ರಾಷ್ಟೀಯ ಹೆದ್ದಾರಿ 66ರ ಇಕ್ಕೆಲಲ್ಲಿ ನಿಂತಿದ್ದ ಲಾರಿಗೆ ಟೂರಿಸ್ಟ್ ವಾಹನ ಡಿಕ್ಕಿ ಹೊಡೆದು ಪ್ರವಾಸಿಗರು ಗಾಯಗೊಂಡ ದುರ್ಘಟನೆ ಇಂದು ಮುಂಜಾನೆ ಉದ್ಯಾವರ ಪೆಟ್ರೋಲ್ ಬಂಕ್ ಬಳಿ ಸಂಭವಿಸಿದೆ. ಕೊಲ್ಲೂರಿನತ್ತ ತೆರಳುತ್ತಿದ್ದ ಹೊರ ರಾಜ್ಯದ ಟೂರಿಸ್ಟ ವಾಹನವು ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದ್ದು, ಮಹಿಳೆಯರೂ
ಟ್ಯಾಂಕರ್ ಬೈಕ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತ ಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಕೊಪ್ಪಲಂಗಡಿ ಬಳಿ ನಡೆದಿದೆ. ಮಂಗಳೂರುನಿಂದ ಉಡುಪಿ ಕಡೆ ಹೋಗತ್ತಿದ್ದ ಟ್ಯಾಂಕರ್ ಅದೇ ದಿಕ್ಕಿನಲ್ಲಿ ಹೋಗುತ್ತಿದ್ದ ಬೈಕ್ ನ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಗಂಭೀರ ಗಾಯಗೊಂಡು ಮೃತ ಪಟ್ಟಿದ್ದು ಹರೀಶ್ ಕುಮಾರ್(45) ಮೃತ ದುರ್ದೈವಿ. ಟ್ಯಾಂಕರ್ ಚಾಲಕನ ನಿರ್ಲಕ್ಷದ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗಿದೆ.ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿನ್ನಿಗೋಳಿ ಸಮೀಪದ ಎಳತ್ತೂರು ದೇವಸ್ಧಾನದ ದೇವರ ಗುಂಡಿ ಸಂಕದ ಬಳಿ ಚಿರತೆಯೊಂದು ಹುಲ್ಲು ಕತ್ತರಿಸುತ್ತಿದ್ದ ವ್ಯಕ್ತಿಯೋರ್ವರ ಮೇಲೆ ದಾಳಿ ನಡೆಸಿದ್ದು ಗಂಭೀರ ಗಾಯಗೊಂಡ ವ್ಯಕ್ತಿ ಕಟೀಲು ಆಸ್ಪತ್ರೆಗೆ ದಾಖಲಾಗಿದ್ದಾರೆ.ಗಾಯಗೊಂಡವರನ್ನು ಸ್ಧಳೀಯ ನಿವಾಸಿ ಲಿಗೋರಿ (58) ಎಂದು ಗುರುತಿಸಲಾಗಿದೆ.ಗಾಯಾಳು ಲಿಗೋರಿ ಹೈನುಗಾರರಾಗಿದ್ದು ದನಗಳಿಗೆ ಮೇವು ತರಲು ಹೋದಾಗ ಈ ಘಟನೆ ನಡೆದಿದ್ದು ಲಿಗೋರಿ ಅವರು ಧೈರ್ಯದಿಂದ ಚಿರತೆಯನ್ನು ಎದುರಿಸಿದ್ದು ಕೂಡಲೇ ಚಿರತೆ ಸ್ಧಳದಿಂದ
ದಿನಾಂಕ ಒಂದು 1-11-2024 ಶುಕ್ರವಾರದಂದು ಸೂರಜ್ ಪದವಿ ಪೂರ್ವ ಕಾಲೇಜು ಮತ್ತು ಜ್ಞಾನದೀಪ ಶಾಲೆ, ಮುಡಿಪು ಇಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು ಕನ್ನಡ ಭಾಷಾ ಉಪನ್ಯಾಸಕಿಯಾದ ಪ್ರತಿಕ್ಷ ಇವರು ಸ್ವಾಗತಿಸಿದರು ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು ನಂತರ ಧ್ವಜಾರೋಹಣವನ್ನು ಅಧ್ಯಕ್ಷರಾದ ಡಾ.ಮಂಜುನಾಥ್. ಎಸ್ .ರೇವಣ್ಕರ್ ನಡೆಸಿದರು ನಾಡಗೀತೆಯನ್ನು ಅಪೂರ್ವ ಲಕ್ಷ್ಮಿ ಮತ್ತು ತಂಡದವರು ಹಾಡಿದರು ನಂತರ ಕಾಲೇಜಿನ ವಿದ್ಯಾರ್ಥಿ
