ಯತ್ನಾಳರಿಂದ ದೂರ ತಂತ್ರ ; ಪ್ರಧಾನಿ ಬಾಯಿ ತೆರೆಸಲು ಕೆರಳಿಸುವ ಹೇಳಿಕೆಗಳು
ಮಾಜೀ ಬಿಜಾಪುರ ಬದಲಾದ ವಿಜಯಪುರದ ಮೌಲ್ವಿ ಹಾಶ್ಮಿ ಅವರು ಪ್ರಧಾನಿ ಮೋದಿಯವರ ಜೊತೆಗೆ ಇರುವ ಫೆÇೀಟೋ ಹೊರ ಬೀಳುವುದರೊಂದಿಗೆ ಶಾಸಕ ಯತ್ನಾಳರ ಐಸಿಸ್ ಆರೋಪ ನೆಲನಡುಕ ತರುತ್ತಿದೆ. ಕೆಲವರ ಪ್ರಕಾರ ಬಿಜೆಪಿ ಶಾಸಕ ಯತ್ನಾಳರ ಮೂಲಕವೇ ಹಾಶ್ಮಿಯವರು ಪ್ರಧಾನಿ ಮೋದಿಯವರನ್ನು ಭೇಟಿ ಆಗಿದ್ದಾರೆ.
ಹಾಶ್ಮಿಯವರ ಕುಟುಂಬ ಮತ್ತು ಯತ್ನಾಳರ ಕುಟುಂಬಗಳು ವಿಜಯಪುರದಲ್ಲಿ ಬಿಡದಿ ಹೋಟೆಲಿನಿಂದ ಹಿಡಿದು ನಾನಾ ಉದ್ಯಮ ಪಾಲುದಾರಿಕೆ ಹೊಂದಿವೆ. ಅಧಿಕಾರದಲ್ಲಿ ಯಾರು ಇದ್ದರೂ ಹೋಗುವ ಮೌಲ್ವಿ ಹಾಶ್ಮಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿಯ ಎಲ್ಲರೂ ಬೇಕಾದವರೆ.
ಈಗ ಸಮಜಾಯಿಶಿಗೆ ಪ್ರಧಾನಿ ಮೋದಿಯವರು ಬಾಯಿ ಬಿಡಲೇಬೇಕಾದ ಸ್ಥಿತಿಯನ್ನು ಅವರ ಪಕ್ಷದ ಶಾಸಕ ಯತ್ನಾಳ್ ತಂದಿದ್ದಾರೆ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಗಲು 2,000 ಕೋಟಿ ರೂಪಾಯಿ ಕೊಡಬೇಕು ಎಂದು ಯತ್ನಾಳರು ಹಿಂದೆ ಮಾಜೀ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಟೀಕಿಸಿದ್ದರು. ಹಣ ಪಡೆದಿರದಿದ್ದರೆ ಬಿಜೆಪಿ ಹೈಕಮಾಂಡ್ ಆಗ ಯತ್ನಾಳ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಪ್ರಧಾನಿ ಮೋದಿಯವರು ಉತ್ತರಿಸುವಂತೆ ಕೋರಿದ್ದಾರೆ.