Home Blog Left SidebarPage 231

ಥಾಲೆಸೇಮಿಯಾ ಜಾಗ್ರತಿ ದಿನ…ಮೇ 8

ಥಾಲೆಸೇಮಿಯಾ ಜಾಗ್ರತಿ ದಿನ…ಮೇ ೮ ಥಾಲೆಸೇಮಿಯಾ ಎಂಬ ರೋಗ ರಕ್ತ ಸಂಬಂಧಿ ವಂಶವಾಹಕ ಖಾಯಿಲೆಯಾಗಿದ್ದು, ರೋಗಿಗಳಲ್ಲಿ ರಕ್ತದಲ್ಲಿರುವ ಆಮ್ಲಜನಕವನ್ನು ಜೀವಕೋಶಗಳಿಗೆ ತಲುಪಿಸುವ ‘ಹಿಮೋಗ್ಲೋಬಿನ್’ ಎಂಬ ಪ್ರೋಟಿನ್ ಸರಿಯಾಗಿ ಕಾರ್ಯನಿರ್ವವಹಿಸುದಿಲ್ಲ. ಈ ಹಿಮೋಗ್ಲೋಬಿನ್‍ನ ರಚನೆಯಲ್ಲಿ ಉಂಟಾಗುವ ದೋಷದಿಂದಾಗಿ ಅಸಹಜವಾದ ಹಿಮೋಗ್ಲೋಬಿನ್ ತನ್ನ ಕಾರ್ಯಕ್ಷಮತೆಯನ್ನು

ವಿಶ್ವ ಲೂಪಸ್ (ಚರ್ಮ ಕ್ಷಯ) ದಿನ ಮೇ 10

ಸಿಸ್ಟಮಿಕ್ ಲೂಪಸ್ ಎರಿಥೆಮಾಟೋಸಸ್ ಎಂಬ ಹೆಸರಿನಿಂದ ಕರೆಯಲ್ಪಡುವ ‘ಲೂಪಸ್ ರೋಗ’ ಒಂದು ರೀತಿಯಲ್ಲಿ ವಿಶಿಷ್ಟ ರೋಗವಾಗಿದ್ದು ಹಲವಾರು ಅಂಗಾಂಗಗಳನ್ನು ಸದ್ದಿಲ್ಲದೆ ಕಾಡುತ್ತದೆ. ಇದೊಂದು ಸಾಂಕ್ರಾಮಿಕವಲ್ಲದ, ದೀರ್ಘಕಾಲಿಕ ಕಾಯಿಲೆಯಾಗಿದ್ದು, ಚರ್ಮ, ಕೀಲುಗಳು, ಮೂತ್ರಪಿಂಡಗಳು, ಹೃದಯ, ಶ್ವಾಸಕೋಶಗಳು, ರಕ್ತನಾಳಗಳು ಮತ್ತು ಮೆದುಳು ಸೇರಿದಂತೆ ದೇಹದ ಹಲವಾರು ಭಾಗಗಳ ಮೇಲೆ ದಾಳಿ ಮಾಡುತ್ತದೆ. ಇದೊಂದು ಅಟೋ ಇಮ್ಯೂನ್ ಅಂದರೆ ಸ್ವಯಂ ನಿರೋಧಕ ಕಾಯಿಲೆಯಾಗಿರುತ್ತದೆ. ಈ

ವಿಶ್ವ ರೆಡ್ ಕ್ರಾಸ್ ದಿನ – ಮೇ 8

ಜಗತ್ತಿನಾದ್ಯಂತ ಮೇ 8 ರಂದು “ವಿಶ್ವ ರೆಡ್ ಕ್ರಾಸ್ ದಿನ” ಎಂದು ಆಚರಿಸಲಾಗುತ್ತದೆ. ಮಾನವೀಯತೆಯಿಂದ ಶಾಂತಿಯ ಕಡೆಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಿಸುವ ವಿಶ್ವ ರೆಡ್ ಕ್ರಾಸ್ ಸಂಸ್ಥೆಯನ್ನು ಹುಟ್ಟು ಹಾಕಿದ ಮಹಾನ್ ವ್ಯಕ್ತಿ ಶ್ರೀ ಹೆನ್ರಿ ಡ್ಯೂನಾಂಟ್ ಇವರು ಹುಟ್ಟಿದ ದಿನ ಮೇ 8. 1859 ರ ಜೂನ್ 24 ರಂದು ‘ಸಲ್ಫರಿನೋ’ ಕದನ ದ ಗಾಯಳುಗಳ ಮನ ಕಲುಕುವ ದೃಶ್ಯವನ್ನು ಕಂಡ ಶ್ರೀ ಹೆನ್ರಿ ಡ್ಯೂನಾಂಟ್ ಜನರಿಂದ ಜನರಿಗೆ ನೆರವು [ PಇಔPಐಇ ಊಇಐPIಓಉ […]

ಯಾರ ಆಡಳಿತದಲ್ಲಿ ಕಾಶ್ಮೀರ ಪಂಡಿತರ ಕೊಲೆ ಆಯಿತು?