ಮೂಡುಬಿದಿರೆ : ಎರಡು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿರುವ ಮಹಿಳೆಯೋರ್ವರು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇಮಾರಿನಲ್ಲಿ ಶುಕ್ರವಾರ ಬೆಳಿಗ್ಗೆ ತಿಳಿದು ಬಂದಿದೆ.ಪಾಲಡ್ಕ ಗ್ರಾ.ಪಂ.ವ್ಯಾಪ್ತಿಯ ಕೇಮಾರು ನಡಿಹಿಲ್ಲು ನಿವಾಸಿ ಪ್ರಮೀಳಾ (36ವ)ಅವರು ಮಾಡಿಕೊಂಡ ಮಹಿಳೆ. ಈಕೆ ಗಂಡನನ್ನು ಕಳೆದುಕೊಂಡ ಮೇಲೆ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದರು. ಕುಡಿತದ ಚಟವನ್ನು ಹೊಂದಿದ್ದ ಪ್ರಮೀಳಾ ಅವರು ಜೀವನದಲ್ಲಿ ಜಿಗುಪ್ಸೆಗೊಂಡು
ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯ ಸಂಸ್ಥೆಯಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್ ದೀಪವನ್ನ ಬೆಳಗಿಸುವುದರ ಮೂಲಕ ದೀಪಾವಳಿ ಆಚರಣೆಗೆ ಚಾಲನೆ ನೀಡಿ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೂ ಸಿಬ್ಬಂದಿ ವರ್ಗದವರಿಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿದರು. ಕನ್ನಡ ಮಾಧ್ಯಮ ವಿಭಾಗದ ಮುಖ್ಯಗುರುಗಳಾದ ಶ್ರೀಧರ ಗೌಡ ದೀಪಾವಳಿ ಹಬ್ಬದ ಹಿನ್ನೆಲೆ, ಆಚರಣೆಯ ವಿಶೇಷತೆ ಹಾಗೂ ಅದರ
ಮುಂಬೈ: ತುಳುವರ ಮನಗೆದ್ದ ಗಮ್ಮತ್ ಕಲಾವಿದರ್ ಯುಎಇ ಹವ್ಯಾಸಿ ಕಲಾವಿದರ ತಂಡ ಪ್ರದರ್ಶಿಸಿದ “ವಾ ಗಳಿಗೆಡ್ ಪುಟುದನಾ” ನಾಟಕ
ಕೊಲ್ಲಿ ರಾಷ್ಟ್ರದ ತುಳು ರಂಗ ಭೂಮಿಯಲ್ಲಿ ಚೊಚ್ಚಲ ಪ್ರದರ್ಶನದಲ್ಲೇ ಜನಮನಸೂರೆಗೊಂಡ ಗಮ್ಮತ್ ಕಲಾವಿದರ “ವಾ ಗಳಿಗೆಡ್ ಪುಟುದನಾ” ತುಳು ಸಾಂಸಾರಿಕ ಹಾಸ್ಯಮಯ ನಾಟಕ – ಮುಂಬೈ ಮಹಾನಗರದಲ್ಲಿ ಭಾನುವಾರ 27 ಅಕ್ಟೋಬರ್ 2024 ರಂದು ತಮ್ಮ ದ್ವಿತೀಯ ಪ್ರದರ್ಶನದೊಂದಿಗೆ ಅಭೂತಪೂರ್ವ ಯಶಸ್ವಿ ದಾಖಲೆಗಳೊಂದಿಗೆ ಮುಂಬೈ ತುಳುವರ ಮನಗೆದ್ದು ಹೊಸ ಭಾಷ್ಯ ಬರೆಯಿತು. ಕನ್ನಡ ಸಂಘ ಸಯನ್ ಮುಂಬೈ ಆಶ್ರಯದಲ್ಲಿ, ಅಧ್ಯಕ್ಷ ರಾದ ಶ್ರೀ ಡಾ. ಎಂ.ಜೆ. ಪ್ರವೀಣ್ ಭಟ್
