವೈಫಲ್ಯ ಹಾಗೂ ಮಣಿಪುರ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಒತ್ತಾಯಿಸಿ, ಕೇಂದ್ರ ಸರಕಾರದ ವಿರುದ್ಧ ಮಾಜಿ ಸಚಿವ ಬಿ. ರಮಾನಾಥ ರೈಯವರ ನೇತೃತ್ವದಲ್ಲಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ಬಿ.ಸಿ.ರೋಡಿಲ್ಲಿ ನಡೆಯಿತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಭೇಟಿ ಬಚಾವೋ ಭೇಟಿ ಪಡಾವೋ ಎಂದು ಹೇಳುವ ಪ್ರಧಾನ ನರೇಂದ್ರ ಮೋದಿ ವಿದೇಶ ಪ್ರವಾಸ ಮಾಡಿ ತನ್ನ ಹೆಗ್ಗಳಿಕೆಯನ್ನು ಪ್ರಚಾರ ಮಾಡುವ ಕೆಲಸ ಮಾಡಿದ್ದಾರೆಯೇ ಹೊರತು ಮಣಿಪುರಕ್ಕೆ ಹೋಗಿ ಅಲ್ಲಿನ ಅಶಾಂತಿಯನ್ನು ಶಮನ ಮಾಡುವ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು. ಮಣಿಪುರದಲ್ಲಿ ಈಗ ಒಂದು ಘಟನೆ ಬೆಳಕಿಗೆ ಬಂದಿದೆ, ಬೆಳಕಿಗೆ ಬಾರದ ಅದೆಷ್ಟೋ ಘಟನೆಗಳು ಅಲ್ಲಿ ನಡೆದಿರಬಹುದು ಎಂದು ಆತಂಕ ವ್ಯಕ್ತಪಡಿಸಿದ ಅವರು ಸಜೀವ ಸರಕಾರ ಈ ದೇಶದಲ್ಲಿ ಆಳ್ವಿಕೆ ಮಾಡುತ್ತಿದ್ದರೆ, ಪ್ರಧಾನಿಗೆ ಎದೆಗಾರಿಕೆ ಇದ್ದರೆ ಮಣಿಪುರ ರಾಜ್ಯದ ಮುಖ್ಯಮಂತ್ರಿಯನ್ನು ಉಚ್ಚಾಟನೆ ಮಾಡಿ ರಾಷ್ಟಪತಿ ಆಳ್ವಿಕೆಗೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಕೆಪಿಸಿಸಿ ಮಾಜಿ ಸದಸ್ಯ ಅಶ್ವನಿ ಕುಮಾರ್ ರೈ, ಕೆಪಿಸಿಸಿ ಸದಸ್ಯರಾದ ಪಿಯೂಸ್ ಎಲ್ ರೊಡ್ರಿಗಸ್, ಚಂದ್ರಪ್ರಕಾಶ ಶೆಟ್ಟಿ, ಎಂ. ಎಸ್. ಮಹಮ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ. ಪಕ್ಷದ ಪ್ರಮುಖರಾದ ಸದಾಶಿವ ಬಂಗೇರ, ಐಡಾ ಸುರೇಶ್, ಪೆÇ್ಲೀಸಿ ಡಿಸೋಜ, ಜಯಂತಿ ಪೂಜಾರಿ, ಮಲ್ಲಿಕಾ ಶೆಟ್ಟಿ, ಲವೀನಾ ವಿಲ್ಮಾ ಮೋರಸ್, ಕೆ.ಸಂಜೀವ ಪೂಜಾರಿ, ಲುಕ್ಮಾನ್, ಮಾಯಿಲಪ್ಪ ಸಾಲ್ಯಾನ್, ಲೋಲಾಕ್ಷ ಶೆಟ್ಟಿ, ಜೆಸಿಂತಾ ಡಿಸೋಜಾ, ಮಧುಸೂದನ್, ವೆಂಕಪ್ಪ ಪೂಜಾರಿ, ಸಿದ್ದಿಕ್ ಗುಡ್ಡೆಯಂಗಡಿ, ಸಂಪತ್ ಕುಮಾರ್ ಶೆಟ್ಟಿ ಅಬ್ಬಾಸ್ ಅಲಿ, ಸುರೇಶ್ ಕುಮಾರ್ ನಾವೂರು, ಚಿತ್ತರಂಜನ್ ಶೆಟ್ಟಿ, ಸುಭಾಶ್ಚಂದ್ರ ಶೆಟ್ಟಿ, ಪದ್ಮನಾಭ ರೈ, ಚಂದ್ರಶೇಖರ ಕರ್ಣ, ಇಬ್ರಾಹಿಂ ಕೈಲಾರ್, ಇಬ್ರಾಹಿಂ ನವಾಝ್, ಯೂಸುಫ್ ಕರಂದಾಡಿ, ವಾಸು ಪೂಜಾರಿ, ಬಿ. ಮೋಹನ್, ವಿಶ್ವನಾಥ ಬೆಳ್ಚಾಡ, ಗಿರೀಶ್ ಕುಮಾರ್ ಪೆರ್ವ, ಪ್ರವೀಣ್ ಬಿ. ಪರಮೇಶ್ವರ ಮೂಲ್ಯ ಮಹಮ್ಮದ್ ನಂದರಬೆಟ್ಟು, ಮಹಮ್ಮದ್ ನಂದಾವರ, ಶೋಭಾ ಶೆಟ್ಟಿ, ವಲಾರ ಮತ್ತಿತರರು ಉಪಸ್ಥಿತರಿದ್ದರು.