ಪ್ರಧಾನಿ ಮೋದಿಯವರದು ಮಾತು ಮಾತ್ರ ಎಂದು ತಿಳಿದ ಬಳಿಕ ಕಳೆದ ತಿಂಗಳು ಕಾಶ್ಮೀರದ ಪಂಡಿತರ ಸಂಘಟನೆಯವರು ಕಾಂಗ್ರೆಸ್ಸಿಗೆ ಸೇರಿದರು. ಮಾಹಿತಿ ಹಕ್ಕಿನಡಿ ಶ್ರೀನಗರದ ಎಸ್‍ಪಿ ಕಚೇರಿ ನೀಡಿರುವ ಲೆಕ್ಕದಂತೆ ಕೊಲೆಯಾದ ಪಂಡಿತರ ಸಂಖ್ಯೆ 89 ಹಾಗೂ ಕೊಲೆಯಾದ ಇತರರ ಸಂಖ್ಯೆ 1,635. ಕಾಶ್ಮೀರಿ ಪಂಡಿತರ ಕೊಲೆ ನಡೆದುದು 1990ರ ಜನವರಿ ಫೆಬ್ರವರಿಯಲ್ಲಿ. ಆಗ ರಾಷ್ಟ್ರಪತಿ ಆಡಳಿತ ಇದ್ದ ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದವರು ಪಕ್ಕಾ ಆರೆಸ್ಸೆಸ್ ಜಗ್‍ಮೋಹನ್. ಇದೇ ವೇಳೆ

ಶತಮಾನದ ಬಳಿಕ ಪ್ಯಾರಿಸ್ ಒಲಿಂಪಿಕ್ಸ್ || Olympic Games Paris 2024

ಒಲಿಂಪಿಕ್ಸ್ ಬೆಳಕಿನ ಪಂಜು ಗ್ರೀಸಿನ ಅಥೆನ್ಸ್‍ನಿಂz 12 ದಿನಗಳ ಸಾಗರ ಪಯಣದ ಬಳಿಕ ಫ್ರಾನ್ಸಿನ ಮಾರ್ಸೆಲ್ ಬಂದರು ತಲುಪಿದೆ. ಸಾವಿರ ದೋಣಿಗಳು ಕವಾಯತಿನ ನಡುವೆ ಒಲಿಂಪಿಕ್ಸ್ ದೊಂದಿ ತಂದ 1896ರ ಬೆಲೆಮ್ ವ್ಯಾಪಾರಿ ಹಡಗನ್ನು ಮಾರ್ಸೆಲ್‍ನಲ್ಲಿ ಸ್ವಾಗತಿಸಲಾಯಿತು. ಕಳೆದ ಮೂರು ಒಲಿಂಪಿಕ್ಸ್‍ಗಳಲ್ಲಿ ಮಾರ್ಸೆಲ್‍ನವರೇ ಇದ್ದ ಫ್ರಾನ್ಸಿನ ಹುಟ್ಟು ಹಾಕು ತಂಡವು ಚಿನ್ನ ಗೆದ್ದಿತ್ತು. ಮಾಜೀ ಒಲಿಂಪಿಕ್ಸ್ ಆಟಗಾರ ಟೋನಿ ವಿಸ್ಟಾಂ ಸಕಲ ಸೇನಾ, ಪೋಲೀಸು, ನಾಗರಿಕ

ಬೆಳ್ತಂಗಡಿ: ಕೆ. ವಸಂತ ಬಂಗೇರರ ನಿಧನಕ್ಕೆ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಸಂತಾಪ

ಬೆಳ್ತಂಗಡಿ: ಗ್ರಾಮೀಣ ಪರಿಸರದ ಓರ್ವ ವ್ಯಕ್ತಿ ಸ್ವಪ್ರಯತ್ನದಿಂದ, ಸಾಮಾಜಿಕ ಸೇವೆಯಿಂದ ಜನ ಸಂಘಟನೆಯಿಂದ ಜನಪ್ರಿಯರಾಗಿ, ರಾಜಕೀಯದ ಗಣ್ಯ ವ್ಯಕ್ತಿಯಾಗಿದ್ದ ಮಾಜಿ ಶಾಸಕ ವಸಂತ ಬಂಗೇರ ಅವರ ನಿಧನ ತೀವ್ರ ದುಃಖ ತಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಕಂಬನಿ ಮಿಡಿದಿದ್ದಾರೆ.ಜನನಿಷ್ಠ ರಾಜಕಾರಣಿ, ಸ್ನೇಹ ಜೀವಿ, ಸಮರ್ಥ ಕೆಲಸಗಾರ, ಹೋರಾಟಗಾರ, ಶಿಕ್ಷಣ ಪ್ರೇಮಿ, ದೂರದೃಷ್ಟಿಯ ರಾಜಕಾರಣಿಯಾಗಿದ್ದ ಅವರು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಐದು

