ಬೆಂಗಳೂರು : ಒಡೆಯರ್, ಹಂಸಲೇಖರಿಗೆ ಸಿಟಿ ಇನ್‌ಸ್ಟಿಟ್ಯೂಟ್ ಗೌರವ
ಬೆಂಗಳೂರಿನ ಸಿಟಿ ಇನ್‌ಸ್ಟಿಟ್ಯೂಟ್‌ನಲ್ಲಿ ಇದೇ ಪ್ರಜಾಪ್ರಭುತ್ವದ ದಿನ ಮಾದರಿ ಮೈಸೂರು ನಿರ್ಮಾಪಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮೂರ್ತಿ ತೆರದಿಡಲಾಗುತ್ತಿದೆ.
ಸಿಟಿ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಕೆ. ಸುಕುಮಾರ್ ಈ ಮಾಹಿತಿ ನೀಡಿದರು. ಅವರು ಮುಂದುವರಿದು ಕೃಷ್ಣರಾಜ ಒಡೆಯರ್ ಮತ್ತು ಸಂಗೀತ ದಿಗ್ಗಜ ಹಂಸಲೇಖ ಅವರಿಗೆ ಸಿಟಿ ಇನ್‌ಸ್ಟಿಟ್ಯೂಟ್‌ನ ಗೌರವ ಸದಸ್ಯತ್ವವನ್ನು ಗಣರಾಜ್ಯೋತ್ಸವದ ದಿನ ನೀಡಲಾಗುವುದು ಎಂದೂ ಅವರು ಹೇಳಿದರು.
ಗಾಂಧೀಜಿಯವರಿಂದ ರಾಜರ್ಷಿ ಎಂದು ಕರೆಸಿಕೊಂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಆಧುನಿಕ ಮೈಸೂರಿನ ಆದ್ಯರು ಎನಿಸಿದ್ದಾರೆ.