ಸಮಾಜಸೇವಕ ರಾಜಶೇಖರ್ ಹುಟ್ಟು ಹಬ್ಬ ಹಿನ್ನೆಲೆ – ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಬೇಲೂರು : ಕಾಂಗ್ರೆಸ್ ಮುಖಂಡ ಮತ್ತು ಸಮಾಜಸೇವಕ ಹಾಗೂ ಪುಷ್ಪಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ರಾಜಶೇಖರ್ ಅವರ ಜನ್ಮ ದಿನಾಚರಣೆ ಅಂಗವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಹಾಲು ಬ್ರೆಡ್ ಹಣ್ಣು ವಿತರಿಸಲಾಯಿತು. ಸಮಾಜ ಸೇವಕ ಗ್ರಾನೈಟ್ ರಾಜಶೇಖರ್ 59 ನೇ ಜನ್ಮ ದಿನದ ಅಂಗವಾಗಿ ಜಿಲ್ಲಾ ಸೇವಾದಳ ಯುವ ಬ್ರಿಗೇಡ್ ಹಾಗೂ ಅಭಿಮಾನಿಗಳಿಂದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಬ್ರಡ್ ಹಾಲೂ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸೇವಾದಳ ಯುವ ಬ್ರಿಗ್ರೇಡ್ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಪಾಲ್ಗೊಂಡು ತಾಲೂಕಿನಾದ್ಯಂತ ತಮ್ಮದೇ ಆದ ವರ್ಚಸ್ಸನ್ನು ಮೂಡಿಸಿದ್ದಾರೆ. ಮಧ್ಯಮ ವರ್ಗದಲ್ಲಿ ಹುಟ್ಟಿ ಬೆಳೆದು ಇಂದು ಗ್ರಾನೈಟ್ ಉದ್ಯಮದಲ್ಲಿ ಮಹತ್ತರ ಮೈಲಿಗಲ್ಲು ಸಾಧಿಸಿದ್ದು ಸಮಾಜ ಸೇವೆಗೆ ತಮ್ಮ ಆದಾಯದ ಬಹುಪಾಲನ್ನು ಮೀಸಲಿಟ್ಟಿರುವುದು ಶ್ಲಾಘನೀಯ ಎಂದರು.
ಗ್ರಾನೈಟ್ ರಾಜಶೇಖರ್ ಮಾತನಾಡಿ ತಾವು ಎಂದಿಗೂ ಅದ್ದೂರಿ ಜನ್ಮ ದಿನಾಚರಣೆಗೆ ಅತಿ ಹೆಚ್ಚಿನ ಮಹತ್ವ ನೀಡಿಲ್ಲ. ಆದರೆ ಇಂದು ತಮ್ಮ ಅಭಿಮಾನಿಗಳು ಹಾಗೂ ವಿವಿಧ ಸಮುದಾಯದ ಮುಖಂಡರು ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ಬ್ರೆಡ್ ಹಣ್ಣು ವಿತರಿಸುವ ಮೂಲಕ ಜನ್ಮ ದಿನಾಚರಣೆ ಆಚರಿಸಿಕೊಳ್ಳುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಬಿ ಎಲ್ ಧರ್ಮಗೌಡ, ವೀರಶೈವ ಸಂಘ ಯುವ ಘಟಕದ ಅಧ್ಯಕ್ಷ ಗೆಂಡೇಹಳ್ಳಿ ಚೇತನ್, ಮಲ್ಲೇಶ್ ದನ್ ಪಾಲ್ ಪ್ರತಾಪ್, ಅಸ್ಲಾಂ , ವೆಂಕಟೇಶ್, ತಾ.ಪಂ ಮಾಜಿ ಸದಸ್ಯ ಚಿಕ್ಕಬ್ಯಾಡಿಗೆರೆ ಮಂಜುನಾಥ್ , ಅಬ್ದುಲ್ ಸಮದ್, ವಿಜಯಕುಮಾರ್, ನವೀನ್, ಚಂದ್ರು ಸೇರಿದಂತೆ ಇತರರು ಹಾಜರಿದ್ದರು.