ಮುಡಿಪು: ಕೊಣಾಜೆ ಅಸೈಗೋಳಿ ನಿವಾಸಿ ನಾರಾಯಣ(54) ಎಂಬುವವರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.ಅಸೈಗೋಳಿಯಲ್ಲಿ ರಿಕ್ಷಾಚಾಲಕರಾಗಿದ್ದ ಅವರಿಗೆ ಪತ್ನಿ ಹಾಗೂ ಮೂವರು ಪುತ್ರಿಯರು ಇದ್ದಾರೆ. ಅವರು ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಇವರು ಕೆಲವು ತಿಂಗಳಷ್ಟೇ ಹೊಸ ರಿಕ್ಷಾ ಖರೀದಿಸಿದ್ದರು.ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಬೈ ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆಕ್ಕಡಿ, ಸಂಯುಕ್ತ ಕರ್ನಾಟಕ ಪುತ್ತೂರು ತಾಲೂಕು ವರದಿಗಾರ ಮೇಘ ಪಾಲೆತ್ತಡಿ ಸಹೋದರ ಪಾಲೆತ್ತಾಡಿ ನಿವಾಸಿ ರಾಮಣ್ಣ ಗೌಡ ಹೃದಯಾಘಾತದಿಂದ ನಿಧನ. ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಮಣಿಕ್ಕಳ ಪಾಲೆತ್ತಾಡಿ ನಿವಾಸಿ ರಾಮಣ್ಣ ಗೌಡ (69) ಅ.26 ರಂದು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಪ್ರಗತಿಪರ ಕೃಷಿಕರಾಗಿರುವ ರಾಮಣ್ಣ ಗೌಡರು ಮಧ್ಯಾಹ್ನದವರೆಗೂ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ಹಠಾತ್ತನೆ
ಮಂಗಳೂರು : ತನ್ನ ಕಲಾ ಶಿಸ್ತು ಹಾಗೂ ನೈಪುಣ್ಯತೆ ಮೂಲಕ ಬಂಟ್ವಾಳ ಜಯರಾಮ ಆಚಾರ್ಯ ಅವರು ಯಕ್ಷಗಾನದ ಹಾಸ್ಯ ಪಾತ್ರಕ್ಕೆ ಗೌರವ ತಂದವರು, ಸ್ವಾಭಿಮಾನಿಯಾಗಿದ್ದ ಜಯರಾಮ ಆಚಾರ್ಯ ಅವರ ಕುಟುಂಬದ ಜೊತೆಗೆ ಅಭಿಮಾನಿಗಳು ನಿಲ್ಲುವ ಅವಶ್ಯಕತೆ ಇದೆ ಎಂದು ಹಿರಿಯ ಯಕ್ಷಗಾನ ವಿಮರ್ಶಕ ಪ್ರಭಾಕರ ಜೋಶಿ ಅವರು ಹೇಳಿದರು.ಅವರು ಮಂಗಳೂರಿನ ಉರ್ವಾಸ್ಟೋರ್ ನ ತುಳು ಅಕಾಡೆಮಿಯ ತುಳು ಭವನದಲ್ಲಿ ಆಯೋಜಿಸಲಾದ ಜಯರಾಮ ಆಚಾರ್ಯರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಜಯರಾಮ ಆಚಾರ್ಯ




