ಬೆಳ್ತಂಗಡಿ: ಕೆ. ವಸಂತ ಬಂಗೇರರ ನಿಧನಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ‌ ಸಂತಾಪ

ಬೆಳ್ತಂಗಡಿ: ಹಿರಿಯ ರಾಜಕಾರಣಿ ಮಾಜಿ ಶಾಸಕ ಶ್ರೀ ಕೆ ವಸಂತ ಬಂಗೇರರ ನಿಧನಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ‌ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಪ್ರಮುಖ ಮೂರು ರಾಜಕೀಯ ಪಕ್ಷಗಳಡಿ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾದ ಜಿಲ್ಲೆಯ ಏಕೈಕ ರಾಜಕಾರಣಿ ವಸಂತ ಬಂಗೇರರಾಗಿದ್ದು, ಪಕ್ಷಾತೀತವಾಗಿ ಜನತೆ ಅವರನ್ನು ಬೆಂಬಲಿಸಿದುದರ ನಿದರ್ಶನವಾಗಿದೆ. ಪ್ರಜಾಪ್ರಭುತ್ವಕ್ಕೆ ಕರಾಳವಾಗಿ ಜಾರಿಯಾಗಿದ್ದ ತುರ್ತುಪರಿಸ್ಥಿತಿ ವಿರುದ್ಧ ವಸಂತ ಬಂಗೇರರ ಹೋರಾಟ,

ಬೆಳ್ತಂಗಡಿ : ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ ಬಂಗೇರ (79ವ) ಮೇ 8ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕೇದೆ ಸುಬ್ಬ ಪೂಜಾರಿ – ದೇವಕಿ ದಂಪತಿಯ ಪ್ರಥಮ ಪುತ್ರನಾಗಿ 1946ರ ಜನವರಿ 15ರಂದು ಜನಿಸಿದ್ದ ಅವರ ಆರೋಗ್ಯ ಇತ್ತೀಚೆಗೆ ತೀವ್ರವಾಗಿ ಹದಗೆಟ್ಟಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ

ಶಿಬಾಜೆ: ಅಜಿರಡ್ಕದಲ್ಲಿ ಕಾಡಾನೆ ದಾಳಿ; ಕೃಷಿ ನಾಶ

ಕೊಕ್ಕಡದ ಶಿಬಾಜೆ ಗ್ರಾಮದ ಅಜಿರಡ್ಕ ಶ್ರೀಧರ ರಾವ್ ರವರ ತೋಟಕ್ಕೆ ತಡರಾತ್ರಿ ಕಾಡಾನೆ ದಾಳಿ ಮಾಡಿ ಪಸಲಿಗೆ ಬರುವ ತೆಂಗಿನ ಗಿಡ, ಕೊಕ್ಕೋ ಗಿಡ, ಬಾಳೆಗಿಡ ಅಪಾರ ಪ್ರಮಾಣದಲ್ಲಿ ನಾಶ ಮಾಡಿದೆ. ಈ ಹಿಂದೆಯೂ ಇವರ ತೋಟಕ್ಕೆ ಧಾಳಿ ಮಾಡಿದ್ದು ಕೃಷಿ ಹಾನಿ ಉಂಟು ಮಾಡಿತ್ತು, ಮೇ 6ರಂದು ಶಿಶಿಲ ಗ್ರಾಮದ ಕಳ್ಳಾಜೆ ದಿವಾಕರ ಗೌಡ ಇವರ ತೋಟಕ್ಕೂ ಧಾಳಿ ಮಾಡಿರುವ ಬಗ್ಗೆ ಮಾಹಿತಿ ಲಭಿಸಿದೆ. ವರದಿ: ಪ್ರಶಾಂತ್ ನೆಲ್ಯಾಡಿ

ಮೇ 9ರಂದು ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟ

2023-24ನೇ ಪ್ರಸಕ್ತ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಮೇ 9ರಂದು ಪ್ರಕಟಗೊಳ್ಳಲಿದೆ. ಮಾರ್ಚ್ 25 ರಿಂದ ಎಪ್ರಿಲ್ 06ರವರೆಗೆ ಎಸೆಸೆಲ್ಸಿ ಪರೀಕ್ಷೆಯನ್ನು ನಡೆಸಲಾಗಿತ್ತು. ಈಗ ಎಲ್ಲ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ತಿಳಿಸಿದೆ.